ಸ್ಥಳೀಯ ಬ್ಯಾಂಕ್ ಅಧಿಕಾರಿ(LBO) ನೇಮಕಾತಿ

ಯಾವುದೇ ಪದವಿ ಅರ್ಹತೆ | ಕರ್ನಾಟಕಕ್ಕೆ 60 ಸ್ಥಾನ ಮೀಸಲು

Published on:

ಪಂಜಾಬ್ ಮತ್ತು ಸಿಂಧ್ ಬ್ಯಾಂಕಿನಲ್ಲಿ 1000 ಸ್ಥಳೀಯ ಬ್ಯಾಂಕ್ ಅಧಿಕಾರಿ(LBO) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ತನ್ನ ಬ್ಯಾಂಕಿನ ಶಾಖೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 20ರವರೆಗೆ ಕಾಲಾವಕಾಶವಿದ್ದು, ಬ್ಯಾಂಕಿಂಗ್ ವಲಯದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಪದವೀಧರ ಉದ್ಯೋಗಾಕಾಂಕ್ಷಿಗಳು ಐಬಿಪಿಎಸ್‌ನ‌ ಅಧಿಕೃತ ಜಾಲತಾಣ https://ibpsreg.ibps.in/psbmar26/ಕ್ಕೆ ಭೇಟಿ ನೀಡಿ.

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಮಾರ್ಚ್ 31, 2026
  • ಅರ್ಜಿ ಸಲ್ಲಿಸಲು‌ ಕೊನೆಯ ದಿನಾಂಕ – ಏಪ್ರಿಲ್ 20, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಏಪ್ರಿಲ್ 20, 2026

ರಾಜ್ಯವಾರು ಖಾಲಿ ಇರುವ ಹುದ್ದೆಗಳ ವಿವರ:

ಛತ್ತೀಸ್‌ಗಢ – 80 ಹುದ್ದೆಗಳು
ಗುಜರಾತ್ – 125 ಹುದ್ದೆಗಳು
ಹಿಮಾಚಲ ಪ್ರದೇಶ – 20 ಹುದ್ದೆಗಳು
ಜಾರ್ಖಂಡ್ – 10 ಹುದ್ದೆಗಳು
ಕರ್ನಾಟಕ – 60 ಹುದ್ದೆಗಳು
ಕೇರಳ – 10 ಹುದ್ದೆಗಳು
ಮಧ್ಯಪ್ರದೇಶ – 60 ಹುದ್ದೆಗಳು
ಮಹಾರಾಷ್ಟ್ರ 60 ಹುದ್ದೆಗಳು
ಒಡಿಶಾ – 80 ಹುದ್ದೆಗಳು
ತಮಿಳುನಾಡು – 65 ಹುದ್ದೆಗಳು
ತೆಲಂಗಾಣ – 30 ಹುದ್ದೆಗಳು
ಉತ್ತರ ಪ್ರದೇಶ ಪ್ರದೇಶ – 200 ಹುದ್ದೆಗಳು
ಅರುಣಾಚಲ ಪ್ರದೇಶ – 15 ಹುದ್ದೆಗಳು
ಅಸ್ಸಾಂ – 50 ಹುದ್ದೆಗಳು
ನಾಗಾಲ್ಯಾಂಡ್ – 05 ಹುದ್ದೆಗಳು
ಪಶ್ಚಿಮ ಬಂಗಾಳ – 30 ಹುದ್ದೆಗಳು
ಪಂಜಾಬ್ – 100 ಹುದ್ದೆಗಳು

ಒಟ್ಟು – 1000 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು ಹಾಗೂ ಯಾವುದೇ ಪರಿಶಿಷ್ಟ ವಾಣಿಜ್ಯ ಬ್ಯಾಂಕ್ ಅಥವಾ ಯಾವುದೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಕನಿಷ್ಠ 18 ತಿಂಗಳ ಶಾಖೆಯ ಅನುಭವವನ್ನು ಹೊಂದಿರಬೇಕು.

ವಯೋಮಿತಿ:

01-03-2026 ರಂತೆ;

ಕನಿಷ್ಠ ಮಿತಿ 20 ವರ್ಷಗಳು, ಗರಿಷ್ಠ ಮಿತಿ 30 ವರ್ಷಗಳು

ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಪ.ಜಾತಿ, ಪ.ಪಂಗಡ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳು.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ಸ್ಕ್ರೀನಿಂಗ್
  • ವೈಯಕ್ತಿಕ ಸಂದರ್ಶನ
  • ಅಂತಿಮ ಮೆರಿಟ್ ಪಟ್ಟಿ
  • ಸ್ಥಳೀಯ ಭಾಷೆ ಪ್ರಾವೀಣ್ಯತೆ
  • ಅಂತಿಮ ಆಯ್ಕೆ

ಸಂಬಳ:

ವೇತನ ಶ್ರೇಣಿ:- ₹48480-2000/7-62480-2340/2-67160-2680/7-85920.

ಅರ್ಜಿ ಶುಲ್ಕ:

ಸಾಮಾನ್ಯ, ಇಡಬ್ಲ್ಯೂಎಸ್ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ₹850
ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ₹100

ಅರ್ಜಿ‌ ಸಲ್ಲಿಸುವ ಸುಲಭ ವಿಧಾನ ಇಲ್ಲಿದೆ

• ಮೊದಲಿಗೆ IBPS ನ‌ ಅಧಿಕೃತ ಜಾಲತಾಣ https://ibpsreg.ibps.in/psbmar26/ಕ್ಕೆ ಭೇಟಿ ನೀಡಿ

• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಈಗಾಗಲೇ ನೋಂದಾಯಿಸಿದ್ದಲ್ಲಿ ನೋಂದಣಿ ಸಂಖ್ಯೆ, ಪಾಸ್ವರ್ಡ್ ಹಾಗೂ ಭದ್ರತಾ ಕೋಡ್ ನಮೂದಿಸಿ ಲಾಗಿನ್ ಆಗಿ.

Punjab Sind Bank Lbo Notification 2026
Online Form

• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.

• ಅಂತಿಮವಾಗಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.

• ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websitepunjabandsind.bank.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment