Simple Marriage: ನವದಂಪತಿಗಳಿಗೆ ಗುಡ್ ನ್ಯೂಸ್ ಸರ್ಕಾರದಿಂದ ಪ್ರೋತ್ಸಾಹಧನ: ಇಲ್ಲಿದೆ ಸಂಪೂರ್ಣ ಮಾಹಿತಿ

By KH Digital Desk

Published On:

IST

ಫಾಲೋ ಮಾಡಿ

Simple Marriage Application 2025-26
Simple Marriage Application 2025

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಾಮೂಹಿಕ ಸರಳ ವಿವಾಹ(Simple Marriage) ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನವ ದಂಪತಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ.

ನೋಂದಯಿತ ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ವ್ಯವಸ್ಥೆ ಮಾಡುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ದಂಪತಿಗಳು ಸರಳವಾಗಿ ವಿವಾಹವಾದರೆ 50 ಸಾವಿರರೂ. ಪ್ರೋತ್ಸಾಹ ಧನ ನೀಡಲಾಗುವುದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದೆ. ತಪ್ಪದೆ ಕೊನೆಗೂವರೆಗೂ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು

  • ಪೋತ್ಸಾಹಧನಕ್ಕಾಗಿ ಅರ್ಜಿಯನ್ನು ವಿವಾಹವಾದ ಒಂದು ವರ್ಷದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
  • ಸರಳ ವಿವಾಹವಾಗುವ ದಂಪತಿಗಳಲ್ಲಿ ಯುವಕನ ವಯಸ್ಸು 21-45 ವರ್ಷಗಳು, ಯುವತಿಯ ವಯಸ್ಸು 18-42 ವರ್ಷದೊಳಗಿರಬೇಕು.
  • ಕುಟುಂಬದ ವಾರ್ಷಿಕ ವರಮಾನ 5 ಲಕ್ಷ ರೂ. ಒಳಗಿರಬೇಕು.
  • ನೋಂದಯಿತ ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ವ್ಯವಸ್ಥೆ ಮಾಡುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗಿರಬೇಕು.
  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ದಂಪತಿಗಳು ಮಾತ್ರ ಅರ್ಹರಾಗಿರುತ್ತಾರೆ.

ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  • ಸಾಮೂಹಿಕ ವಿವಾಹ ನೋಂದಣಿ ಪ್ರಮಾಣ ಪತ್ರ.
  • ಗಂಡ ಹೆಂಡತಿಯ ಜಂಟಿ ಅಕೌಂಟ್ ಪಾಸ್ ಬುಕ್ ಪ್ರತಿ.
  • ನವದಂಪತಿಗಳ ಆಧಾರ್ ಕಾರ್ಡ್
  • ಜಾತಿ ಹಾಗೂ ಆದಾಯ ಪ್ರಮಾಣ ಪತ್ರ.
  • ನವದಂಪತಿಗಳು ವಿವಾಹವಾದ ಭಾವಚಿತ್ರ

ಪ್ರೋತ್ಸಾಹ ಧನ ಮೊತ್ತ

ಸರಳ ವಿವಾಹ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ದಂಪತಿಗಳಿಗೆ 50 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಪರಿಶಿಷ್ಟ ಜಾತಿಯ ನವದಂಪತಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್ಸೈಟ್
https://swdservices.karnataka.gov.in/swincentive/SIM/SmHome.aspx ಗೆ ಭೇಟಿ ನೀಡಿ. ಸ್ವ ವಿವರಗಳನ್ನು ನಮೂದಿಸಿ ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.

ಪರಿಶಿಷ್ಟ ಪಂಗಡದ ನವದಂಪತಿಗಳು ಬುಡಕಟ್ಟು ಕಲ್ಯಾಣ ಇಲಾಖೆಯ ವೆಬ್ಸೈಟ್
https://twd.karnataka.gov.in/Twincentive/SIM/SmHome.aspx ಗೆ ಭೇಟಿ ನೀಡಿ. ಸ್ವ ವಿವರಗಳನ್ನು ನಮೂದಿಸಿ ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ

  • ಪರಿಶಿಷ್ಟ ಜಾತಿ – ಸಹಾಯವಾಣಿ ಸಂಖ್ಯೆ 9480843005 ಅನ್ನು ಸಂಪರ್ಕಿಸಬಹುದು.
  • ಪರಿಶಿಷ್ಟ ಪಂಗಡದ ಸಹಾಯವಾಣಿ ಸಂಖ್ಯೆ 080-22261789 ಅನ್ನು ಸಂಪರ್ಕಿಸಬಹುದು.

Important Direct Links:

Official Website (Tribal Welfare)twd.karnataka.gov.in
Official Website (Social Welfare)swd.karnataka.gov.in
More UpdatesKarnataka Help.in

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಅಂತರ್ಜಾಲ ಸುದ್ದಿ ಮಾಧ್ಯಮ.

For Feedback - admin@karnatakahelp.in

Leave a Comment