ಆದಾಯ ತೆರಿಗೆ ಇಲಾಖೆಯ ಮುಂಬೈ ಪ್ರದೇಶ ವ್ಯಾಪ್ತಿಯಲ್ಲಿ ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಬಿಡುಗಡೆಯಾಗಿದೆ.
ಸ್ಟೆನೋಗ್ರಾಫರ್ ಗ್ರೇಡ್-II(12), ತೆರಿಗೆ ಸಹಾಯಕ(47) ಹಾಗೂ ಬಹು-ಕಾರ್ಯ ಸಿಬ್ಬಂದಿ(38) ಸೇರಿದಂತೆ ಒಟ್ಟು 97 ಹುದ್ದೆಗಳಿಗೆ ಪ್ರತಿಭಾನ್ವಿತ ಕ್ರೀಡಾಪಟು ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಜ.31 ಕೊನೆಯ ದಿನವಾಗಿದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು MUMBAI ITAX ಅಧಿಕೃತ ಜಾಲತಾಣ https://www.mumbai-itax-sportsrecr26.com/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜನವರಿ 31, 2026
ಶೈಕ್ಷಣಿಕ ಅರ್ಹತೆ:
✓ ಸ್ಟೆನೋಗ್ರಾಫರ್ ಗ್ರೇಡ್ II ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.
✓ ತೆರಿಗೆ ಸಹಾಯಕ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ಪೂರ್ಣಗೊಳಿಸಿರಬೇಕು ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.
✓ ಬಹು-ಕಾರ್ಯ ಸಿಬ್ಬಂದಿ (MTS) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.
ವಯಸ್ಸಿನ ಮಿತಿ:
01-01-2026 ರoತೆ
✓ ಸ್ಟೆನೋಗ್ರಾಫರ್ ಗ್ರೇಡ್ II ಹಾಗೂ ತೆರಿಗೆ ಸಹಾಯಕ ಹುದ್ದೆಗೆ: ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ 27 ವರ್ಷಗಳು.
✓ ಬಹು-ಕಾರ್ಯ ಸಿಬ್ಬಂದಿ ಹುದ್ದೆಗೆ: ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ 25 ವರ್ಷಗಳು.
ವಯೋಮಿತಿ ಸಡಿಲಿಕೆ: ಪ್ರತಿಭಾನ್ವಿತ ಕ್ರೀಡಾಪಟು ಅಭ್ಯರ್ಥಿಗಳಿಗೆ 5 ವರ್ಷಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 10 ವರ್ಷಗಳು .
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳು ಮಾಡಿರುವ ಸಾಧನೆಗಳಿಗೆ ಅನುಗುಣವಾಗಿ (ಹೆಚ್ಚು ಕ್ರೀಡಾ ಅರ್ಹತೆಯುಳ್ಳ ಕ್ರೀಡಾಪಟುಗಳನ್ನು) ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಸಂಬಳ:
ಸ್ಟೆನೋಗ್ರಾಫರ್ ಗ್ರೇಡ್ II ಹಾಗೂ ತೆರಿಗೆ ಸಹಾಯಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 25,500-81,100ರೂ. ಮತ್ತು ಬಹು-ಕಾರ್ಯ ಸಿಬ್ಬಂದಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ – 18,000-56,900ರೂ. ವರೆಗೆ ಮಾಹೆಯಾನ ವೇತನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ – ₹200/-
ಅರ್ಜಿ ಸಲ್ಲಿಸುವ ವಿಧಾನ ಹೇಗೆ.?
• ಮೊದಲಿಗೆ ಅಭ್ಯರ್ಥಿಗಳು MUMBAI ITAX ಅಧಿಕೃತ ಜಾಲತಾಣ https://www.mumbai-itax-sportsrecr26.com/ ಕ್ಕೆ ಭೇಟಿ ನೀಡಿ.
• “ಸೈನೋಗ್ರಾಫರ್, ತೆರಿಗೆ ಸಹಾಯಕ ಮತ್ತು ಬಹು-ಕಾರ್ಯ ಸಿಬ್ಬಂದಿಗಳ ವಿಭಾಗದಲ್ಲಿ ಪ್ರತಿಷ್ಠಿತ ಕ್ರೀಡಾ ವ್ಯಕ್ತಿಗಳ ನೇಮಕಾತಿ – 2025” ಗೆ ಅರ್ಜಿ ಸಲ್ಲಿಸಲು
• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಣಿ ಮಾಡಿ ಅಥವಾ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ. ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.