ಅಸ್ಸಾಂ ರೈಫಲ್ಸ್ ಕ್ರೀಡಾ ಕೋಟಾದಡಿ ರೈಫಲ್‌ಮನ್/ರೈಫಲ್‌ವುಮನ್(ಜನರಲ್ ಡ್ಯೂಟಿ) ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ರ‍್ಯಾಲಿಗಾಗಿ ಅರ್ಹ ಅಭ್ಯರ್ಥಿಗಳಿಂದ ನೋಂದಣಿ ಪ್ರಾರಂಭವಾಗಿದೆ.
2026ರ ಫೆಬ್ರವರಿ ರಿಂದ ಮೇ ತಿಂಗಳಲ್ಲಿ ರ‍್ಯಾಲಿ ನಡೆಯಲಿದೆ. ಒಟ್ಟು 95 ಹುದ್ದೆಗಳಿಗೆ ಪುರುಷ ಹಾಗೂ ಮಹಿಳಾ ಕ್ರೀಡಾಪಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಇಲಾಖೆ ಗೊತ್ತುಪಡಿಸಿದ ವಿಭಾಗದ ಆಟದಲ್ಲಿ ಸಾಧನೆಗೈದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅರ್ಜಿದಾರರು ಅಸ್ಸಾಂ ರೈಫಲ್ಸ್ ಅಧಿಕೃತ ವೆಬ್ಸೈಟ್ https://www.assamrifles.gov.in/onlineapp/Default.aspx ಗೆ ಭೇಟಿ ನೀಡಿ, ಫೆ.09ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಜನವರಿ 10, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 09, 2026
- ನೇಮಕಾತಿ ರ‍್ಯಾಲಿ ತಾತ್ಕಾಲಿಕ ದಿನಾಂಕ – ಫೆಬ್ರವರಿ 2026 ರಿಂದ ಮೇ 2026ರ ನಡುವೆ
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್(ಎಸ್ಸೆಸ್ಸೆಲ್ಸಿ) ಪೂರ್ಣಗೊಳಿಸಿರಬೇಕು.
ಕ್ರೀಡಾ ಅರ್ಹತೆ:
ಯಾವುದೇ ಅಂತರರಾಷ್ಟ್ರೀಯ ಸ್ಪರ್ಧೆ/ ರಾಷ್ಟ್ರೀಯ ಸ್ಪರ್ಧೆಗಳು/ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಗಳು/ ರಾಷ್ಟ್ರೀಯ ಕ್ರೀಡೆಗಳು/ಶಾಲೆಗಳ ಆಟಗಳು/ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಆಟಗಳು/ ಖೇಲೋ ಇಂಡಿಯಾ ಯುವ ಕ್ರೀಡಾಕೂಟ/ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಆಟಗಾರರು ಅರ್ಜಿ ಸಲ್ಲಿಸಬಹುದು.
ವಯಸ್ಸಿನ ಮಿತಿ:
01-01-2026 ರಂತೆ;
✓ ಸಾಮಾನ್ಯ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 28 ವರ್ಷಗಳು
• ಅಭ್ಯರ್ಥಿಗಳು ಜನವರಿ 01, 1998 ಕ್ಕಿಂತ ಮೊದಲು ಮತ್ತು ಜನವರಿ 01, 2008ರ ನಂತರ ಜನಿಸಿರಬಾರದು.
✓ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 33 ವರ್ಷಗಳು
• ಅಭ್ಯರ್ಥಿಗಳು ಜನವರಿ 01, 1993 ಕ್ಕಿಂತ ಮೊದಲು ಮತ್ತು ಜನವರಿ 01, 2008ರ ನಂತರ ಜನಿಸಿರಬಾರದು.
ಆಯ್ಕೆ ವಿಧಾನ:
- ದೈಹಿಕ ಗುಣಮಟ್ಟ ಪರೀಕ್ಷೆ (PST)
- ಮೋಟಾರ್ ಸಾಮರ್ಥ್ಯ ಪರೀಕ್ಷೆ(MAT)
- ಫೀಲ್ಡ್ ಟ್ರೇಯಲ್
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ವೇತನ ಶ್ರೇಣಿ:
ಸದರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ಸಿಪಿಸಿ ಪ್ರಕಾರ ವೇತನ ಮತ್ತು ಇತರ ಭತ್ಯೆಗಳನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 100ರೂ.
ಪ.ಜಾತಿ ಪ.ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಅರ್ಜಿ ಸಲ್ಲಿಕೆ ಹೇಗೆ?
• ಮೊದಲಿಗೆ ಅಭ್ಯರ್ಥಿಗಳು ಅಸ್ಸಾಂ ರೈಫಲ್ಸ್ ಅಧಿಕೃತ ವೆಬ್ಸೈಟ್ https://www.assamrifles.gov.in/onlineapp/Default.aspxಗೆ ಭೇಟಿ ನೀಡಿ.
• ಅರ್ಜಿಯಲ್ಲಿ ಕೇಳಲಾಗುವ ಮೂಲ ಮಾಹಿತಿಗಳನ್ನು ನಮೂದಿಸಿ.
• ಅಗತ್ಯವಿರುವ ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ, ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
Important Direct Links:
| Official Notification PDF | Download |
| Online Application Form Link | Apply Now |
| Official Website | www.assamrifles.gov.in |
| More Updates | KarnatakaHelp.in |