ಕೆಇಎ ಜ.17, 18ರ ಪರೀಕ್ಷೆಯ ಹಾಲ್‌ ಟಿಕೆಟ್‌ ಬಿಡುಗಡೆ

Published on:

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಮೂಲ ಉಳಿಕೆ ವೃಂದದ ಕಿರಿಯ ಅಧಿಕಾರಿ(ಸಾಮಾಗ್ರಿ ಮತ್ತು ಉಗ್ರಾಣ, ಉತ್ಪಾದನೆ ಮತ್ತು ನಿರ್ವಹಣೆ) ಹಾಗೂ ಕೃಷಿ ಮಾರುಕಟ್ಟೆ ಇಲಾಖೆಯ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ಬಿಡುಗಡೆಗೊಳಿಸಿದೆ.

ನಿರ್ದಿಷ್ಟ ಪತ್ರಿಕೆ-2 ಅನ್ನು ಒಳಗೊಂಡ ಪರೀಕ್ಷೆಯು ಜ.17ಕ್ಕೆ ಕಿರಿಯ ಅಧಿಕಾರಿ(ಸಾಮಾಗ್ರಿ ಮತ್ತು ಉಗ್ರಾಣ) ಹುದ್ದೆಗೆ ಮಧ್ಯಾಹ್ನ 3 ರಿಂದ ಸಂಜೆ 5ರವೆಗೆ ಹಾಗೂ 18ರಂದು ಕಿರಿಯ ಅಧಿಕಾರಿ(ಉತ್ಪಾದನೆ ಮತ್ತು ನಿರ್ವಹಣೆ) ಹುದ್ದೆಗಾಗಿ ಬೆಳಗ್ಗೆ 10:30 ರಿಂದ 12:30ವರೆಗೆ, ಅಂದು ಮಧ್ಯಾಹ್ನ 2:30 ರಿಂದ ಸಂಜೆ 4:30ರವರೆಗೆ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗಾಗಿ ನಡೆಯಲಿದೆ. ಸದರಿ ಪರೀಕ್ಷೆಯ ಪ್ರವೇಶ ಪತ್ರ ಡೌನ್ಲೋಡ್‌ ಮಾಡಲು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ ಲಿಂಕ್‌ https://cetonline.karnataka.gov.in/KEA_EXAM_PORTAL/Forms/Candidates/Loginಗೆ ಅರ್ಜಿ ಸಂಖ್ಯೆ, ಇತರೆ ಮಾಹಿತಿ ನಮೂದಿಸಿ ಹಾಲ್‌ ಟಿಕೆಟ್‌ ಪಡೆದುಕೊಳ್ಳಿ.

ಕೆಇಎ ಜ.17, 18ರ ಪರೀಕ್ಷೆಯ ಹಾಲ್‌ ಟಿಕೆಟ್‌ ಹೇಗೆ ಡೌನ್ಲೋಡ್‌ ಮಾಡುವುದು?

ಹಂತ-1 ಕೆಇಎ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ಗೆ ಭೇಟಿ ನೀಡಿ. ಈ ಕೆಳಗಿನ ಹಂತಗಳನ್ನು ಅನುಸರಿಸಿ;

ಮುಖಪುಟ → ನೇಮಕಾತಿ ವಿಭಾಗ → ವಿವಿಧ ಇಲಾಖೆಗಳ ನೇಮಕಾತಿ(NON-HK)-2025 → “Juniour Officer (Stores and Materials) Specific Paper-2 – exam on 17-01-2026 Saturday 03-00 PM to 05-00 PM Juniour Officer (Production and Maintenance) Specific Paper-2 – exam on 18-01-2026 Sunday 10-30 AM to 12-30 PM Marketing Supervisor Specific Paper-2 – exam on 18-01-2026 Sunday 02-30 PM to 04-30 PM ADMISSION TICKET DOWNLOAD LINK-12-01-2026” ಲಿಂಕ್‌ ಮೇಲೆ ಒತ್ತಿ, ನಿಮ್ಮ ಲಾಗಿನ್‌ ವಿವರ ಭರ್ತಿ ಮಾಡುವ ಮೂಲಕ ಹಾಲ್‌ ಟಿಕೆಟ್‌ ಡೌನ್ಲೋಡ್‌ ಮಾಡಿಕೊಳ್ಳಬಹುದು.

Important Direct Links:

KEA January 17, 18 Exam Hall Ticket 2026 LinkDownload
Official Websitecetonline.karnataka.gov.in/kea
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

2 thoughts on “ಕೆಇಎ ಜ.17, 18ರ ಪರೀಕ್ಷೆಯ ಹಾಲ್‌ ಟಿಕೆಟ್‌ ಬಿಡುಗಡೆ”

Leave a Comment