ಭಾರತೀಯ ಅಂಚೆ ಇಲಾಖೆಯು 2026ನೇ ಸಾಲಿನ ವೇಳಾಪಟ್ಟಿ-1ರ ಗ್ರಾಮೀಣ ಡಾಕ್ ಸೇವಕ್(GDS) 28636 ಹುದ್ದೆಗಳ ಮೊದಲ ಸುತ್ತಿನ ಮೆರಿಟ್ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ.
ಸದರಿ ಮೆರಿಟ್ ಪಟ್ಟಿಯಲ್ಲಿ ಶಾರ್ಟ್‌ಲಿಸ್ಟ್ ಆಗಿರುವ ಅಭ್ಯರ್ಥಿಗಳು ಮಾ.23ರೊಳಗೆ ತಾವು ಆಯ್ಕೆ ಮಾಡಿಕೊಂಡಿರುವ ವಿಭಾಗೀಯ ಕಚೇರಿಗೆ ನಿಗದಿತ ಮೂಲ ದಾಖಲೆಗಳ ಪ್ರತಿಗಳ ಜೊತೆಗೆ ಎರಡು ಸೆಟ್ ಝರಾಕ್ಸ್ ಪ್ರತಿಗಳೊಂದಿಗೆ ಭೇಟಿ ನೀಡಿ ವರದಿ ಮಾಡಿಕೊಳ್ಳಲು ತಿಳಿಸಲಾಗಿದೆ.


