ಭಾರತೀಯ ಅಂಚೆ ಇಲಾಖೆಯು 21,431 ಗ್ರಾಮೀಣ ಡಾಕ್ ಸೇವಕ್ 2025 ಹುದ್ದೆಗಳ ನೇಮಕಾತಿಗೆ ಮೊದಲನೆಯ ಮೆರಿಟ್ ಪಟ್ಟಿಯನ್ನು ಪಿಡಿಎಫ್ ರೂಪದಲ್ಲಿ ಈಗಾಗಲೇ ಬಿಡುಗಡೆ ಮಾಡಿತ್ತು, 2 ನೇ ಮೆರಿಟ್ ಪಟ್ಟಿ 2025(India Post GDS 2nd Merit List 2025) ಬಿಡುಗಡೆ ಮಾಡಿದೆ.
ಭಾರತೀಯ ಅಂಚೆ ಇಲಾಖೆಯು 21,431 ಗ್ರಾಮೀಣ ಡಾಕ್ ಸೇವಕ್ 2025 ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಸದರಿ ನೇಮಕಾತಿಗೆ ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಇಲಾಖೆಯೂ ಈಗಾಗಲೇ ಮೊದಲನೆಯ ಮೆರಿಟ್ ಪಟ್ಟಿಯನ್ನು ಪಿಡಿಎಫ್ ರೂಪದಲ್ಲಿ ಬಿಡುಗಡೆ ಮಾಡಿದ್ದು, 2 ನೇ ಮೆರಿಟ್ ಪಟ್ಟಿ 2025 ಗಾಗಿ ಎಲ್ಲಾ ಅಭ್ಯರ್ಥಿಗಳು ಕಾತುರದಿಂದ ಕಾಯುತ್ತಿದ್ದರು. ಇಂದು ಇಲಾಖೆಯು ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.
ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ 2025 ಪ್ರಕ್ರಿಯೆಯಲ್ಲಿ ಆಯ್ಕೆಯಾಗದ ಅಭ್ಯರ್ಥಿಗಳು ಪ್ರಸ್ತುತ 2 ನೇ ಮೆರಿಟ್ ಪಟ್ಟಿ ಪ್ರಕಟಿಸುವ ದಿನಕ್ಕಾಗಿ ಕಾಯುತ್ತಿದ್ದರು. ಮೊದಲನೇ ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾಗದ ಅಭ್ಯರ್ಥಿಗಳಿಗೆ ಎರಡನೇ ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾಗುವ ಅವಕಾಶವಿದೆ. 2 ನೇ ಮೆರಿಟ್ ಪಟ್ಟಿಯನ್ನು ಏಪ್ರಿಲ್ 21 ರಂದು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ indiapostgdsonline.gov.in ಗೆ ಭೇಟಿ ನೀಡಿ 2 ನೇ ಮೆರಿಟ್ ಪಟ್ಟಿಯನ್ನು ವೀಕ್ಷಿಸಬಹುದು ಹಾಗೂ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಬಹುದು.
ಆಯ್ಕೆ ಪ್ರಕ್ರಿಯೆ:
ಭಾರತೀಯ ಅಂಚೆ ಇಲಾಖೆಯು ಮಾಧ್ಯಮಿಕ ಶಾಲಾ ಪರೀಕ್ಷೆಯಲ್ಲಿನ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮೊದಲ ಮೆರಿಟ್ ಪಟ್ಟಿಯಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ.
ನಂತರ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆ ಸುತ್ತಿಗೆ ಕರೆಯಲಾಗುತ್ತದೆ.
ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ 2025 ಗೆ ಅರ್ಜಿ ಸಲ್ಲಿಸಿ ಮೊದಲ ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾಗದ ಅಭ್ಯರ್ಥಿಗಳು ಎರಡನೇ ಮೆರಿಟ್ ಪಟ್ಟಿಗಾಗಿ ಕಾಯಬಹುದು.