India Post GDS Recruitment 2023 : ಇಂಡಿಯಾ ಪೋಸ್ಟ್ (India Post GDS)ದಲ್ಲಿ ಬ್ರಾಂಚ್ ಪೋಸ್ಟ್ ಆಫೀಸ್‌ಗಳಲ್ಲಿ ಗ್ರಾಮೀಣ ಡಾಕ್ ಸೇವಕ್ (GDS), ಬ್ರಾಂಚ್ ಪೋಸ್ಟ್‌ಮಾಸ್ಟರ್ (BPM), ಮತ್ತು ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್ (ABPM) ವಿಶೇಷ ಸೈಕಲ್(Special Cycle Drive) ಡ್ರೈವ್ ಹುದ್ದೆಗಳ ಭರ್ತಿಗೆ 22.05.2023 ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಕೆ ಪ್ರಾರಂಭ. India Post GDS Notification 2023 ಇಂಡಿಯಾ ಪೋಸ್ಟ್ ಇಲಾಖೆಯು ಈಗಾಗಲೇ ಅಧಿಕೃತ ಅಧಿಸೂಚನೆಯನ್ನು ನೇಮಕಾತಿಗಾಗಿ ಬಿಡುಗಡೆ ಮಾಡಿದ್ದು ಆನ್‌ಲೈನ್ ಅರ್ಜಿಗಳನ್ನು 22 ಮೇ 2023 ರಿಂದ ಪ್ರಾರಂಭವಾಗಿದೆ ಆಸಕ್ತರು ಆನ್ ಲೈನ್ ಅರ್ಜಿ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ .
ಈ ಲೇಖನದಲ್ಲಿ ನಾವು India Post GDS ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು India Post GDS Online ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಇಂಡಿಯಾ ಪೋಸ್ಟ್ ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಸಂಸ್ಥೆಯ ಹೆಸರು – ಭಾರತೀಯ ಅಂಚೆ ಇಲಾಖೆ ಹುದ್ದೆ ಹೆಸರು – ಗ್ರಾಮೀಣ್ ಡಾಕ್ ಸೇವಕ್ ಒಟ್ಟು ಖಾಲಿ ಹುದ್ದೆ – 12828 ಹುದ್ದೆಗಳು ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆನ್ಲೈನ್ ಉದ್ಯೋಗ ಸ್ಥಳ – ಭಾರತದಾದ್ಯಂತ
ಭಾರತೀಯ ಅಂಚೆ ಇಲಾಖೆನಲ್ಲಿ ಖಾಲಿ ಇರುವ ಹುದ್ದೆಯ ವಿವರಗಳು ಕೆಳಗಿನಂತಿವೆ
ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) ಸಹಾಯಕ ಶಾಖೆಯ ಪೋಸ್ಟ್‌ಮಾಸ್ಟರ್ (ABPM)
India Post Gds State Wise Vacancy Details
Educational Qualification :
ಭಾರತೀಯ ಅಂಚೆ ಇಲಾಖೆ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಭಾರತ ಪೋಸ್ಟ್ ಜಿಡಿಎಸ್ ಹುದ್ದೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು 10 ನೇ ತೇರ್ಗಡೆ ಹೊಂದಿರಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಯು ಅಧಿಕೃತ ಅಧಿಸೂಚನೆಯನ್ನು ಒಮ್ಮೆ ಓದಬೇಕು.
ಇತರ ಅರ್ಹತೆಗಳು:-
(i) ಕಂಪ್ಯೂಟರ್ ಜ್ಞಾನ (ii) ಸೈಕ್ಲಿಂಗ್‌ನ ಜ್ಞಾನ (iii) ಜೀವನೋಪಾಯದ ಸಾಕಷ್ಟು ಸಾಧನಗಳು
ಈ ನೇಮಕಾತಿಯ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಗಳು ತಮ್ಮ SSLC ಫಲಿತಾಂಶದ ಆಧಾರವಾಗಿ ಸಿಸ್ಟಂ ರಚಿತವಾದ ಮೆರಿಟ್ ಪಟ್ಟಿಯ ಆಧಾರದ ಮೇಲೆ ಅರ್ಜಿದಾರರನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಅವರನ್ನು ದಾಖಲಾತಿ ಪರಿಶೀಲನೆಗೆ ಕರೆಯಲಾಗುತ್ತದೆ
ಮೆರಿಟ್ ಲಿಸ್ಟ್ ದಾಖಲಾತಿ ಪರಿಶೀಲನೆ
Salary:
ಈ ನೇಮಕಾತಿಯ ಸಂಬಳದ ಬಗ್ಗೆ ತಿಳಿಯಲು ಅಧಿಸೂಚನೆಯನ್ನು ವೀಕ್ಷಿಸಿರಿ ಈ ಲೇಖನದ ಕೊನೆಯಲ್ಲಿ ಅಧಿಕೃತ ಅಧಿಸೂಚನೆಯನ್ನು ನೀಡಲಾಗಿದೆ
Age Limit:
ಭಾರತೀಯ ಪೋಸ್ಟ್ ನೇಮಕಾತಿ 2023 ಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಲಾಗಿದೆ. ಎಲ್ಲಾ ಇತರ ಹುದ್ದೆಗಳಿಗೆ 18 ರಿಂದ 40 ವರ್ಷ ವಯಸ್ಸಿನ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್ ಜಿಡಿಎಸ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ. ಕೆಳಗೆ ನೀಡಲಾಗಿದೆ
ಕನಿಷ್ಠ ವಯಸ್ಸು – 18 ವರ್ಷಗಳು ಗರಿಷ್ಠ ವಯಸ್ಸು – 40 ವರ್ಷಗಳು
Age Relaxation:
SC/ST – 5 ವರ್ಷಗಳು OBC – 3 ವರ್ಷಗಳು PwD – 10 ವರ್ಷಗಳು PwD + OBC – 13 ವರ್ಷಗಳು (PwD) + SC/ST – 15 ವರ್ಷಗಳು
Important Dates :
ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಆರಂಭ ದಿನಾಂಕ – 22 May 2023 ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ – 11 Jun 2023
India Post Gds Recruitment 2023
How to apply for India Post GDS Recruitment 2023
ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.
ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
ನಂತರ “India Post GDS Notification 2023” ಕ್ಲಿಕ್ ಮಾಡಿ
(ನಾವು ಕೆಳಗೆ ಅರ್ಜಿ ನೇರ ಲಿಂಕ್ ಅನ್ನು ನೀಡಿದ್ದೆವೆ ಕ್ಲಿಕ್ ಮಾಡಿ)
ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ