ಭಾರತೀಯ ವಾಯುಪಡೆಯಲ್ಲಿ 153 ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಭಾರತೀಯ ವಾಯುಪಡೆ (IAF) ಯಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಾದ ಎಲ್‌ಡಿಸಿ, ಟೈಪಿಸ್ಟ್, ಕುಕ್, ಸ್ಟೋರ್‌ಕೀಪರ್, ಕಾರ್ಪೆಂಟರ್, ಪೇಂಟರ್, ಎಂಟಿಎಸ್, ಮೆಸ್ ಸ್ಟಾಫ್, ಲಾಂಡ್ರಿಮ್ಯಾನ್, ಹೌಸ್‌ಕೀಪಿಂಗ್ ಸ್ಟಾಫ್, ಸಿವಿಲ್/ಮೆಕ್ಯಾನಿಕಲ್ ಡ್ರೈವರ್ ಒಟ್ಟು 153 ಗ್ರೂಪ್ ಸಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
Highlights of Employment News
Organization Name – Indian Air Force (IAF)
Post Name – Group C Civilian
Total Vacancy – 153
Application Process – Offline
Job Location – All India
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ -17-23 ಮೇ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜಾಹೀರಾತು ಪ್ರಕಟವಾದ ದಿನಾಂಕದಿಂದ 30 ದಿನಗಳವರೆಗೆ.
ಶೈಕ್ಷಣಿಕ ಅರ್ಹತೆ:
ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸಲು ನಿಗದಿತ ವಿದ್ಯಾರ್ಹತೆ ಹೊಂದಿರಬೇಕು. ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ. ತಪ್ಪದೇ ಅಧಿಕೃತ ಅಧಿಸೂಚನೆಯನ್ನು ಓದಿ.
- ಅಭ್ಯರ್ಥಿಗಳು 10ನೇ ತರಗತಿ, 12ನೇ ತರಗತಿ, ಐಟಿಐ, ಡಿಪ್ಲೊಮಾ ತೇರ್ಗಡೆ ಹೊಂದಿರಬೇಕು.
ವಯೋಮಿತಿ:
- ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
- ಗರಿಷ್ಠ ವಯಸ್ಸಿನ ಮಿತಿ – 25 ವರ್ಷಗಳು
ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ವಿಧಾನ:
- ಅರ್ಜಿಗಳ ಪರಿಶೀಲನೆ
- ಲಿಖಿತ ಪರೀಕ್ಷೆ
- ಕೌಶಲ್ಯ/ ಪ್ರಾಯೋಗಿಕ/ ದೈಹಿಕ ಪರೀಕ್ಷೆ
- ದಾಖಲೆ ಪರಿಶೀಲನೆ
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿಲ್ಲ.
ಅರ್ಜಿ ಸಲ್ಲಿಸುವ ವಿಧಾನ
- ಭಾರತೀಯ ವಾಯುಪಡೆ (IAF) ಅಧಿಕೃತ ವೆಬ್ಸೈಟ್ https://indianairforce.nic.in/ ಗೆ ಭೇಟಿ ನೀಡಿ.
- ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ
- ಅರ್ಜಿಯಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿಯನ್ನು ಬರೆಯಿರಿ.
- ನಮೂನೆಯನ್ನು ₹10 ಸ್ಟಾಂಪ್ ಇರುವ ಸ್ವ-ವಿಳಾಸದ ಲಕೋಟೆಯಲ್ಲಿ ಇರಿಸಿ.
ಅಭ್ಯರ್ಥಿಗಳು 1 ಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ, ಪ್ರತ್ಯೇಕ ಅರ್ಜಿಯನ್ನು ಕಳುಹಿಸಿ.
ಕೆಳಗಿನ ಸ್ವಯಂ ದೃಢೀಕರಿಸಿದ ದಾಖಲೆಗಳನ್ನು ಲಗತ್ತಿಸಿ
ಎಲ್ಲಾ ದಾಖಲೆಗಳು ಮತ್ತು ಫಾರ್ಮ್ ಅನ್ನು ಒಂದು ಲಕೋಟೆಯಲ್ಲಿ ಇರಿಸಿ ಮತ್ತು ಲಕೋಟೆಯ ಮೇಲೆ “ಅಡ್ವ. ಸಂಖ್ಯೆ 1/2025 ರ ವಿರುದ್ಧ _ ಮತ್ತು ವರ್ಗದ_ ಹುದ್ದೆಗೆ ಅರ್ಜಿ” ಎಂದು ಬರೆದು.
ಅಧಿಸೂಚನೆಯಲ್ಲಿ ಪಟ್ಟಿ ಮಾಡಲಾದ ಸಂಬಂಧಿತ ವಾಯುಪಡೆ ನಿಲ್ದಾಣ/ಘಟಕ ವಿಳಾಸಕ್ಕೆ ಸಾಮಾನ್ಯ(POSTAL Address) ಅಂಚೆ ಮೂಲಕ ಕಳುಹಿಸಿ.
30 ದಿನಗಳ ಒಳಗೆ ಅಂದರೆ, ಅಸ್ಸಾಂ, ಮೇಘಾಲಯ, ಇತ್ಯಾದಿ ದೂರದ ಪ್ರದೇಶಗಳಿಗೆ ಕಳುಹಿಸಿ.
Important Direct Links:
Official Notification and Form PDF | Download |
Official Website | indianairforce.nic.in |
More Updates | Karnataka Help.in |