ಭಾರತೀಯ ಸೇನೆಯ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ಗಳ ಮಹಾನಿರ್ದೇಶನಾಲಯವು (Directorate General of Electronic and Mechanical Engineer) ಅಧಿಸೂಚನೆಯ ಮೂಲಕ ಎಲ್ಡಿಸಿ, ಫೈರ್ಮ್ಯಾನ್ ಸೇರಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಭಾರತೀಯ ಸೇನೆಗೆ ಕೆಲಸ ಮಾಡುವ ಇಚ್ಚೆಯನ್ನು ಹೊಂದಿರುವವರಿಗೆ ಸುವರ್ಣಾವಕಾಶ ಒದಗಿ ಬಂದಿದ್ದು, ಅಕ್ಟೋಬರ್ 25 ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಹತೆ, ಅರ್ಜಿ ಶುಲ್ಕ, ವಯಸ್ಸಿನ ಮಿತಿ, ಸಂಬಳ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಕುರಿತಾದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ವಾಹನ ಮೆಕ್ಯಾನಿಕ್ (ಸಶಸ್ತ್ರ ಹೋರಾಟದ ವಾಹನ), ಹೆಚ್ಚು ಕೌಶಲ್ಯಪೂರ್ಣ – II
20
ಐಟಿಐ/12ನೇ ತರಗತಿ
ಫಿಟ್ಟರ್ (ನುರಿತ)
4
ಐಟಿಐ
ಟ್ರೇಡ್ಸ್ಮನ್ ಮೇಟ್
62
10 ನೇ ತರಗತಿ
ವಾಷರ್ಮ್ಯಾನ್
2
10 ನೇ ತರಗತಿ
ಕುಕ್
1
10 ನೇ ತರಗತಿ
ಎಲೆಕ್ಟ್ರಿಷಿಯನ್ (Power) (ಹೆಚ್ಚು ಕೌಶಲ್ಯ-II)
3
ಐಟಿಐ/12ನೇ ತರಗತಿ
ಟೆಲಿಕಾಂ ಮೆಕ್ಯಾನಿಕ್ (ಹೆಚ್ಚು ಕೌಶಲ್ಯ-II)
16
ಐಟಿಐ/12ನೇ ತರಗತಿ
ಅಪ್ ಹೋಲ್ ಸ್ಟರ್ (ನುರಿತ)
3
ಭಾರತೀಯ ಸೇನೆಯ ಡಿಜಿ ಇಎಂಇ ಮಾನದಂಡಗಳ ಪ್ರಕಾರ
ಸ್ಟೋರ್ ಕೀಪರ್
12
12ನೇ ತರಗತಿ
ಎಲೆಕ್ಟ್ರಿಷಿಯನ್ (ಹೆಚ್ಚು ಕೌಶಲ್ಯ ಹೊಂದಿರುವವರು-II)
7
ಐಟಿಐ/12ನೇ ತರಗತಿ
ಮೇಕೆನಿಸ್ಟ್ (ನುರಿತ)
12
ಐಟಿಐ
ವೆಲ್ಡರ್ (ನುರಿತ)
3
ಐಟಿಐ
ಟಿನ್ ಮತ್ತು ಕಾಪರ್ ಸ್ಮಿತ್ (ನುರಿತ)
1
ಐಟಿಐ
ಎಂಜಿನಿಯರ್ ಇಕ್ಯುಪ್ ಮೆಂಟ್ ಮೆಕ್ಯಾನಿಕ್
1
ಐಟಿಐ/12ನೇ ತರಗತಿ/ಬಿಎಸ್ ಸಿ
ಟೆಲಿಫೋನ್ ಆಪರೇಟರ್
1
10 ನೇ ತರಗತಿ
ವಯೋಮಿತಿ:
ಭಾರತೀಯ ಸೇನಾ ಮಹಾನಿರ್ದೇಶನಾಲಯ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ ಗಳ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 25 ವರ್ಷಗಳ ಒಳಗಿರಬೇಕು.
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು – 03 ವರ್ಷಗಳು
ಪ.ಜಾತಿ /ಪ.ಪಂಗಡದ ಅಭ್ಯರ್ಥಿಗಳು – 05 ವರ್ಷಗಳು
ವಿಕಲಚೇತನ ಅಭ್ಯರ್ಥಿಗಳು – 10 ವರ್ಷಗಳು
ವಿಕಲಚೇತನ (ಒಬಿಸಿ) ಅಭ್ಯರ್ಥಿಗಳು – 13 ವರ್ಷಗಳು
ವಿಕಲಚೇತನ (ಪ.ಜಾತಿ /ಪ.ಪಂಗಡ) ಅಭ್ಯರ್ಥಿಗಳು – 15 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಕೌಶಲ್ಯ ಪರೀಕ್ಷೆ
ದೈಹಿಕ ಪರೀಕ್ಷೆ
ಅರ್ಜಿ ಸಲ್ಲಿಸುವುದು ಹೇಗೆ?
ಭಾರತೀಯ ಸೇನೆಯ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ಗಳ ಮಹಾನಿರ್ದೇಶನಾಲಯ ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
ಅಧಿಸೂಚನೆಯೊಂದಿಗೆ ಅರ್ಜಿ ನಮೂನೆಯನ್ನು ನೀಡಲಾಗಿದೆ. ಅದೇ ರೀತಿಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ.
ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಗುರುತಿನ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಭಾವಚಿತ್ರ, ರೆಸ್ಯೂಮ್, ಯಾವುದೇ ಅನುಭವ ಇತ್ಯಾದಿ ದಾಖಲೆಗಳ ಛಾಯ ಪ್ರತಿಯನ್ನು ಅರ್ಜಿ ನಮೂನೆಗೆ ಲಗತ್ತಿಸಿ.
ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಲಾದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.
ಕೊನೆಗೆ ಅರ್ಜಿ ನಮೂನೆಯನ್ನು ಅಧಿಸೂಚನೆಯಲ್ಲಿ ತಿಳಿಸಿದಂತೆ ಪೋಸ್ಟ್ ಮಾಡಿ, ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ – ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ಗಳ ನಿರ್ದೇಶನಾಲಯದ ಆಯಾ ಘಟಕಗಳು.
ರಾಮಕೃಷ್ಣ ಬಿ ಹೆಚ್ ಅವರು 2020ರಿಂದ ಉದ್ಯೋಗ ಸುದ್ದಿಯ ಮೂಲಕ ತಮ್ಮ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುತ್ತಿದ್ದಾರೆ. ವಿಶೇಷವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಕುರಿತಾಗಿ ಆಳವಾದ ಅಧ್ಯಯನವನ್ನು ಇಟ್ಟುಕೊಂಡಿದ್ದು, ಯುವಕರಿಗೆ ಉದ್ಯೋಗದ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ.