ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕಾಗಿರುವ ಇಂಡಿಯನ್ ಓವರ್ಸೀಸ್ ಬ್ಯಾಂಕ್ (IOB)ನಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ವಿವಿಧ ವೃಂದಗಳಲ್ಲಿ ಖಾಲಿ ಇರುವ ವ್ಯವಸ್ಥಾಪಕ ಹಾಗೂ ಹಿರಿಯ ವ್ಯವಸ್ಥಾಪಕ ಸೇರಿದಂತೆ ಇತರೆ ಒಟ್ಟು 127 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಆಸಕ್ತಿ ಅಭ್ಯರ್ಥಿಗಳು IBPSನ ಅಧಿಕೃತ ಜಾಲತಾಣ https://ibpsonline.ibps.in/iobjul25/ಕ್ಕೆ ಭೇಟಿ ನೀಡಿ. ಅ.03 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಸೆಪ್ಟೆಂಬರ್ 12, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 03, 2025
ಶೈಕ್ಷಣಿಕ ಅರ್ಹತೆ:
ಇಂಡಿಯನ್ ಓವರ್ಸೀಸ್ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಯಾವುದೇ ಪದವಿ, ಬಿ.ಆರ್ಕ್, ಬಿ.ಟೆಕ್/ಬಿಇ, ಎಂ.ಎಸ್ಸಿ, ಎಂಇ/ಎಂ.ಟೆಕ್, ಎಂಬಿಎ/ಪಿಜಿಡಿಎಂ, ಎಂಸಿಎ, ಪಿಜಿಡಿಬಿಎ ಪೂರ್ಣಗೊಳಿಸಿರಬೇಕು.
ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ತಪ್ಪದೆ ಸಂಪೂರ್ಣ ಅಧಿಸೂಚನೆಯನ್ನು ಓದಬೇಕು.