ಇಂಡಿಯನ್ ಓವರ್ಸೀಸ್ ಬ್ಯಾಂಕ್ (IOB) ಸ್ಪೆಷಲಿಸ್ಟ್ ಆಫೀಸರ್ ನೇಮಕ, ಅರ್ಜಿ ಸಲ್ಲಿಸಿ

ಸದರಿ ನೇಮಕಾತಿಗೆ ಅರ್ಜಿ ಸಲ್ಲಿಕೆಗೆ ಬೇಕಾದ ಸಂಪೂರ್ಣ ವಿವರವಾದ ಮಾಹಿತಿ ಇಲ್ಲಿ ನೀಡಲಾಗಿದೆ

Published on:

ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕಾಗಿರುವ ಇಂಡಿಯನ್ ಓವರ್ಸೀಸ್ ಬ್ಯಾಂಕ್ (IOB)ನಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.

ವಿವಿಧ ವೃಂದಗಳಲ್ಲಿ ಖಾಲಿ ಇರುವ ವ್ಯವಸ್ಥಾಪಕ ಹಾಗೂ ಹಿರಿಯ ವ್ಯವಸ್ಥಾಪಕ ಸೇರಿದಂತೆ ಇತರೆ ಒಟ್ಟು 127 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಆಸಕ್ತಿ ಅಭ್ಯರ್ಥಿಗಳು IBPSನ‌ ಅಧಿಕೃತ ಜಾಲತಾಣ https://ibpsonline.ibps.in/iobjul25/ಕ್ಕೆ ಭೇಟಿ ನೀಡಿ. ಅ.03 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಸೆಪ್ಟೆಂಬರ್ 12, 2025
  • ಅರ್ಜಿ ಸಲ್ಲಿಸಲು‌ ಕೊನೆಯ ದಿನಾಂಕ – ಅಕ್ಟೋಬರ್ 03, 2025

ಶೈಕ್ಷಣಿಕ ಅರ್ಹತೆ:

ಇಂಡಿಯನ್ ಓವರ್ಸೀಸ್ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಯಾವುದೇ ಪದವಿ, ಬಿ.ಆರ್ಕ್, ಬಿ.ಟೆಕ್/ಬಿಇ, ಎಂ.ಎಸ್ಸಿ, ಎಂಇ/ಎಂ.ಟೆಕ್, ಎಂಬಿಎ/ಪಿಜಿಡಿಎಂ, ಎಂಸಿಎ, ಪಿಜಿಡಿಬಿಎ ಪೂರ್ಣಗೊಳಿಸಿರಬೇಕು.

ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ತಪ್ಪದೆ ಸಂಪೂರ್ಣ ಅಧಿಸೂಚನೆಯನ್ನು ಓದಬೇಕು.

ವಯೋಮಿತಿ:

01-09-2025 ರಂತೆ

  • ಕನಿಷ್ಠ ಮಿತಿ – 24-30 ವರ್ಷಗಳು
  • ಗರಿಷ್ಠ ಮಿತಿ – 35-40 ವರ್ಷಗಳು

ವಯೋಮಿತಿ ಸಡಿಲಿಕೆ: ಇತರ ಹಿಂದುಳಿದ ವರ್ಗಗಳು (ಒಬಿಸಿ) ಅಭ್ಯರ್ಥಿಗಳಿಗೆ – 3 ವರ್ಷಗಳು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – 5 ವರ್ಷಗಳು, ಪಿಡಬ್ಲ್ಯೂ ಬಿಡಿ ಅಭ್ಯರ್ಥಿಗಳಿಗೆ – 10 ವರ್ಷಗಳು

ಆಯ್ಕೆ ಪ್ರಕ್ರಿಯೆ:

  • ಆನ್‌ಲೈನ್ ಲಿಖಿತ ಪರೀಕ್ಷೆ
  • ವೈಯಕ್ತಿಕ ಸಂದರ್ಶನ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 64820 – 105280ರೂ.ವರೆಗೆ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ, ಇಡಬ್ಲ್ಯೂಎಸ್ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ – 1000ರೂ.
  • ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 175ರೂ.

How to Apply for IOB Specialist Officer Recruitment 2025

ಅರ್ಜಿ‌ ಸಲ್ಲಿಸುವ ಸುಲಭ ವಿಧಾನ ಇಲ್ಲಿದೆ;

  • ಮೊದಲಿಗೆ IBPS ನ‌ ಅಧಿಕೃತ ಜಾಲತಾಣ https://ibpsonline.ibps.in/iobjul25/ ಕ್ಕೆ ಭೇಟಿ ನೀಡಿ.
  • ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಈಗಾಗಲೇ ನೋಂದಾಯಿಸಿದ್ದಲ್ಲಿ ನೋಂದಣಿ ಸಂಖ್ಯೆ, ಪಾಸ್ವರ್ಡ್ ಹಾಗೂ ಭದ್ರತಾ ಕೋಡ್ ನಮೂದಿಸಿ ಲಾಗಿನ್ ಆಗಿ.
  • ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
  • ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ‌ಪಾವತಿ‌ ಮಾಡಿ.
  • ಅಂತಿಮವಾಗಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
  • ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

Important Direct Links:

Official Notification PDFDownload
IOB Online Application LinkApply Now
IOB Official Webwww.iob.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment