ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬೆಂಗಳೂರಿನ ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಬೆಂಗಳೂರಿನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಾರಾಟ ಕೇಂದ್ರದಲ್ಲಿ ಖಾಲಿ ಇರುವ ಅಧಿಕಾರಿ, ತಾಂತ್ರಿಕ ಸಹಾಯಕ, ವೈಜ್ಞಾನಿಕ ಸಹಾಯಕ, ಟೆಕ್ನಿಷಿಯನ್, ಸೈನ್ಸ್ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಒಟ್ಟು 99 ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಹುದ್ದೆಗಳ ಅನ್ವಯ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ವೈದ್ಯಕೀಯ ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಯನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಬಾಹ್ಯಾಕಾಶ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ವಿವಿಧ ಹುದ್ದೆಗಳ ಅನ್ವಯ ಎಲ್ಲಾ ಅರ್ಹತೆ ಮತ್ತು ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಭಾರತೀಯ ಬಾಹ್ಯಾಕಾಶ ಸಂಸ್ಥೆ (HFSC) ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ https://hsfc.gov.in ಅಕ್ಟೋಬರ್ 9ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಲೇಖನದಲ್ಲಿ ISRO HSFC Recruitment 2024 ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.
Shortview of ISRO HSFC Notification 2024
Organization Name – Human Space Flight Centre (HSFC)
Post Name – Various Posts
Total Vacancy – 99
Application Process: online
Job Location – Bengaluru
ನೇಮಕಾತಿಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 19.09.2024
ಅರ್ಜಿ ಸಲ್ಲಿಸಲು ಮುಕ್ತಾಯ ದಿನಾಂಕ: 23.10.2024(Extended)
ವಿದ್ಯಾರ್ಹತೆ:
- ವೈದ್ಯಾಧಿಕಾರಿ ಹುದ್ದೆಗಳಿಗೆ – MBBS/MD ಪೂರ್ಣಗೊಳಿಸಿರಬೇಕು.
- ಟೆಕ್ನಿಷಿಯನ್ ಬಿ ಮತ್ತು ಡ್ರಾಫ್ಟ್ ಮ್ಯಾನ್ ಬಿ ಹುದ್ದೆಗಳಿಗೆ – 10th + ಸಂಬಂಧಿಸಿದ ಟ್ರೇಡ್ ನಲ್ಲಿ ಐಟಿಐ(ITI) ಪ್ರಮಾಣ ಪತ್ರ ಪಡೆದುಕೊಂಡಿರಬೇಕು.
- ಸೈನ್ಸ್ ಇಂಜಿನಿಯರ್ ಹುದ್ದೆಗಳಿಗೆ – M.Tech ಅಥವಾ BE/ B. Tech ಪದವಿ ಪಡೆದುಕೊಂಡಿರಬೇಕು.
- ವೈಜ್ಞಾನಿಕ ಸಹಾಯಕರಿಗೆ – B.Scಯಲ್ಲಿ ಪ್ರಥಮ ದರ್ಜೆ ಪದವಿ ತೇರ್ಗಡೆ ಹೊಂದಿರಬೇಕು
- ಅಸಿಸ್ಟೆಂಟ್ (ರಾಜಭಾಷಾ) ಹುದ್ದೆಗೆ – ಪದವಿಯನ್ನು ಕನಿಷ್ಠ 60% ಪೂರ್ಣಗೊಳಿಸಿರಬೇಕು
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18ರಿಂದ ಗರಿಷ್ಠ 35 ವರ್ಷಗಳ ಒಳಗಿರಬೇಕು.
ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಸ್ಥೆಯ ನಿಯಮಗಳ ಅನುಸಾರ ಮಾಸಿಕ ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ಕೌಶಲ್ಯ ಪರೀಕ್ಷೆ (ಅನ್ವಯಿಸಿದರೆ)
- ವೈದ್ಯಕೀಯ ಪರೀಕ್ಷೆ
- ದಾಖಲೆ ಪರಿಶೀಲನೆ
How to Apply for ISRO HSFC Recruitment 2024
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ…?
- ಮೊದಲಿಗೆ ISRO HSFC ಅಧಿಕೃತ ವೆಬ್ ಸೈಟ್ https://hsfc.gov.in ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಕಾಣುವ Careers ವಿಭಾಗ ಆಯ್ಕೆ ಮಾಡಿ.
- ನಂತರ Recruitment Notice ನಲ್ಲಿ ISRO HSFC Recruitment 2024 ಲಿಂಕ್ ಕ್ಲಿಕ್ ಮಾಡಿ.
- ಅರ್ಜಿ ವಿವರಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿಯನ್ನು ಸಲ್ಲಿಸಿ ಮತ್ತು ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ.
Important Direct Links:
Online Application Last Date Extended Notice PDF | Download |
Official Notification PDF | Download |
Official Short Notice PDF | Download |
Online Application Form Link | Apply Here |
Official Website | hsfc.gov.in |
More Updates | karnatakahelp.in |