ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯಡಿ ಬರುವ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SHAR)ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.
ವಿವಿಧ ವೃಂದಗಳಲ್ಲಿ ಖಾಲಿ ಇರುವ ವಿಜ್ಞಾನಿ/ಇಂಜಿನಿಯರ್, ಟೆಕ್ನಿಕಲ್ ಅಸಿಸ್ಟೆಂಟ್, ಸೈಂಟಿಫಿಕ್ ಅಸಿಸ್ಟೆಂಟ್, ಗ್ರಂಥಾಲಯ ಸಹಾಯಕ ಹಾಗೂ ರೇಡಿಯೋಗ್ರಾಫರ್ ಸೇರಿದಂತೆ ಇತರೆ ಒಟ್ಟು 141 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳಿಗೆ ಸಲ್ಲಿಸ ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು SHAR ಅಧಿಕೃತ ವೆಬ್ಸೈಟ್ https://apps.shar.gov.in/Recruitment01_2025/main.jspನ ಮೂಲಕ ನ.14ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಅಕ್ಟೋಬರ್ 16, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -ನವೆಂಬರ್ 14, 2025
ಹುದ್ದೆಗಳ ವಿವರ ಹಾಗೂ ಶೈಕ್ಷಣಿಕ ಅರ್ಹತೆ:
✓ ವಿಜ್ಞಾನಿ/ಇಂಜಿನಿಯರ್(23 ಹುದ್ದೆಗಳು); ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಕನಿಷ್ಠ 65% ಅಂಕಗಳೊಂದಿಗೆ ಬಿಇ/ಬಿ.ಟೆಕ್. ಅಥವಾ ಎಂಇ/ಎಂ.ಟೆಕ್./ಎಂ.ಎಸ್ಸಿ (ಎಂಜಿನಿಯರಿಂಗ್) ಪದವಿ ಪೂರ್ಣಗೊಳಿಸಬೇಕು.
✓ ತಾಂತ್ರಿಕ ಸಹಾಯಕ(28 ಹುದ್ದೆಗಳು); ಅಭ್ಯರ್ಥಿಗಳು ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ದರ್ಜೆ ಡಿಪ್ಲೊಮಾ ಪದವಿ ಪೂರ್ಣಗೊಳಿಸಬೇಕು.
✓ ವೈಜ್ಞಾನಿಕ ಸಹಾಯಕ(06 ಹುದ್ದೆಗಳು); ಅಭ್ಯರ್ಥಿಗಳು ರಸಾಯನಶಾಸ್ತ್ರ, ಕಂಪ್ಯೂಟರ್ ವಿಜ್ಞಾನ ಅಥವಾ ಸಂಬಂಧಿತ ವಿಷಯದಲ್ಲಿ ಪ್ರಥಮ ದರ್ಜೆ ಬಿ.ಎಸ್ಸಿ ಪದವಿಯನ್ನು ಹೊಂದಿರಬೇಕು.
✓ ಗ್ರಂಥಾಲಯ ಸಹಾಯಕ(01 ಹುದ್ದೆ); ಅಭ್ಯರ್ಥಿಗಳು ಪದವಿ ಮತ್ತು ಗ್ರಂಥಾಲಯ ವಿಜ್ಞಾನದಲ್ಲಿ ಪ್ರಥಮ ದರ್ಜೆ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಬೇಕು.
✓ ರೇಡಿಯೋಗ್ರಾಫರ್ “ಎ” (01 ಹುದ್ದೆ); ಅಭ್ಯರ್ಥಿಗಳು ಕನಿಷ್ಠ 2 ವರ್ಷಗಳ ಅವಧಿಯೊಂದಿಗೆ ರೇಡಿಯೋಗ್ರಫಿಯಲ್ಲಿ ಪ್ರಥಮ ದರ್ಜೆ ಡಿಪ್ಲೊಮಾ ಹೊಂದಿರಬೇಕು.
✓ ತಂತ್ರಜ್ಞ-ಬಿ(70 ಹುದ್ದೆಗಳು); ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಜೊತೆಗೆ ಸಂಬಂಧಿತ ಟ್ರೇಡ್ನಲ್ಲಿ ಐಟಿಐ/ಎನ್ಟಿಸಿ/ಎನ್ಎಸಿ ಪೂರ್ಣಗೊಳಿಸಿರಬೇಕು.
✓ ಡ್ರಾಟ್ಸ್ಮನ್ (02 ಹುದ್ದೆಗಳು); ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಜೊತೆಗೆ ಡ್ರಾಟ್ಸ್ಮನ್ (ಸಿವಿಲ್/ಮೆಕ್ಯಾನಿಕಲ್) ನಲ್ಲಿ ಐಟಿಐ/ಎನ್ಟಿಸಿ/ಎನ್ಸಿ ಪೂರ್ಣಗೊಳಿಸಿರಬೇಕು.
✓ ಅಡುಗೆಯವರು – (03 ಹುದ್ದೆಗಳು); ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿರಬೇಕು ಮತ್ತು ಅಡುಗೆ ತಯಾರಿಸುವ ಸಾಮರ್ಥ್ಯದಲ್ಲಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು.
✓ ಅಗ್ನಿಶಾಮಕ ದಳ ಸಿಬ್ಬಂದಿ “ಎ” (06 ಹುದ್ದೆಗಳು); ಅಭ್ಯರ್ಥಿಗಳು ಎಸ್ಎಸ್ಎಲ್ಸಿ/ಎಸ್ಎಸ್ಸಿ ಪೂರ್ಣಗೊಳಿಸಿರಬೇಕು ಮತ್ತು ಅಗತ್ಯವಿರುವ ದೈಹಿಕ ಮಾನದಂಡಗಳನ್ನು ಹೊಂದಿರಬೇಕು.
✓ ಲಘು ವಾಹನ ಚಾಲಕ “ಎ” (3 ಹುದ್ದೆಗಳು); ಅಭ್ಯರ್ಥಿಗಳು ಎಸ್ಎಸ್ಎಲ್ಸಿ/ಎಸ್ಎಸ್ಸಿ ಪೂರ್ಣಗೊಳಿಸಿರಬೇಕು, ಕನಿಷ್ಠ 3 ವರ್ಷಗಳ ಸಂಬಂಧಿತ ಅನುಭವ ಹೊಂದಿರಬೇಕು ಮತ್ತು ಮಾನ್ಯ ಚಾಲನಾ ಪರವಾನಗಿಯನ್ನು ಹೊಂದಿರಬೇಕು.
✓ ನರ್ಸ್ “ಬಿ” (1 ಹುದ್ದೆ); ಅಭ್ಯರ್ಥಿಗಳು ಕನಿಷ್ಠ 3 ವರ್ಷಗಳ ಅವಧಿಯ ನರ್ಸಿಂಗ್ನಲ್ಲಿ ಡಿಪ್ಲೊಮಾ ಹೊಂದಿರಬೇಕು.
ವಯೋಮಿತಿ:
14-11-2025 ರಂತೆ;
- ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
- ಗರಿಷ್ಠ ವಯಸ್ಸಿನ ಮಿತಿ – 25 – 35 ವರ್ಷಗಳು
ಸರ್ಕಾರಿ ನೇಮಕಾತಿ ನಿಯಮಗಳ ಪ್ರಕಾರ ವರ್ಗವಾರು ವಯೋಮಿತಿ ಸಡಿಲಿಕೆ ನಿಗದಿಪಡಿಸಲಾಗಿದೆ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ದೈಹಿಕ ಪರೀಕ್ಷೆ
ಕೌಶಲ್ಯ ಪರೀಕ್ಷೆ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಹುದ್ದೆಗಳಿಗೆ ಅನುಗುಣವಾಗಿ ಆಯ್ಕೆ ಪ್ರಕ್ರಿಯೆಯನ್ನು ಒಳಗೊಂಡಿದೆ. ಸ್ಪಷ್ಟ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ 19,900-1,77,500 ರೂ. ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
| ವಿಜ್ಞಾನಿ/ಇಂಜಿನಿಯರ್ ಹುದ್ದೆಗಳಿಗೆ | ಹಂತ-10 ವೇತನ ಶ್ರೇಣಿ: ರೂ.56,100 ರಿಂದ 1,77,500/- |
| ತಾಂತ್ರಿಕ ಸಹಾಯಕ, ಗ್ರಂಥಾಲಯ ಸಹಾಯಕ, ನರ್ಸ್ “ಬಿ” ಮತ್ತು ವೈಜ್ಞಾನಿಕ ಸಹಾಯಕ ಹುದ್ದೆಗಳಿಗೆ | ಹಂತ-7 ವೇತನ ಶ್ರೇಣಿ: ರೂ.44,900 ರಿಂದ 1,42,400 |
| ರೇಡಿಯೋಗ್ರಾಫರ್ “ಎ” ಹುದ್ದೆಗೆ | ಹಂತ- 4 ರೂ.25,500 ರಿಂದ 81,100 |
| ತಂತ್ರಜ್ಞ-ಬಿ, ಡ್ರಾಟ್ಸ್ಮನ್ ಹುದ್ದೆಗೆ | ಹಂತ 3 ರೂ.21,700 ರಿಂದ 69,100 |
| ಅಡುಗೆ, ಲಘು ವಾಹನ ಚಾಲಕ “ಎ” ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ “ಎ” ಹುದ್ದೆಗೆ | ಹಂತ-2 ರೂ.19,900 ರಿಂದ 63,200 |
ಅರ್ಜಿ ಶುಲ್ಕ:
✓ ವಿಜ್ಞಾನಿ/ಇಂಜಿನಿಯರ್, ತಾಂತ್ರಿಕ ಸಹಾಯಕ, ವೈಜ್ಞಾನಿಕ ಸಹಾಯಕ, ಗ್ರಂಥಾಲಯ ಸಹಾಯಕ ಹಾಗೂ ನರ್ಸ್ ಹುದ್ದೆಗಳಿಗೆ – ಎಲ್ಲಾ ಅಭ್ಯರ್ಥಿಗಳಿಗೂ ಅರ್ಜಿ ಶುಲ್ಕ – 750 ರೂ.
✓ ಇತರೆ ಎಲ್ಲಾ ಹುದ್ದೆಗಳಿಗೆ – ಎಲ್ಲಾ ಅಭ್ಯರ್ಥಿಗಳಿಗೂ ಅರ್ಜಿ ಶುಲ್ಕ – 500 ರೂ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
• SHAR ಅಧಿಕೃತ ವೆಬ್ಸೈಟ್ https://apps.shar.gov.in/Recruitment01_2025/main.jspಗೆ ಭೇಟಿ ನೀಡಿ..
• “ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ನಿರ್ವಾಹಕ ಹುದ್ದೆಗಳಿಗೆ ದಿನಾಂಕ 16.10.2026 ರಂದು ಜಾಹೀರಾತು , SDSC SHAR/RMT/0 2025 ಗಾಗಿ ಆನ್ಲೈನ್ ಅರ್ಜಿಗಳು ತೆರೆದಿವೆ” – ಅರ್ಜಿ ಸಲ್ಲಿಸಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಬಳಿಕ ನೀವು ಅರ್ಜಿ ಸಲ್ಲಿಸುವ ಹುದ್ದೆಯನ್ನು ಆಯ್ಕೆ ಮಾಡಿ.
• ಇ-ಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.

• ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನೀವು ಅರ್ಜಿ ಸಲ್ಲಿಸುತ್ತಿರುವ ಹುದ್ದೆ ಹಾಗೂ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
| Official Notification PDF | Download |
| Online Application Form Link | Apply Now |
| Official Website | https://www.shar.gov.in/ |
| More Updates | KarnatakaHelp.in |




Job