ಐಟಿಬಿಪಿ ವೈದ್ಯಕೀಯ ಅಧಿಕಾರಿಗಳ ಭರ್ತಿ: 282 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು ಸೆ.08ರವರೆಗೆ ಅವಕಾಶ

Published on:

ನವದೆಹಲಿ: ಭಾರತ ಸರ್ಕಾರದ ಗೃಹ ಸಚಿವಾಲಯದ ಅಧೀನದಲ್ಲಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್(ITBP), ವೈದ್ಯಕೀಯ ಅಧಿಕಾರಿಗಳ ಆಯ್ಕೆ ಮಂಡಳಿ-2025ರಡಿ ವಿವಿಧ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPFs & AR) ಖಾಲಿ ಇರುವ ಗ್ರೂಪ್ ‘ಎ’ ವೈದ್ಯಕೀಯ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಹ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.

ಒಟ್ಟು 282 ಹುದ್ದೆಗಳಿಗೆ ಅಭ್ಯರ್ಥಿಗಳ ನೇಮಕ ಪ್ರಕ್ರಿಯೆ ನಡೆಯಲಿದೆ. ಎಂಬಿಬಿಎಸ್‌ ಪದವಿ ಅಥವಾ ತತ್ಸಮಾನ ಅರ್ಹತೆ ಹಾಗೂ ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿ ಹೊಂದಿರವ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://recruitment.itbpolice.nic.in/ಕ್ಕೆ ಭೇಟಿ ನೀಡಿ, ಸೆ.08ರೊಳಗೆ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ಆಗಸ್ಟ್‌ 10
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್‌ 08 (ರಾತ್ರಿ 11:59 ರವರೆಗೆ)

ಹುದ್ದೆಗಳ ವಿವರ:

ಸೂಪರ್ ಸ್ಪೆಷಲಿಸ್ಟ್ ವೈದ್ಯಕೀಯ ಅಧಿಕಾರಿ(ಸೆಕೆಂಡ್-ಇನ್-ಕಮಾಂಡ್) 05 ಹುದ್ದೆಗಳು (ಕೇವಲ ITBPಯಲ್ಲಿ ಮಾತ್ರ ಲಭ್ಯ)
ಸ್ಪೆಷಲಿಸ್ಟ್ ವೈದ್ಯಕೀಯ ಅಧಿಕಾರಿ(ಡೆಪ್ಯುಟಿ ಕಮಾಂಡೆಂಟ್) 162 ಹುದ್ದೆಗಳು
ವೈದ್ಯಕೀಯ ಅಧಿಕಾರಿ(ಅಸಿಸ್ಟೆಂಟ್ ಕಮಾಂಡೆಂಟ್) 115 ಹುದ್ದೆಗಳು (ಇದರಲ್ಲಿ ಶೇ.10ರಷ್ಟು ಹುದ್ದೆಗಳನ್ನು ಮಾಜಿ ಸೈನಿಕರಿಗೆ ಮೀಸಲಿಡಲಾಗಿದೆ)

ಶೈಕ್ಷಣಿಕ ಅರ್ಹತೆ:

ವೈದ್ಯಕೀಯ ಅಧಿಕಾರಿ ಹುದ್ದೆಗೆ; ಕೇವಲ ಎಂಬಿಬಿಎಸ್ (M.B.B.S.) ಅಥವಾ ತತ್ಸಮಾನ ವೈದ್ಯಕೀಯ ಪದವಿ ಮತ್ತು ಕಡ್ಡಾಯ ರೋಟೇಟಿಂಗ್ ಇಂಟರ್ನ್‌ಶಿಪ್ ಪೂರ್ಣಗೊಳಿಸಿರಬೇಕು.

ಸ್ಪೆಷಲಿಸ್ಟ್ ವೈದ್ಯಕೀಯ ಅಧಿಕಾರಿ ಹುದ್ದೆಗೆ; ಎಂಬಿಬಿಎಸ್ ಪದವಿಯೊಂದಿಗೆ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ (PG Degree) ಅಥವಾ ಡಿಪ್ಲೊಮಾ (PG Diploma) ಹೊಂದಿರಬೇಕು. ಇದರೊಂದಿಗೆ, ಸ್ನಾತಕೋತ್ತರ ಪದವಿ ಪಡೆದ ನಂತರ ಒಂದೂವರೆ ವರ್ಷದ ಅನುಭವ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಪಡೆದ ನಂತರ ಎರಡೂವರೆ ವರ್ಷದ ಅನುಭವ ಹೊಂದಿರುವುದು ಕಡ್ಡಾಯವಾಗಿದೆ.

ಸೂಪರ್ ಸ್ಪೆಷಲಿಸ್ಟ್ ವೈದ್ಯಕೀಯ ಅಧಿಕಾರಿ ಹುದ್ದೆಗೆ; ಎಂಬಿಬಿಎಸ್ ಪದವಿ ಮತ್ತು ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ/ಡಿಪ್ಲೊಮಾ ಹೊಂದಿರಬೇಕು. ಇದರ ಜೊತೆಗೆ, ಸಂಬಂಧಿತ ಸೂಪರ್ ಸ್ಪೆಷಾಲಿಟಿಯಲ್ಲಿ ಡಿಎಂ(DM) ಅಥವಾ ಎಂ.ಸಿಎಚ್ (M.Ch.) ಅಥವಾ ತತ್ಸಮಾನ ಅರ್ಹತೆಯೊಂದಿಗೆ ಮೂರು ವರ್ಷಗಳ ಅನುಭವ ಹೊಂದಿರಬೇಕು.

**ಎಲ್ಲಾ ಅಭ್ಯರ್ಥಿಗಳು ನೇಮಕಾತಿಗಿಂತ ಮುಂಚಿತವಾಗಿ MCI/NMC ಅಥವಾ ರಾಜ್ಯ ವೈದ್ಯಕೀಯ ಮಂಡಳಿಯಲ್ಲಿ (State Medical Council) ಕಡ್ಡಾಯವಾಗಿ ಶಾಶ್ವತ ನೋಂದಣಿ (Permanent Registration) ಮಾಡಿಸಿರಬೇಕು.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದಲು ಮನವಿ.

ವಯೋಮಿತಿ:

ಅರ್ಜಿ ಸಲ್ಲಿಕೆಯ ಕೊನೆದಿನಾಂಕದಂತೆ;

  • ಸೂಪರ್ ಸ್ಪೆಷಲಿಸ್ಟ್ ವೈದ್ಯಕೀಯ ಅಧಿಕಾರಿ ಹುದ್ದೆಗೆ ಗರಿಷ್ಠ 50 ವರ್ಷಗಳು.
  • ಸ್ಪೆಷಲಿಸ್ಟ್ ವೈದ್ಯಕೀಯ ಅಧಿಕಾರಿ ಹುದ್ದೆಗೆ ಗರಿಷ್ಠ 40 ವರ್ಷಗಳು.
  • ವೈದ್ಯಕೀಯ ಅಧಿಕಾರಿ ಹುದ್ದೆಗೆ ಗರಿಷ್ಠ 30 ವರ್ಷಗಳು.

ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಇತರ ಹಿಂದುಳಿದ ವರ್ಗಗಳ (OBC-NCL) ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. ಸರ್ಕಾರಿ ನೌಕರರು ಮತ್ತು ಮಾಜಿ ಸೈನಿಕರಿಗೂ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ).

ಆಯ್ಕೆ ಪ್ರಕ್ರಿಯೆ:


ಅರ್ಹ ಅಭ್ಯರ್ಥಿಗಳನ್ನು ಈ ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:

  1. ದಾಖಲಾತಿ ಪರಿಶೀಲನೆ(Documentation): ಮೂಲ ದಾಖಲೆಗಳ ಪರಿಶೀಲನೆ.
  2. ಸಂದರ್ಶನ(Interview): ಒಟ್ಟು 200 ಅಂಕಗಳಿಗೆ ಸಂದರ್ಶನ ನಡೆಯಲಿದ್ದು, ಅರ್ಹತೆ ಪಡೆಯಲು ಕನಿಷ್ಠ ಶೇ.40 ರಷ್ಟು (80 ಅಂಕಗಳು) ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.
  3. ದೈಹಿಕ ಗುಣಮಟ್ಟ ಪರೀಕ್ಷೆ(PST): ನಿಗದಿತ ದೈಹಿಕ ಮಾನದಂಡಗಳ ಪರಿಶೀಲನೆ (ಉದಾಹರಣೆಗೆ: ಪುರುಷರಿಗೆ ಕನಿಷ್ಠ 157.5 ಸೆಂ.ಮೀ ಮತ್ತು ಮಹಿಳೆಯರಿಗೆ ಕನಿಷ್ಠ 142 ಸೆಂ.ಮೀ ಎತ್ತರ ಇರಬೇಕು. ಗುಡ್ಡಗಾಡು ಪ್ರದೇಶದವರು ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ನಿಯಮಾನುಸಾರ ಎತ್ತರದಲ್ಲಿ ಸಡಿಲಿಕೆ ಇರುತ್ತದೆ).
  4. ವೈದ್ಯಕೀಯ ತಪಾಸಣೆ(MET): ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.

ವೇತನ ಶ್ರೇಣಿ:

ಸೂಪರ್ ಸ್ಪೆಷಲಿಸ್ಟ್ ವೈದ್ಯಕೀಯ ಅಧಿಕಾರಿ ಹುದ್ದೆಗೆ; ರೂ.78,800 ರಿಂದ 2,09,200(ಪೇ ಮ್ಯಾಟ್ರಿಕ್ಸ್ ಲೆವೆಲ್-12)
ಸ್ಪೆಷಲಿಸ್ಟ್ ವೈದ್ಯಕೀಯ ಅಧಿಕಾರಿ ಹುದ್ದೆಗೆ; ರೂ.67,700 ರಿಂದ 2,08,700(ಪೇ ಮ್ಯಾಟ್ರಿಕ್ಸ್ ಲೆವೆಲ್-11)
ವೈದ್ಯಕೀಯ ಅಧಿಕಾರಿ ಹುದ್ದೆಗೆ; ರೂ.56,100 ರಿಂದ 1,77,500 (ಪೇ ಮ್ಯಾಟ್ರಿಕ್ಸ್ ಲೆವೆಲ್-10)

ಇದರೊಂದಿಗೆ ನಿಯಮಾನುಸಾರ ಇತರೆ ಭತ್ಯೆಗಳ ಸೌಲಭ್ಯವಿರಲಿದೆ.

ಅರ್ಜಿ ಶುಲ್ಕ:

ಸಾಮಾನ್ಯ(UR), ಒಬಿಸಿ(OBC) ಮತ್ತು ಇಡಬ್ಲ್ಯೂಎಸ್(EWS) ವರ್ಗದ ಪುರುಷ ಅಭ್ಯರ್ಥಿಗಳಿಗೆ ರೂ.400/-
ಪ.ಜಾತಿ(SC), ಪ.ಪಂಗಡ(ST), ಮಾಜಿ ಸೈನಿಕರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ

ಅರ್ಹ ಅಭ್ಯರ್ಥಿಗಳು ಕೇವಲ ಆನ್‌ಲೈನ್ ಮೂಲಕವೇ ಐಟಿಬಿಪಿ ನೇಮಕಾತಿ ಅಧಿಕೃತ ವೆಬ್‌ಸೈಟ್ www.recruitment.itbpolice.nic.in ನಲ್ಲಿ ಅಭ್ಯರ್ಥಿಗಳು ಹೊಸ ಬಳಕೆದಾರರಾಗಿ ನೋಂದಣಿಯಾಗಿ ಅರ್ಜಿ ಸಲ್ಲಿಸಕೆ ಮಾಡಬಹುದು.

Itbp Medical Officer Notification 2026
ITBP MO Online Form 2026

Important Direct Links:

Official Notification PDFDownload
Online Application Form LinkApply Now
Official Websiteitbpolice.nic.in
More UpdatesKarnatakaHelp.in

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment