ನವದೆಹಲಿ: ಭಾರತ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮವಾದ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ)ವು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಮ್ಯಾನೇಜರ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ಒಟ್ಟು 389 ಹುದ್ದೆಗಳಿಗೆ ಅಭ್ಯರ್ಥಿಗಳ ನೇಮಕ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಎಎಐ ಅಧಿಕೃತ ವೆಬ್‌ಸೈಟ್ https://aai.aero/en/careers/recruitmentನಲ್ಲಿ ಲಭ್ಯವಿರುವ ಲಿಂಕ್ ಮೂಲಕ ಸೆ.07ರೊಳಗೆ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ಆಗಸ್ಟ್ 08
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 07
ಶೈಕ್ಷಣಿಕ ಅರ್ಹತೆ:
ಮ್ಯಾನೇಜರ್ ಹುದ್ದೆಗಳು (3 ವರ್ಷಗಳ ಕೆಲಸದ ಅನುಭವ ಕಡ್ಡಾಯ):
- ಮ್ಯಾನೇಜರ್(ಸಿವಿಲ್) ಹುದ್ದೆಗೆ; ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್(B.Tech) ಪದವಿ.
- ಮ್ಯಾನೇಜರ್(ಎಲೆಕ್ಟ್ರಿಕಲ್) ಹುದ್ದೆಗೆ; ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್(B.Tech) ಪದವಿ.
- ಮ್ಯಾನೇಜರ್(ಫೈನಾನ್ಸ್) ಹುದ್ದೆಗೆ; ಎಂಬಿಎ(MBA – Finance)/ಪಿಜಿಡಿಎಂ(PGDM – Finance)/ಸಿಎ(CA)/ಐಸಿಡಬ್ಲ್ಯೂಎ(Cost Accountant)/ಸಿಎಫ್‌ಎ(CFA).
- ಮ್ಯಾನೇಜರ್(ಮಾಹಿತಿ ತಂತ್ರಜ್ಞಾನ-IT) ಹುದ್ದೆಗೆ; ಕಂಪ್ಯೂಟರ್ ಸೈನ್ಸ್/ ಐಟಿ/ ಎಲೆಕ್ಟ್ರಾನಿಕ್ಸ್‌ನಲ್ಲಿ ಬಿ.ಇ/ಬಿ.ಟೆಕ್ ಅಥವಾ ಎಂಸಿಎ(MCA).
- ಮ್ಯಾನೇಜರ್(ಆರ್ಕಿಟೆಕ್ಚರ್) ಹುದ್ದೆಗೆ; ಆರ್ಕಿಟೆಕ್ಚರ್‌ನಲ್ಲಿ ಬ್ಯಾಚುಲರ್ ಪದವಿ ಮತ್ತು ಕೌನ್ಸಿಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ ನೋಂದಣಿ.
- ಮ್ಯಾನೇಜರ್(ಲಾ) ಹುದ್ದೆಗೆ; ಕಾನೂನು ಪದವಿ (3 ವರ್ಷ ಅಥವಾ 5 ವರ್ಷಗಳ ಇಂಟಿಗ್ರೇಟೆಡ್ ಕೋರ್ಸ್) ಮತ್ತು ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿಸಿಕೊಳ್ಳಲು ಅರ್ಹತೆ.
- ಮ್ಯಾನೇಜರ್(ಫೈರ್ ಸರ್ವಿಸಸ್) ಹುದ್ದೆಗೆ; ಫೈರ್/ಮೆಕ್ಯಾನಿಕಲ್/ಆಟೋಮೊಬೈಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ/ಬಿ.ಟೆಕ್ ಪದವಿ.
- ಮ್ಯಾನೇಜರ್(ಆಪರೇಷನ್ಸ್) ಹುದ್ದೆಗೆ; ವಿಜ್ಞಾನ ಪದವಿ(B.Sc) ಜೊತೆಗೆ 2 ವರ್ಷಗಳ ಎಂಬಿಎ(MBA) ಅಥವಾ ಬಿ.ಇ/ಬಿ.ಟೆಕ್ ಪದವಿ.
- ಮ್ಯಾನೇಜರ್(ಕಮರ್ಷಿಯಲ್) ಹುದ್ದೆಗೆ; ಯಾವುದೇ ಪದವಿ ಜೊತೆಗೆ 2 ವರ್ಷಗಳ ಎಂಬಿಎ(MBA – Marketing) ಅಥವಾ ಬಿ.ಇ/ಬಿ.ಟೆಕ್ ಪದವಿ.
- ಮ್ಯಾನೇಜರ್ (ಕಾರ್ಪೊರೇಟ್ ಪ್ಲಾನಿಂಗ್) ಹುದ್ದೆಗೆ; ಮ್ಯಾಥಮೆಟಿಕಲ್ ಸ್ಟ್ಯಾಟಿಸ್ಟಿಕ್ಸ್/ಆಪರೇಷನ್ ರಿಸರ್ಚ್/ಸ್ಟ್ಯಾಟಿಸ್ಟಿಕ್ಸ್/ ಎಕನಾಮಿಕ್ಸ್ ವಿತ್ ಸ್ಟ್ಯಾಟಿಸ್ಟಿಕ್ಸ್/ಮ್ಯಾಥಮೆಟಿಕ್ಸ್ ವಿತ್ ಸ್ಟ್ಯಾಟಿಸ್ಟಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ(Post Graduate).
- ಮ್ಯಾನೇಜರ್ (ಕಾರ್ಪೊರೇಟ್ ಕಮ್ಯುನಿಕೇಷನ್ಸ್) ಹುದ್ದೆಗೆ; ಮಾಸ್ ಕಮ್ಯುನಿಕೇಷನ್/ಜರ್ನಲಿಸಂ/ಲಿಟರೇಚರ್‌ನಲ್ಲಿ ಬ್ಯಾಚುಲರ್ ಪದವಿ ಮತ್ತು ಜರ್ನಲಿಸಂ/ಮಾಸ್ ಮೀಡಿಯಾ/ಮಾಸ್ ಕಮ್ಯುನಿಕೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಅಥವಾ 2 ವರ್ಷಗಳ ಡಿಪ್ಲೊಮಾ.
ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳು (ಯಾವುದೇ ಕೆಲಸದ ಅನುಭವದ ಅಗತ್ಯವಿಲ್ಲ):
- ಜೂನಿಯರ್ ಎಕ್ಸಿಕ್ಯೂಟಿವ್(ಫೈನಾನ್ಸ್) ಹುದ್ದೆಗೆ; ಎಂಬಿಎ(MBA – Finance)/ಪಿಜಿಡಿಎಂ(PGDM – Finance)/ಸಿಎ(CA)/ ಐಸಿಡಬ್ಲ್ಯೂಎ(Cost Accountant)/ಸಿಎಫ್‌ಎ(CFA).
- ಜೂನಿಯರ್ ಎಕ್ಸಿಕ್ಯೂಟಿವ್(ಲಾ) ಹುದ್ದೆಗೆ; ಕಾನೂನು ಪದವಿ(3 ವರ್ಷ ಅಥವಾ 5 ವರ್ಷಗಳ ಇಂಟಿಗ್ರೇಟೆಡ್ ಕೋರ್ಸ್) ಮತ್ತು ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿಸಿಕೊಳ್ಳಲು ಅರ್ಹತೆ.
- ಜೂನಿಯರ್ ಎಕ್ಸಿಕ್ಯೂಟಿವ್(ಆಪರೇಷನ್ಸ್) ಹುದ್ದೆಗೆ; ವಿಜ್ಞಾನ ಪದವಿ(B.Sc) ಜೊತೆಗೆ ೨ ವರ್ಷಗಳ ಎಂಬಿಎ (MBA) ಅಥವಾ ಬಿ.ಇ/ಬಿ.ಟೆಕ್ ಪದವಿ.
- ಜೂನಿಯರ್ ಎಕ್ಸಿಕ್ಯೂಟಿವ್(ಸರ್ವೆ ಮತ್ತು ಕಾರ್ಟೋಗ್ರಫಿ) ಹುದ್ದೆಗೆ; ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ/ಬಿ.ಟೆಕ್ ಪದವಿ ಅಥವಾ ಜಿಯೋಗ್ರಪಿ/ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್/ಜಿಯೋ-ಇನ್ಫರ್ಮ್ಯಾಟಿಕ್ಸ್/ಜಿಯೋಮ್ಯಾಟಿಕ್ಸ್‌ನಲ್ಲಿ ಎಂ.ಎಸ್ಸಿ(M.Sc) ಪದವಿ.
ವೇತನ ಶ್ರೇಣಿ:
ಮ್ಯಾನೇಜರ್(ಗ್ರೂಪ್-ಎ: E-3 ಹಂತ) ಹುದ್ದೆಗೆ; ರೂ.60,000 ರಿಂದ1,80,000 (ವಾರ್ಷಿಕ ಅಂದಾಜು ಸಿಟಿಸಿ ರೂ.21ಲಕ್ಷಗಳು).
ಜೂನಿಯರ್ ಎಕ್ಸಿಕ್ಯೂಟಿವ್ (ಗ್ರೂಪ್-ಬಿ: E-1 ಹಂತ) ಹುದ್ದೆಗೆ; ರೂ. 40,000 ರಿಂದ 1,40,000 (ವಾರ್ಷಿಕ ಅಂದಾಜು ಸಿಟಿಸಿ ರೂ.14 ಲಕ್ಷಗಳು).
ವಯೋಮಿತಿ:
07-09-2026ರಂತೆ;
ಮ್ಯಾನೇಜರ್ ಹುದ್ದೆಗಳಿಗೆ- ಗರಿಷ್ಠ 32 ವರ್ಷಗಳು.
ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ- ಗರಿಷ್ಠ 27 ವರ್ಷಗಳು.
ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ (ನೋನ್-ಕ್ರೀಮಿ ಲೇಯರ್) ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ. ವಿಕಲಚೇತನ(PwBD) ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
- ಕಂಪ್ಯೂಟರ್ ಆಧಾರಿತ ವಸ್ತುನಿಷ್ಠ ಮಾದರಿಯ ಪರೀಕ್ಷೆ(CBT)
- ದೈಹಿಕ ಪರೀಕ್ಷೆಗಳು (ಫೈರ್ ಸರ್ವಿಸಸ್ ಹುದ್ದೆಗೆ)
- ಸಂದರ್ಶನ(ಮ್ಯಾನೇಜರ್ ಹುದ್ದೆಗಳಿಗೆ)
- ದಾಖಲಾತಿ ಪರಿಶೀಲನೆ
ಅರ್ಜಿ ಶುಲ್ಕ:
- ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.1,000/-
- ಪ.ಜಾತಿ, ಪ.ಪಂಗಡ, ವಿಕಲಚೇತನರು(PwBD), ಮಹಿಳಾ ಅಭ್ಯರ್ಥಿಗಳು ಹಾಗೂ ಎಎಐನಲ್ಲಿ ಯಶಸ್ವಿಯಾಗಿ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಕೆ ಹೇಗೆ.?
ಎಎಐ ಅಧಿಕೃತ ವೆಬ್‌ಸೈಟ್‌ನ “ನೇಮಕಾತಿ”(https://aai.aero/en/careers/recruitment) ವಿಭಾಗದಡಿ ಲಭ್ಯವಿರುವ ನೋಂದಣಿ ಲಿಂಕ್ ಬಳಸಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅದಾಗ್ಯೂ ಅರ್ಜಿ ಸಲ್ಲಿಕೆಯ ನೇರ ಲಿಂಕ್ ಅನ್ನು ಈ ಕೆಳಗೆ ಲಗತ್ತಿಸಲಾಗಿದೆ.
Important Direct Links:
| Official Notification PDF | Download |
| Online Application Form Link | Apply Now |
| Official Website | aai.aero |
| More Updates | KarnatakaHelp.in |
One application form
Hi Sir
I need for Steching machine
Vijayanagar jele hagarebomanahalli taluk nelkudre post chimanahalli gram