ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ಜೆಎಂಜಿಎಸ್-I ಶ್ರೇಣಿಯಲ್ಲಿ ಖಾಲಿ ಇರುವ ಒಟ್ಟು 545 ಲೋಕಲ್ ಬ್ಯಾಂಕ್ ಆಫೀಸರ್(ಎಲ್‌ಬಿಒ) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಅವಧಿಯನ್ನು ಆ.16ರವರೆಗೆ ವಿಸ್ತರಿಸಿದೆ.
ಯಾವುದೇ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಲಿಖಿತ ಪರೀಕ್ಷೆ ಸೇರಿದಂತೆ ನಾನಾ ಹಂತಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಸಕ್ತರು ಬ್ಯಾಂಕಿನ ಅಧಿಕೃತ ಜಾಲತಾಣ https://pnb.bank.in/Recruitments.aspx ಅಥವಾ https://ibpsreg.ibps.in/pnbjul26/ನ ಮೂಲಕ ನಿಗದಿತ ಕೊನೆದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ನೋಂದಣಿ ಆರಂಭದ ದಿನಾಂಕ- ಜುಲೈ 20
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಆಗಸ್ಟ್ 16
- ಆನ್‌ಲೈನ್ ಪರೀಕ್ಷೆಯ (ತಾತ್ಕಾಲಿಕ) ದಿನಾಂಕ- ಆಗಸ್ಟ್ 2026 ಅಥವಾ ಸೆಪ್ಟೆಂಬರ್ 2026
ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ: ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Graduation) ಪಡೆದಿರಬೇಕು. ಅಭ್ಯರ್ಥಿಯು ಅರ್ಜಿ ಸಲ್ಲಿಸುವ ದಿನದಂದು ಮಾನ್ಯತೆ ಪಡೆದ ಪದವಿ ಪ್ರಮಾಣಪತ್ರ ಹೊಂದಿರಬೇಕು.
ಅನುಭವ: ಯಾವುದೇ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಅಥವಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ (RRB) ಕ್ಲೆರಿಕಲ್ ಅಥವಾ ಆಫೀಸರ್ ಕೇಡರ್‌ನಲ್ಲಿ ಕನಿಷ್ಠ ಒಂದು ವರ್ಷದ ನಂತರದ ಶೈಕ್ಷಣಿಕ ಅರ್ಹತೆಯ ಕೆಲಸದ ಅನುಭವ ಹೊಂದಿರಬೇಕು.
ವಯೋಮಿತಿ (01.07.2026ರಂತೆ): ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳು. (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ).
ಆಯ್ಕೆ ಪ್ರಕ್ರಿಯೆ:
ಆಯ್ಕೆ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ;
- ಆನ್‌ಲೈನ್ ಲಿಖಿತ ಪರೀಕ್ಷೆ
- ಸ್ಕ್ರೀನಿಂಗ್ (ದಾಖಲೆಗಳ ಪರಿಶೀಲನೆ)
- ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ (LLPT)
- ವೈಯಕ್ತಿಕ ಸಂದರ್ಶನ
ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ರೂ.48480-2000/7-62480-2340/2-67160-2680/7-85920/-ರವರೆಗೆ ಇರಲಿದ್ದು, ಮೂಲ ವೇತನದ ಜೊತೆಗೆ ಡಿಎ (DA), ಸಿಸಿಎ (CCA), ಎಚ್‌ಆರ್‌ಎ (HRA)/ಲೀಸ್ಡ್ ವಸತಿ ಸೌಕರ್ಯ, ರಜೆ ಪ್ರಯಾಣ ರಿಯಾಯಿತಿ, ವೈದ್ಯಕೀಯ ವಿಮೆ, ನಿವೃತ್ತಿ ಸೌಲಭ್ಯಗಳು ಮತ್ತು ಬ್ಯಾಂಕಿನ ನಿಯಮಾವಳಿಗಳನ್ವಯ ಇತರ ಸೌಲಭ್ಯಗಳು ದೊರೆಯಲಿವೆ.
ಅರ್ಜಿ ಶುಲ್ಕ:
- ಎಸ್‌ಸಿ/ಎಸ್‌ಟಿ/ವಿಕಲಚೇತನ(PwBD) ಅಭ್ಯರ್ಥಿಗಳಿಗೆ ರೂ.50/-+18% ಜಿಎಸ್‌ಟಿ = ಒಟ್ಟು ರೂ. 59/- (ಕೇವಲ ಅಂಚೆ ವೆಚ್ಚ)
- ಇತರ ಎಲ್ಲಾ ಅಭ್ಯರ್ಥಿಗಳಿಗೆ ರೂ.1000/- + 18% ಜಿಎಸ್‌ಟಿ = ಒಟ್ಟು ರೂ. 1180/-
ಅರ್ಜಿ ಸಲ್ಲಿಕೆ ಹೇಗೆ.?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ https://pnb.bank.in/ನಲ್ಲಿ ಲಭ್ಯವಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.
ಹಂತ-1 ಅಭ್ಯರ್ಥಿಗಳು ಅಧಿಕೃತ ಲಿಂಕ್ https://ibpsreg.ibps.in/pnbjul26/ಗೆ ಭೇಟಿ ನೀಡಿ.
ಹಂತ-2 ಹೊಸ ಬಳಕೆದಾರರಾಗಿ ನೋಂದಣಿ.
ಹಂತ-3 ಅರ್ಜಿ ನಮೂನೆ ಭರ್ತಿ, ಅಗತ್ಯ ದಾಖಲೆಗಳ ಅಪ್ಲೋಡ್.
ಹಂತ-4 ತಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಮಾಡಿ.
Important Direct Links:
| Online Form Last Date Extension Notice PDF(Dated On 7/8/2026) | Download |
| Official Notification PDF | Download |
| Online Application Form Link | Apply Now |
| Official Website | pnb.bank.in |
| More Updates | KarnatakaHelp.in |
Prashant Nerli
Sangeeta