K C General Hospital Senior Consultant Vacancy 2025
ಕರ್ನಾಟಕ ಸರ್ಕಾರ ಒಡೆತನದ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಡಿ.ಎನ್.ಬಿ. ಕೋರ್ಸ್ಗೆ ಸೀನಿಯರ್ ಕನ್ಸಲ್ಟಂಟ್ ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಲಾಗಿದ್ದು, ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರವಳಿಕೆ ಮತ್ತು ಜನರಲ್ ಸರ್ಜರಿ ವಿಶೇಷತೆಯಲ್ಲಿ ಎರಡು ಸೀನಿಯರ್ ಕನ್ಸಲ್ಟಂಟ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಆಕಾಂಕ್ಷಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ಅ.13ರಂದು ನಡೆಯಲಿರುವ ನೇರ ಸಂದರ್ಶನದಲ್ಲಿ ಭಾಗವಹಿಸಲು ವೈದ್ಯಕೀಯ ಅಧೀರಿಕ್ಷಕರ ಕಚೇರಿ ಹೊರಡಿಸಿದ ಪ್ರಕಟಣೆ ತಿಳಿಸಿದೆ.
ನೇಮಕಾತಿ ಪ್ರಕಟಣೆಯ ಪ್ರಕಟಣೆಯ ದಿನಾಂಕ – ಅಕ್ಟೋಬರ್ 06, 2025
ನೇರ ಸಂದರ್ಶನ ನಡೆಯುವ ದಿನಾಂಕ – ಅಕ್ಟೋಬರ್ 13, 2025
ಶೈಕ್ಷಣಿಕ ಅರ್ಹತೆ:
ನೇಮಕಾತಿಯ ಪ್ರಕಟಣೆಯ ಪ್ರಕಾರ, ಅಭ್ಯರ್ಥಿಗಳು ಪಿಜಿ ಪದವಿ ನಂತರ ಸಂಬಂಧಪಟ್ಟ ತಜ್ಞತೆಯಲ್ಲಿ ಕನಿಷ್ಠ 10 ವರ್ಷಗಳ ಅನುಭವ ಹಾಗೂ ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜು ಅಥವಾ ಡಿ.ಎನ್.ಬಿ. ಕೇಂದ್ರದಲ್ಲಿ 5 ವರ್ಷಗಳ ಬೋಧನಾ ಅನುಭವ ಹೊಂದಿರಬೇಕು ಜೊತೆಗೆ ಇಬ್ಬರು ಸ್ನಾತಕೋತ್ತರ/ಡಿ.ಎನ್.ಬಿ. ವಿದ್ಯಾರ್ಥಿಗಳಿಗೆ ಬೋಧನೆ ನೀಡಿರುವ ಅನುಭವವಿರಬೇಕು ಹಾಗೂ ಅಭ್ಯರ್ಥಿಗಳು ಕರ್ನಾಟಕ ವೈದ್ಯಕೀಯ ಮಂಡಳಿ (KMC) ಅಡಿಯಲ್ಲಿ ನೋಂದಾಯಿಸಿಕೊಂಡಿರಬೇಕು ಎಂದು ತಿಳಿಸಲಾಗಿದೆ.
ವಯೋಮಿತಿ:
ಗರಿಷ್ಠ ವಯಸ್ಸಿನ ಮಿತಿ 67 ವರ್ಷಗಳು ಹಾಗೂ ಅಭ್ಯರ್ಥಿಗಳು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿರಬೇಕು.
ಗೌರವಧನ:
ಆಯ್ಕೆಯಾದ ಅಭ್ಯರ್ಥಿಗಳಿಗೆ 1.5ಲಕ್ಷರೂ.ಗಳವರೆಗೆ ಮಾಹೆಯಾನ ಗೌರವಧನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ:
ಸಂದರ್ಶನ
ದಾಖಲಾತಿ ಪರಿಶೀಲನೆ
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ – ಉಲ್ಲೇಖಿಸಲಾಗಿರುವುದಿಲ್ಲ.
ಪ.ಜಾತಿ, ಪ.ಪಂಗಡ ಮತ್ತು ವರ್ಗ-1 ಅಭ್ಯರ್ಥಿಗಳಿಗೆ – ಉಲ್ಲೇಖಿಸಲಾಗಿರುವುದಿಲ್ಲ.
ನೇರ ಸಂದರ್ಶನ ನಡೆಯುವ ದಿನಾಂಕ ಹಾಗೂ ಸ್ಥಳ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 13ರಂದು ಬೆಳಿಗ್ಗೆ 11 ಗಂಟೆಗೆ ತಮ್ಮ ಎಲ್ಲಾ ಸ್ವ-ವಿವರ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಖುದ್ದಾಗಿ ಈ ಕೆಳಗೆ ನೀಡಲಾಗಿರುವ ವಿಳಾಸದಲ್ಲಿ ನಡೆಸಲಾಗುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
✓ ವಿಳಾಸ: ಕೆ.ಸಿ. ಜನರಲ್ ಆಸ್ಪತ್ರೆ, ಆಯುಕ್ತರವರ ಕಛೇರಿ, 5ನೇ ಮಹಡಿ, ಆರೋಗ್ಯ ಸೌಧ, ಮಲ್ಲೇಶ್ವರಂ, ಬೆಂಗಳೂರು-560023