K RlDE General Manager and Office Assistant Notification 2025
ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ಜಂಟಿ ಉದ್ಯಮವಾಗಿರುವ ರೈಲು ಮೂಲ ಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ನಲ್ಲಿ ವಿವಿಧ ವೃಂದದ ಪ್ರಧಾನ ವ್ಯವಸ್ಥಾಪಕ ಹಾಗೂ ಹಿರಿಯ ಕಚೇರಿ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ನ.15ರಿಂದ ಪ್ರಾರಂಭವಾಗಿದೆ.
ಸಿಗ್ನಲಿಂಗ್ ಮತ್ತು ದೂರಸಂಪರ್ಕ, ಖರೀದಿ, ಹಣಕಾಸು ವೃಂದದಲ್ಲಿ 03 ಪ್ರಧಾನ ವ್ಯವಸ್ಥಾಪಕ ಹುದ್ದೆಗಳು ಮತ್ತು 01 ಅಸಿಸ್ಟೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಡೆಪ್ಯುಟೇಶನ್/ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಡಿ.15ರೊಳಗೆ K-RIDE ಅಧಿಕೃತ ಜಾಲತಾಣ https://kride.in/careers-in-k-ride/ ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 15, 2025
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
✓ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ (ಡೆಪ್ಯುಟೇಷನ್ ಆಧಾರದ ಮೇಲೆ) ಹುದ್ದೆಗೆ; ಅಭ್ಯರ್ಥಿಗಳು SAG/NFSAG/HFSAG/SG ಅಥವಾ ತತ್ಸಮಾನ ದರ್ಜೆಯಲ್ಲಿರಬೇಕು ಮತ್ತು ನಿಗದಿತ ಗ್ರೂಪ್ ‘A’ ಸೇವೆಯಲ್ಲಿ ಕನಿಷ್ಠ 17 ವರ್ಷಗಳ ಸೇವೆ ಸಲ್ಲಿಸಿರಬೇಕು ಮತ್ತು ವೃತ್ತಿ ಸಂಬಂಧಿತ ಇತರೆ ಅನುಭವಗಳನ್ನು ಹೊಂದಿರಬೇಕು. (ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ತಪ್ಪದೇ ಅಧಿಕೃತ ಅಧಿಸೂಚನೆಯನ್ನು ಓದಬೇಕು.)
✓ ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ (ಗುತ್ತಿಗೆ ಆಧಾರದ ಮೇಲೆ) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಕಂಪ್ಯೂಟರ್ ಅಪ್ಲಿಕೇಶನ್ನಲ್ಲಿ ಪ್ರಮಾಣೀಕರಿಸಿದ ಕೋರ್ಸ್ ಪೂರ್ಣಗೊಳಿಸಿರಬೇಕು.
ವಯೋಮಿತಿ:
01-11-2025 ರಂತೆ;
ಮ್ಯಾನೇಜರ್ ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ – 55 ವರ್ಷಗಳು ಅಸಿಸ್ಟೆಂಟ್ ಹುದ್ದೆಗೆ ಗರಿಷ್ಠ ವಯಸ್ಸಿನ ಮಿತಿ – 40 ವರ್ಷಗಳು
ಡೆಪ್ಯುಟೇಶನ್ ಅಭ್ಯರ್ಥಿಗಳಿಗೆ ಮಾತ್ರ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ವಿಧಾನ:
ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್ಲಿಸ್ಟ್ ಸಂದರ್ಶನ ದಾಖಲೆ ಪರಿಶೀಲನೆ
ಸಂಬಳ:
ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಪೇರೆಂಟ್-ಪೇ ಜೊತೆಗೆ ಅನ್ವಯವಾಗುವ ಭತ್ಯೆಗಳು ಹಾಗೂ ಅಸಿಸ್ಟೆಂಟ್ ಹುದ್ದೆಗಳಿಗೆ 28,000ರೂ.ವರೆಗೆ ವೇತನವನ್ನು ನೀಡಲಾಗುತ್ತದೆ
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು K-RIDE ವೃತ್ತಿ ಜೀವನದ ಅಧಿಕೃತ ಜಾಲತಾಣ https://kride.in/careers-in-k-ride/ಕ್ಕೆ ಭೇಟಿ ನೀಡಿ.
• “K-RIDE/HR/195/ಖಾಲಿ ಹುದ್ದೆಗಳ ಅಧಿಸೂಚನೆ/07/2025” – ಡೆಪ್ಯುಟೇಷನ್/ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿ ವಿಭಾಗದಲ್ಲಿ ನೀಡಲಾಗಿರುವ “ಈಗಲೇ ಅನ್ವಯಿಸಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ವಿವರಗಳನ್ನು ನಮೂದಿಸಿ. ಭಾವಚಿತ್ರ, ಸಹಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ಸಲ್ಲಿಸಿ.
• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.