Karnataka Bank CSA Exam Call Letter 2024:ಕರ್ನಾಟಕ ಬ್ಯಾಂಕ್ ನಲ್ಲಿ ಖಾಲಿ ಇರುವ ಗ್ರಾಹಕ ಸೇವಾ ಸಹಾಯಕ (CSA) ಹುದ್ದೆಗಳ ನೇಮಕಾತಿಗಾಗಿ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿ, ಮುಕ್ತಾಯವಾಗಿತ್ತು. ಈ ನೇಮಕಾತಿಗಾಗಿ ನಡೆಸುವ ಕಂಪ್ಯೂಟರ್ ಆಧಾರಿತ ಆನ್ ಲೈನ್ ಪರೀಕ್ಷೆ(CBT)ಯನ್ನು ಡಿಸೆಂಬರ್ 15, 2024ರಂದು ನಡೆಯಲಿದ್ದು, ಇಂದು ಈ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ.
ಈ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಧಿಕೃತ ಜಾಲತಾಣದಲ್ಲಿ ನಿಮ್ಮ ಲಾಗಿನ್ ವಿಳಾಸವನ್ನು ನಮೂದಿಸುವ ಮೂಲಕ ನಿಮ್ಮ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.