Karnataka Bank SO Recruitment 2025: ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆಗಿರುವ ಕರ್ನಾಟಕ ಬ್ಯಾಂಕಿನಲ್ಲಿ ಖಾಲಿ ಇರುವ ಒಟ್ಟು 75 ಸ್ಪೆಷಲಿಸ್ಟ್ ಆಫೀಸರ್ಸ್ ಸ್ಕೇಲ್-1 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿ, ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸದರಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಬ್ಯಾಂಕ್ ನ ಅಧಿಕೃತ ಅಂತರ್ಜಾಲಕ್ಕೆ ಭೇಟಿ ನೀಡಿ. ಸಲ್ಲಿಕೆಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ ಹಾಗೂ ಇತರೆ ಸಂಪೂರ್ಣ ಅಧಿಕೃತ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಕೋನವರೆಗೂ ಓದಿ, ತಪ್ಪದೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
Organization Name – Karnataka Bank Ltd Post Name – Chartered Accountant, Law Office, Specialist Officer, IT Specialist Total Vacancy – 75 Application Process – Online Job Location – All India (Karnataka)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮಾರ್ಚ್ 20 ರಿಂದ ಪ್ರಾರಂಭವಾಗಿ, ಮಾರ್ಚ್ 25 ವರೆಗೆ ಕಾಲಾವಕಾಶ ನೀಡಲಾಗಿದೆ.
ಹುದ್ದೆಗಳ ವಿವರಗಳು:
ಚಾರ್ಟೆಡ್ ಅಕೌಂಟೆಂಟ್ – 25 ಹುದ್ದೆಗಳು ಕಾನೂನು ಅಧಿಕಾರಿ – 10 ಹುದ್ದೆಗಳು ಸ್ಪೆಷಲಿಸ್ಟ್ ಆಫೀಸರ್ – 10 ಹುದ್ದೆಗಳು ಐಟಿ ಸ್ಪೆಷಲಿಸ್ಟ್ – 30 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು;
ಕಾನೂನು ಸ್ನಾತಕೋತ್ತರ (LLM) + 2024, 2025 ಬ್ಯಾಚ್‌ಗಳ ಅಭ್ಯರ್ಥಿಗಳಾಗಿರಬೇಕು.
ಸ್ಪೆಷಲಿಸ್ಟ್ ಆಫೀಸರ್
ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (MBA) + ಒಟ್ಟು 70% ಅಂಕಗಳೊಂದಿಗೆ 2024,2025 ಬ್ಯಾಚ್‌ಗಳ ಅಭ್ಯರ್ಥಿಗಳಾಗಿರಬೇಕು.
ಐಟಿ ಸ್ಪೆಷಲಿಸ್ಟ್
ಬ್ಯಾಚುಲರ್ ಆಫ್ ಎಂಜಿನಿಯರಿಂಗ್ (BE) – IT/ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (MCA) / ಮಾಸ್ಟರ್ ಆಫ್ ಟೆಕ್ನಾಲಜಿ (MTech) – IT+ ಒಟ್ಟು 70% ಅಂಕಗಳೊಂದಿಗೆ 2024,2025 ಬ್ಯಾಚ್‌ಗಳ ಅಭ್ಯರ್ಥಿಗಳಾಗಿರಬೇಕು.
ಆಯ್ಕೆ ಪ್ರಕ್ರಿಯೆ:
ಶಾರ್ಟ್‌ಲಿಸ್ಟ್
ಸಂದರ್ಶನ
ಸಂಬಳ:
ವೇತನ ಶ್ರೇಣಿ- ₹48480-2000/7-62480-2340/2-67160-2680/7-85920
ಅರ್ಜಿ ಶುಲ್ಕ:
ಅರ್ಜಿ ಶುಲ್ಕದ ಕುರಿತು ಅಧಿಸೂಚನೆಯಲ್ಲಿ ಮಾಹಿತಿ ನೀಡಿಲ್ಲ.
How to Apply for Karnataka Bank SO Recruitment 2025
ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
ನಂತರ “Careers” ಕ್ಲಿಕ್ ಮಾಡಿ ಮುಂದೆ “Recruitment Notification – Specialist officers (Probationary) – Scale I’ ನಲ್ಲಿ “Apply Now” ಮೇಲೆ ಕ್ಲಿಕ್ ಮಾಡಿ. (ನಾವು ಕೆಳಗೆ ನೀಡಿರುವ ಡೈರೆಕ್ಟ್ ಲಿಂಕ್ ಮೂಲಕ ಭೇಟಿ ನೀಡಿ)
ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ