DCET 2024 Key Answer(OUT): ಲಿಂಕ್ ಕ್ಲಿಕ್ ಮಾಡುವ ಮೂಲಕ PDF ಡೌನ್ಲೋಡ್ ಮಾಡಿ

Published on:

ಫಾಲೋ ಮಾಡಿ
Karnataka DCET Key Answer 2024
Karnataka DCET Key Answer 2024

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ್ದ ಡಿಪ್ಲೋಮಾ ಸಾಮಾನ್ಯ ಪರೀಕ್ಷೆ Diploma Common Entrance Test (DCET) 2024ರ ತಾತ್ಕಾಲಿಕ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಕರ್ನಾಟಕ ಡಿಸಿಟಿ 2024ರ ಪರೀಕ್ಷೆಯನ್ನು ಜೂನ್ 22ರಂದು ನಡೆಸಲಾಗಿತ್ತು, ಈ ಪರೀಕ್ಷೆಗೆ ಸಂಬಂಧಿಸಿದ ತಾತ್ಕಾಲಿಕ ಕೀ ಉತ್ತರಗಳನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಕೀ ಉತ್ತರಗಳಗೆ ಸಂಬಂಧಿಸಿದಂತೆ ಗೊಂದಲ ಅಥವಾ ಆಕ್ಷೇಪಣೆಗಳಿದ್ದರೆ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಪ್ರತಿ ಉತ್ತರಕ್ಕೂ ಅಕ್ಷೇಪಣೆಯನ್ನು ಸಲ್ಲಿಸಬಹುದು. ಕೀ ಉತ್ತರಗಳ ಜೊತೆಗೆ‌ ಪ್ರಕಟಿಸಲಾಗಿರುವ ಕೀ ಉತ್ತರಗಳಿಗೆ ಅಕ್ಷೇಪಣಿ ಸಲ್ಲಿಸಲು ಅಭ್ಯರ್ಥಿಗಳಿಗೆ  ವೆಬ್ ಸೈಟಿನಲ್ಲಿ ಪ್ರತ್ಯೇಕ ಲಿಂಕ್ ಒದಗಿಸಲಾಗಿದ್ದು, ಇದರ ಮೂಲಕ ಆಕ್ಷೇಪಣೆಯನ್ನು ಸಲ್ಲಿಸಬಹುದು. ಆಕ್ಷೇಪಣೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ವರ್ಷನ್ ಕೋಡ್, ಪ್ರಶ್ನ ಪತ್ರಿಕೆಯ ಪ್ರಶ್ನೆಯ ಸಂಖ್ಯೆ ವಿವರಗಳೊಂದಿಗೆ Justification ಅನ್ನು PDF ರೂಪದಲ್ಲಿ ಸಲ್ಲಿಸಬೇಕು.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment