Karnataka Free Bicycle Scheme 2023: 8ನೇ ತರಗತಿ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ, ಉಚಿತ ಬೈಸಿಕಲ್ ವಿತರಣೆ ಕಾರ್ಯಕ್ರಮ ಮತ್ತೆ ಪ್ರಾರಂಭ

Follow Us:

Karnataka Free Bicycle Scheme 2023: ಕರ್ನಾಟಕ ಹೆಲ್ಪ್ ನ ಓದುಗರಿಗೆ ವಂದನೆ, ಕರ್ನಾಟಕ ಸರ್ಕಾರದ ಉಚಿತ ಸೈಕಲ್ ವಿತರಣೆ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಉಚಿತ ಸೈಕಲ್ ವಿತರಣೆ ಯೋಜನೆ 2023: ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳ ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಠಿಯಿಂದ “ಉಚಿತ ಬೈಸಿಕಲ್ ವಿತರಣೆ ಕಾರ್ಯಕ್ರಮ”(Free Bicycle Distribution Scheme 2023)ವನ್ನು 2006-07ನೇ ಸಾಲಿನಿಂದ ಪ್ರಾರಂಭಿಸಲಾಗಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 8ನೇ ತರಗತಿಯ ಓದುತ್ತಿರುವ ಮಕ್ಕಳಿಗೆ ಈ ಸೌಲಭ್ಯ ಒದಗಿಸಲಾಗಿತ್ತು.

Free Bicycle Distribution Scheme 2023

ಬಸ್ ಪಾಸ್ ಹೊಂದಿದ ಹಾಗೂ ಹಾಸ್ಟೆಲ್ ಸೌಲಭ್ಯ ಪಡೆದ ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ನೀಡಿರುವುದಿಲ್ಲ. 2007-08ನೇ ಸಾಲಿನಿಂದ ಈ ಯೋಜನೆಯನ್ನು ನಗರ ಪ್ರದೇಶದ ಬಿ.ಪಿ.ಎಲ್ ಕುಟುಂಬದ ಹೆಣ್ಣು ಮಕ್ಕಳಿಗೂ ಹಾಗೂ ಗಂಡು ಮಕ್ಕಳಿಗೂ ವಿಸ್ತರಿಸಲಾಯಿತು.

ಈ ಯೋಜನೆಯ ಸೌಲಭ್ಯವನ್ನ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 8ನೇ ತರಗತಿಗೆ ದಾಖಲಾದ ಬಾಲಕ/ಬಾಲಕಿಯರಿಗೆ ಸೈಕಲ್ ವಿತರಣೆ ಮಾಡಲಾಗುತ್ತಿತ್ತು. ಕಳೆದ ಹಲವು ವರ್ಷಗಳಿಂದ ಕಾರಣಾಂತರದಿಂದ ಸ್ಥಗಿತವಾಗಿತ್ತ ಈ ಯೋಜನೆಯನ್ನ ಮತ್ತೆ ಪ್ರಾರಂಭಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.

Karnataka Free Bicycle Scheme 2023
Karnataka Free Bicycle Scheme 2023

ಹೌದು, ಈ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಪ್ರಸ್ತಾಪಿಸಿದ್ದರು. ಇದೀಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಾನ್ಯ ಸಚಿವರಾದ ಶ್ರೀ ಮಧು ಬಂಗಾರಪ್ಪನವರು ಪ್ರತಿಕ್ರಿಯಿಸಿದ್ದಾರೆ. ಮುಂಬರುವ ಶೈಕ್ಷಣಿಕ ವರ್ಷದಿಂದ 8ನೇ ತರಗತಿ ಮಕ್ಕಳಿಗೆ ಬೈಸಿಕಲ್ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಯೋಜನೆಯ ಮುಖ್ಯ ಉದ್ದೇಶಗಳು:

  • ಮಕ್ಕಳ ದಾಖಲಾತಿಯನ್ನು ಉತ್ತೇಜಿಸುವುದು.
  • ಮಕ್ಕಳು ದೂರದಲ್ಲಿರುವ ಶಾಲೆಯನ್ನು ತಲುಪಲು ಅನುಕೂಲ ಮಾಡುವುದು.
  • ಮಕ್ಕಳ ಕಲಿಕೆ ಹಾಗೂ ಉಳಿಯುವಿಕೆಯನ್ನು ಉತ್ತಮ ಪಡಿಸುವುದು.
  • ಮಕ್ಕಳ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದು.
  • ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವುದು.
  • ಪ್ರಯಾಣದ ವೇಳೆಯನ್ನು ತಗ್ಗಿಸುವುದು.

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ | Karnataka Free Sewing Machine Scheme 2023 Apply Online

‘ಐರಾವತ ಯೋಜನೆ’ 4.00 ಲಕ್ಷ ಸಹಾಯಧನ | Airavata Scheme Karnataka Online Application 2023