ಭಾರತೀಯ ಅಂಚೆ ಇಲಾಖೆಯು ದೇಶದಾದ್ಯಂತ ಒಟ್ಟು 21,413 ಜಿಡಿಎಸ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿತ್ತು, ಸದರಿ ಹುದ್ದೆಗಳ ಪೈಕಿ ಕರ್ನಾಟಕದಲ್ಲಿ ಒಟ್ಟು 1135 ಹುದ್ದೆಗಳಿಗೆ ಮೊದಲನೇ ಮೆರಿಟ್ ಲಿಸ್ಟ್ ಪಟ್ಟಿಯನ್ನು ಮಾರ್ಚ್ 21ರಂದು ಬಿಡುಗಡೆ ಮಾಡಲಾಗಿತ್ತು. ಇದೀಗ ಎರಡನೇ ಮೆರಿಟ್ ಲಿಸ್ಟ್ ಪಟ್ಟಿ(Karnataka GDS 2nd Merit List 2025)ಯನ್ನು ಇಲಾಖೆಯು ಬಿಡುಗಡೆ ಮಾಡಿದೆ.
ಕರ್ನಾಟಕ ಅಂಚೆ ಕಚೇರಿಯಲ್ಲಿ 1,135 GDS ಹುದ್ದೆಗಳ ನೇಮಕಾತಿ 2025 ಗೆ ಸಂಬಂಧಿಸಿದಂತೆ ಎರಡನೇ ಮೆರಿಟ್ ಲಿಸ್ಟ್ ಪಟ್ಟಿಯನ್ನು ಇಲಾಖೆಯು ತನ್ನ ಅಧಿಕೃತ ವೆಬ್ಸೈಟ್ indiapostgdsonline.cept.gov.inನಲ್ಲಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ರಾಜ್ಯವಾರು ಎರಡನೇ ಮೆರಿಟ್ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೆ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
Karnataka GDS 2nd Merit List 2025 – ದಾಖಲೆ ಪರಿಶೀಲನೆ
ಅಭ್ಯರ್ಥಿಗಳು ಆಯ್ಕೆ ಮಾಡಿದ ಪ್ರದೇಶ ಹಾಗೂ ಮಾಧ್ಯಮಿಕ ಶಾಲಾ ಪರೀಕ್ಷೆಯಲ್ಲಿ ಅವರ ಅಂಕಗಳ ಆಧಾರದ ಮೇಲೆ ಎರಡನೇ ಮೆರಿಟ್ ಲಿಸ್ಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮೆರಿಟ್ ಲಿಸ್ಟ್ ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಹೆಸರಿನ ಮುಂದೆ ವಿಭಾಗಕ್ಕೆ ಮೇ 05, 2025ರೊಳಗೆ ಭೇಟಿ ನೀಡಿ ದಾಖಲೆ ಪರಿಶೀಲನೆಗೆ ಹಾಜರಾಗಬೇಕು.
How to Download Karnataka GDS 2nd Merit List 2025
ಮೆರಿಟ್ ಲಿಸ್ಟ್ ಡೌನ್ಲೋಡ್ ಮಾಡುವ ವಿಧಾನ
ಇಂಡಿಯಾ ಪೋಸ್ಟ್ ಜೆಡಿಎಸ್ ನ ಅಧಿಕೃತ ವೆಬ್‌ಸೈಟ್ https://indiapostgdsonline.cept.gov.in/HomePageS/D11.aspx# ಗೆ ಭೇಟಿ ನೀಡಿ.
ನೀವು ಅರ್ಜಿ ಸಲ್ಲಿಸಿರುವ ರಾಜ್ಯದ ಮೇಲೆ ಕ್ಲಿಕ್ ಮಾಡಿ.
ಪೂರಕ ಪಟ್ಟಿ – ॥ ಮೇಲೆ ಕ್ಲಿಕ್ ಮಾಡಿ. PDF ಡೌನ್‌ಲೋಡ್ ಮಾಡಿ.
ಭವಿಷ್ಯದ ಉಲ್ಲೇಖಕ್ಕಾಗಿ ಮೆರಿಟ್ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Cntrl + F ಒತ್ತಿ ನಿಮ್ಮ ನೋಂದಣಿ ಸಂಖ್ಯೆ ಅಥವಾ ಹೆಸರನ್ನು ಹುಡುಕಿ.
Hi Hello