ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯ(ಹೈಕೋರ್ಟ್)ವು ಉಳಿಕೆ ಮೂಲ ವೃಂದ ಮತ್ತು ಕೆಕೆ ವೃಂದದ ನಾನಾ ಗ್ರೂಪ್ ಡಿ ಹುದ್ದೆಗಳ ನೇಮಕಾತಿಗಾಗಿ ಪರಿಷ್ಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಜು.31ರವೆರೆಗೆ ಗಡುವು ನೀಡಿದೆ.
ಜವಾನ, ಕಾವಲುಗಾರ, ಸ್ವೀಪರ್ ಹಾಗೂ ಜವಾನ(ಹೌಸ್ ಕೀಪಿಂಗ್) ಲಿಫ್ಟ್ ಅಟೆಂಡರ್, ಸಹಾಯಕ ಬೈಂಡರ್, ದರ್ಜಿ, ಧೋಬಿ(ಟೈಲರ್)ಸೇರಿದಂತೆ ಒಟ್ಟು 98 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಅರ್ಜಿದಾರರು ಕರ್ನಾಟಕ ಹೈಕೋರ್ಟ್ ಅಧಿಕೃತ ಜಾಲತಾಣ https://judiciary.karnataka.gov.in/recsubnotify.php?p=1149&stateNM= ಕ್ಕೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಗಮನಿಸಿ: ಹಿಂದಿನ ಅಧಿಸೂಚನೆ ಸಂಖ್ಯೆ HCRB 8/2025 -(ಗ್ರೂಪ್ ಡಿ)ರಡಿ ಅಧಿಸೂಚಿತ ನೇಮಕಾತಿಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ಹೊಸದಾಗಿ ಅರ್ಜಿಯನ್ನು ಸಲ್ಲಿಸುವುದು ಮತ್ತು ಶುಲ್ಕವನ್ನು ಪಾವತಿಸುವ ಅವಶ್ಯಕತೆಯಿರುವುದಿಲ್ಲ ಎಂದು ಮಾನ್ಯ ಉಚ್ಚ ನ್ಯಾಯಾಲಯವು ಗೆಜೆಟೆಡ್ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
- ಪರಿಷ್ಕೃತ ಅಧಿಸೂಚನೆಯ ದಿನಾಂಕ – ಜುಲೈ 02, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 31, 2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜುಲೈ 31, 2026
ಸವಿಸ್ತಾರವಾಗಿ ಹುದ್ದೆಗಳ ವಿವರ:
ಮೂಲ ಉಳಿಕೆ ವೃಂದದ ಹುದ್ದೆಗಳ ವಿವರ;
| ಜವಾನ ಕಾವಲುಗಾರ ಸ್ವೀಪರ್ ಜವಾನ (ಹೌಸ್ ಕೀಪಿಂಗ್) | 89+01(ಬ್ಯಾಕ್‌ಲಾಗ್) |
| ಲಿಫ್ಟ್ ಅಟೆಂಡರ್ | 05 |
| ಸಹಾಯಕ ಬೈಂಡರ್ | 01 |
| ದರ್ಜಿ | 01 |
| ಧೋಬಿ | 01 |
ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳ ವಿವರ;
| ಜವಾನ ಸ್ವೀಪರ್ ಜವಾನ (ಹೌಸ್ ಕೀಪಿಂಗ್) | 08 |
ಶೈಕ್ಷಣಿಕ ಅರ್ಹತೆ:
✓ ಜವಾನ, ಕಾವಲುಗಾರ, ಸ್ವೀಪರ್, ಜವಾನ (ಹೌಸ್ ಕೀಪಿಂಗ್) ಹುದ್ದೆಗಳಿಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
✓ ಲಿಫ್ಟ್ ಅಟೆಂಡರ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಲಿಫ್ಟ್ ಮೆಕ್ಯಾನಿಸಂನಲ್ಲಿ ಅನುಭವವನ್ನು ಹೊಂದಿರಬೇಕು.
✓ ಸಹಾಯಕ ಬೈಂಡರ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಬೈಂಡಿಗ್ ಕೆಲಸದಲ್ಲಿ 02 ವರ್ಷಗಳ ಅನುಭವವನ್ನು ಹೊಂದಿರಬೇಕು.
✓ ದರ್ಜಿ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ದರ್ಜಿ ಕೆಲಸದಲ್ಲಿ 03 ವರ್ಷಗಳ ಅನುಭವವನ್ನು ಹೊಂದಿರಬೇಕು.
✓ ಧೋಬಿ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಧೋಬಿ ಕೆಲಸದಲ್ಲಿ ಅನುಭವವನ್ನು ಹೊಂದಿರಬೇಕು.
ವಯೋಮಿತಿ:
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಗರಿಷ್ಠ ವಯೋಮಿತಿ;
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷಗಳು
ಇತರೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 43 ವರ್ಷಗಳು
ಪ.ಜಾತಿ, ಪ.ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷಗಳು
ಆಯ್ಕೆ ವಿಧಾನ:
- ಅರ್ಹತಾ ಪರೀಕ್ಷೆ
- ಅರ್ಹ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
- ಸಂದರ್ಶನ
- ಅಂತಿಮ ಆಯ್ಕೆ
ಸಂಬಳ:
ಜವಾನ, ಕಾವಲುಗಾರ, ಸ್ವೀಪರ್, ಹೌಸ್ ಕೀಪಿಂಗ್, ಸಹಾಯಕ ಬೈಂಡರ್ ಹಾಗೂ ಧೋಬಿ ಹುದ್ದೆಗಳಿಗೆ ವೇತನ ಶ್ರೇಣಿ ₹19,900-63,200/-
ಲಿಫ್ಟ್ ಅಟೆಂಡರ್ ಹಾಗೂ ದರ್ಜಿ ಹುದ್ದೆಗಳಿಗೆ ವೇತನ ಶ್ರೇಣಿ ₹21,700-69,100/-
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ₹200
ಪ.ಜಾತಿ, ಪ.ಪಂಗಡ, ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ₹100
ಹೇಗೆ ಅರ್ಜಿ ಸಲ್ಲಿಸುವುದು?
• ಕರ್ನಾಟಕ ಹೈಕೋರ್ಟ್ ಅಧಿಕೃತ ಜಾಲತಾಣ https://judiciary.karnataka.gov.in/recsubnotify.php?p=1242&stateNM=ಕ್ಕೆ ಭೇಟಿ ನೀಡಿ.
• *ಗ್ರೂಪ್-ಡಿ 2026ರ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ” ಶೀರ್ಷಿಕೆಯ ಕೆಳಗೆ ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯ ಆನ್ ಲೈನ್ ಅರ್ಜಿಯನ್ನು ಆರಿಸಿ.
• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ, ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಮುಂದುವರೆದಂತೆ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Important Direct Links:
| Official Revised Notification PDF Dated On 02/07/2026 | Download |
| Online Application Form Link | Visit and Apply |
| Official Website | judiciary.karnataka.gov.in |
| More Updates | KarnatakaHelp.in |
Davalabi fakkirasab nadaf
Job
Arun
Job
I have completed my 10th successfully with 89 percentage
I’m interest
I have completed my 10th successfully with 94percentage
ಯಾದಗಿರಿ ಗ್ರಂಥಾಲಯ ಮೇಲಾವಿಚಾರಕರ ನೇಮಕಾತಿ
Siddayya s/O gyanappa