“ಹೈಕೋರ್ಟ್‌”ನಲ್ಲಿ ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ನೇಮಕಾತಿ; ಮರು ಅರ್ಜಿ ಆಹ್ವಾನ

ನೇರ ನೇಮಕಾತಿ | ಅರ್ಜಿ ಸಲ್ಲಿಕೆಗೆ ಜು.30ರ ಗಡುವು

Published on:

ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯ(ಹೈಕೋರ್ಟ್‌) ಕಲ್ಯಾಣ ಕರ್ನಾಟಕ ಹಾಗೂ ಮೂಲ ಉಳಿಕೆ ವೃಂದದ ಸಹಾಯಕ ನ್ಯಾಯಾಲಯ ಕಾರ್ಯದರ್ಶಿ(ಅಸಿಸ್ಟಂಟ್‌ ಕೋರ್ಟ್‌ ಸೆಕ್ರಟರಿ) ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆ ಪರಿಷ್ಕೃತ ಅಧಿಸೂಚನೆ ಹೊರಡಿಸಿದೆ.

ಕಲ್ಯಾಣ ಕರ್ನಾಟಕ ವೃಂದ 12 (07 ಬ್ಯಾಕ್‌ಲಾಗ್‌ ಹುದ್ದೆ ಸೇರಿದಂತೆ) ಸ್ಥಾನ, ಮೂಲ ಉಳಿಕೆ ವೃಂದ(RPC) 73 (06 ಬ್ಯಾಕ್‌ಲಾಗ್‌ ಹುದ್ದೆ ಸೇರಿದಂತೆ) ಸ್ಥಾನ ಸೇರಿದಂತೆ ಒಟ್ಟು 85 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಜು.30ರವರೆಗೆ ಕಾಲಾವಕಾಶ ನೀಡಲಾಗಿದ್ದು, ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಕೃತ ಜಾಲತಾಣ https://judiciary.karnataka.gov.in/recsubnotify.php?p=1149&stateNM=ಕ್ಕೆ ಭೇಟಿ ನೀಡಿ.

ಗಮನಿಸಿ: ಸದರಿ ನೇಮಕಾತಿಗೆ ಈ ಹಿಂದೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ಹೊಸದಾಗಿ ಅರ್ಜಿಯನ್ನು ಸಲ್ಲಿಸುವುದು ಮತ್ತು ಶುಲ್ಕವನ್ನು ಪಾವತಿಸುವ ಅಗತ್ಯತೆ ಇಲ್ಲವೆಂದು ಮಾನ್ಯ ಉಚ್ಚ ನ್ಯಾಯಾಲಯವು ಗೆಜೆಟೆಡ್‌ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:

  • ಪರಿಷ್ಕೃತ ಅಧಿಸೂಚನೆ ಪ್ರಕಟಣೆ ದಿನಾಂಕ – ಜುಲೈ 01, 2026
  • ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜುಲೈ 30, 2026

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ಪದವಿ (ವಿಜ್ಞಾನ/ಕಲೆ/ವಾಣಿಜ್ಯ/ವ್ಯವಹಾರ ನಿರ್ವಹಣೆ/ಕಂಪ್ಯೂಟರ್ ಅಪ್ಲಿಕೇಷನ್ಸ್/ ವ್ಯವಹಾರ ಆಡಳಿತ/ತತ್ಸಮಾನ ಪರೀಕ್ಷೆ)ಯಲ್ಲಿ ಉತ್ತೀರ್ಣರಾಗಿರಬೇಕು.

ಮತ್ತು

ಆಂಗ್ಲ ಶೀಘ್ರಲಿಪಿ ಪ್ರೌಢ ದರ್ಜೆ/ಆಂಗ್ಲ ಶೀಘ್ರಲಿಪಿ ಪ್ರೋಫಿಶಿಯನ್ಸಿ ಮತ್ತು ಬೆರಳಚ್ಚು ಪ್ರೌಢ ದರ್ಜೆ ಪರೀಕ್ಷೆ/ಆಂಗ್ಲ ಕಮರ್ಷಿಯಲ್ ಪ್ರಾಕ್ಟಿಸ್ /ಸೆಕ್ರೆಟೇರಿಯಲ್ ಪ್ರಾಕ್ಟಿಸ್ ಡಿಪ್ಲೋಮಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಜೊತೆಗೆ ಕಂಪ್ಯೂಟರ್ ನಿರ್ವಹಣಾ ಜ್ಞಾನ (ಕಂಪ್ಯೂಟರ್ ಬೇಸಿಕ್ಸ್ ಕೋರ್ಸಿನ ಪ್ರಮಾಣಪತ್ರ) ವನ್ನು ಹೊಂದಿರಬೇಕು.

ವಯೋಮಿತಿ:

ಕನಿಷ್ಠ ಮಿತಿ 18 ವರ್ಷಗಳು

ಗರಿಷ್ಠ ಮಿತಿ; ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷಗಳು, ಇತರೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 43 ವರ್ಷಗಳು, ಪ.ಜಾತಿ, ಪ.ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷಗಳು

ಆಯ್ಕೆ ವಿಧಾನ:

  • ಅರ್ಹ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
  • ಶೀಘ್ರಲಿಪಿ ಪರೀಕ್ಷೆ
  • ಸಂದರ್ಶನ
  • ಅಂತಿಮ ಆಯ್ಕೆ

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಹೈಕೋರ್ಟ್ ನಿಯಮಗಳ ಅನುಸಾರ ಮಾಹೆಯಾನ ₹44,900 ಗಳಿಂದ ₹1,42,400ವರೆಗೆ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ₹500
ಪ.ಜಾತಿ, ಪ.ಪಂಗಡ, ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ – ₹250

ಅರ್ಜಿ ಸಲ್ಲಿಕೆ ವಿಧಾನ

• ಅಭ್ಯರ್ಥಿಗಳು ಕರ್ನಾಟಕ ಹೈಕೋರ್ಟ್ ಅಧಿಕೃತ ಜಾಲತಾಣ https://judiciary.karnataka.gov.in/recsubnotify.php?p=1149&stateNM= ಕ್ಕೆ ಭೇಟಿ ನೀಡಿ.

• *ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗೆ ನೇಮಕಾತಿಗಾಗಿ* ಶೀರ್ಷಿಕೆ ಕೆಳಗೆ ನೀಡಲಾಗಿರುವ “ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ” ಆಯ್ಕೆಯನ್ನು ಆರಿಸಿ.

• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ, ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ಮುಂದುವರೆದಂತೆ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.

• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

Important Direct Links:

Official Notification PDF (KKR and RPC) Dated on 01/07/2026Download
Online Application Link (KKR)Apply Now
Online Application Link (RPC)Apply Now
Official Websitejudiciary.karnataka.gov.in
More UpdatesKarnatakaHelp.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

6 thoughts on ““ಹೈಕೋರ್ಟ್‌”ನಲ್ಲಿ ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ನೇಮಕಾತಿ; ಮರು ಅರ್ಜಿ ಆಹ್ವಾನ”

Leave a Comment