ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯವು ದತ್ತಾಂಶ ನಮೂದು ಸಹಾಯಕ(ಡೇಟಾ ಎಂಟ್ರಿ ಅಸಿಸ್ಟಂಟ್) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಉಳಿದ ಮೂಲ ವೃಂದದ 15+6(ಉಳಿಕೆ) ಸ್ಥಾನ ಹಾಗೂ ಕಲ್ಯಾಣ ಕರ್ನಾಟಕ ವೃಂದ 2+5(ಉಳಿಕೆ) ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ಜರುಗಲಿದೆ. ಅರ್ಹ ಅಭ್ಯರ್ಥಿಗಳನ್ನು ಅರ್ಹತಾ ಪರೀಕ್ಷೆ, ಬೆರಳಚ್ಚು ಪರೀಕ್ಷೆ, ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ. ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜು.28 ಕೊನೆಯ ದಿನವಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಕೃತ ಜಾಲತಾಣ https://judiciary.karnataka.gov.in/recsubnotify.php?p=1239&stateNM=ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಿ.
ಪ್ರಮುಖ ದಿನಾಂಕಗಳು:
- ಅಧಿಕೃತ ಅಧಿಸೂಚನೆಯ ದಿನಾಂಕ – ಜೂನ್ 29
- ಅರ್ಜಿ ಸಲ್ಲಿಕೆಗೆ ಹಾಗೂ ಶುಲ್ಕ ಪಾವತಿಸಲು ಕೊನೆ ದಿನಾಂಕ -ಜುಲೈ 28
ಶೈಕ್ಷಣಿಕ ಅರ್ಹತೆ:
ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ, ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎ/ಬಿ.ಎಸ್ಸಿ/ಬಿ.ಕಾಂ/ಬಿಬಿಎಂ/ಬಿಸಿಎ ಪದವಿ ಹೊಂದಿರಬೇಕು. ಜೊತೆಗೆ ಆಂಗ್ಲ(ಇಂಗ್ಲೀಷ್) ಮತ್ತು ಕನ್ನಡ ಬೆರಳಚ್ಚು ಪ್ರೌಢ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ವಯೋಮಿತಿ:
28-07-2026ರಂತೆ; ಕನಿಷ್ಠ 18 ವರ್ಷ
ಗರಿಷ್ಠ ವಯಸ್ಸಿನ ಮಿತಿ; ಸಾಮಾನ್ಯ ವರ್ಗದವರಿಗೆ 40 ವರ್ಷ, ಇತರೆ ಹಿಂದುಳಿದ ವರ್ಗಗಳ ಪ್ರವರ್ಗ I(ಎ)/II(ಬಿ)/III(ಎ)/III(ಬಿ) ವರ್ಗದವರಿಗೆ 43 ವರ್ಷ ಮತ್ತು ಪ.ಜಾ/ಪ.ಪಂ/ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಪ್ರವರ್ಗ-I 45 ವರ್ಷ.
ಆಯ್ಕೆ ವಿಧಾನ:
- ಅರ್ಹತಾ ಪರೀಕ್ಷೆ
- ಬೆರಳಚ್ಚು ಪರೀಕ್ಷೆ
- ಸಂದರ್ಶನ
ಸಂಬಳ:
ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.25500 ರಿಂದ 81100/- (ಲೆವೆಲ್-4) ಜೊತೆಗೆ ಭತ್ಯೆ ಸೌಲಭ್ಯವಿರಲಿದೆ.
ಅರ್ಜಿ ಶುಲ್ಕ:
• ಸಾಮಾನ್ಯ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ I(ಎ)/II(ಬಿ)/III(ಎ)/III(ಬಿ) ವರ್ಗದ ಅಭ್ಯರ್ಥಿಗಳಿಗೆ ರೂ.350/-
• ಪ.ಜಾ/ಪ.ಪಂ/ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಪ್ರವರ್ಗ-I ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ರೂ.200/-
ಅರ್ಜಿ ಸಲ್ಲಿಕೆ ಪರಿ ಹೇಗೆ..?
ಹಂತ-1 ಅಧಿಕೃತ ಜಾಲತಾಣದ ಲಿಂಕ್ https://judiciary.karnataka.gov.in/recsubnotify.php?p=1239&stateNM=ಗೆ ಭೇಟಿ ನೀಡಿ.
ಹಂತ-2 ನಂತರ ತಾವು ಅರ್ಜಿ ಸಲ್ಲಿಸಲು ಇಚ್ಛಿಸುವ ವೃಂದದ ಲಿಂಕ್(Click here to Apply for Data Entry Assistant-RPC ಅಥವಾ Click here to Apply for Data Entry Assistant-KKR) ಮೇಲೆ ಕ್ಲಿಕ್ಕಿಸುವ ಮೂಲಕ ಅರ್ಜಿ ನಮೂನೆ ತೆರೆಯುರಿ, ತದನಂತರ “Online Application” ಮೇಲೆ ಕ್ಲಿಕ್ಕಿಸಿ, ಅರ್ಜಿದಾರರಿಗೆ ಸಾಮಾನ್ಯ ಸೂಚನೆಗಳು ಓದಿ, “Apply Now” ಮೇಲೆ ಒತ್ತು ಮೂಲಕ ಅರ್ಜಿ ನಮೂನೆ ತೆರೆಯುತ್ತದೆ. ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯಾನ್ನು ಸರಿಯಾಗಿ ತುಂಬಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಗೆ ಅನ್ವಯಿಸುವ ಅರ್ಜಿ ಶುಲ್ಕ ಭರಿಸಿ, ಅರ್ಜಿ ಸಲ್ಲಿಸಬಹುದು.
Important Direct Links:
| Official Notification PDF | Download |
| Online Application Form(HK) Link | Apply Now |
| Online Application Form(RPC) Link | Apply Now |
| Official Website | judiciary.karnataka.gov.in |
| More Updates | KarnatakaHelp.in |
M Udaya Gowda S/o TV Manjunath Gowda Vinoba road Shankar matha near srinivaspur
Priya k
Laxmi sanadi athani
Eeeee
Lakshminarayana
Bhagya