Karnataka SSLC Exam 3 Result 2024(OUT): SSLC ಪರೀಕ್ಷೆ -3 ರ ಫಲಿತಾಂಶ ಪ್ರಕಟ

Published on:

ಫಾಲೋ ಮಾಡಿ
Karnataka SSLC Exam 3 Result 2024
Karnataka SSLC Exam 3 Result 2024

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿದ್ದ 10ನೇ ತರಗತಿಯ ಪರೀಕ್ಷೆ -3 ರ ಫಲಿತಾಂಶವನ್ನು ಇಂದು ಮಧ್ಯಾಹ್ನ 12 ಕ್ಕೆ ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು KSEAB ಅಧಿಕೃತ ವೆಬ್ ಸೈಟಿನಲ್ಲಿ ಫಲಿತಾಂಶವನ್ನು ಆನ್ ಲೈನ್ ಮೂಲಕ ಪಡೆದುಕೊಳ್ಳಬಹುದಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇದುವರೆಗೂ SSLC ಯ ಎರಡು ಪರೀಕ್ಷೆಗಳನ್ನು ನಡೆಸಿದ್ದು ತಮ್ಮ ಎರಡೂ ಪ್ರಯತ್ನದಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ 3ನೇ ಪೂರಕ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗಳು ಅಗಸ್ಟ್ 2 ರಿಂದ ಅಗಸ್ಟ್ 9ರ ವರೆಗೆ ಕರ್ನಾಟಕದದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು. ಫಲಿತಾಂಶವನ್ನು ವೀಕ್ಷಿಸಲು ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಪೂರಕ ಪರೀಕ್ಷೆಯ ಫಲಿತಾಂಶ(SSLC Exam 3 Result 2024) ಪಡೆದುಕೊಳ್ಳಬಹುದು.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment