2025ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗಾಗಿ ಶಾಲಾ ಶಿಕ್ಷಣ ಇಲಾಖೆಯು ಶನಿವಾರ ಅಧಿಸೂಚನೆ ಹೊರಡಿಸಿದೆ.
ಅರ್ಜಿ ಸಲ್ಲಿಕೆ ಅ.23ರಿಂದ ಪ್ರಾರಂಭವಾಗಲಿದೆ. 1 ರಿಂದ 8ನೇ ತರಗತಿಯ ಶಿಕ್ಷಕರ ನೇಮಕಾತಿಗಾಗಿ ಕನಿಷ್ಠ ಅರ್ಹತೆ ಹೊಂದಲು ನಡೆಸುವ ಪರೀಕ್ಷೆಯಿದಾಗಿದ್ದು, ರಾಷ್ಟೀಯ ಶಿಕ್ಷಣ ಶಿಕ್ಷಕರ ಪರಿಷತ್(ಎನ್.ಸಿ.ಟಿ.ಇ.) ನಿಯಮಗಳ ಪ್ರಕಾರ ಕನಿಷ್ಠ ವಿದ್ಯಾರ್ಹತೆ ಹೊಂದಿರುವವರು ನ.9ರೊಳಗೆ https://schooleducation.karnataka.gov.in/ನ ಮೂಲಕ ನೋಂದಣಿ ಮಾಡಬಹುದು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ವಿಕಾಶ್ ಕಿಶೋರ್ ಸುರಳ್ಕರ್ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಆನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ – ಅಕ್ಟೋಬರ್ 23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ನವೆಂಬರ್ 09
ಕೆ.ಎಆರ್.ಟಿ.ಇ.ಟಿ ಪರೀಕ್ಷೆಯ ದಿನಾಂಕ – ಡಿಸೆಂಬರ್ 07 (ಭಾನುವಾರ)
ಕನಿಷ್ಠ ಶೈಕ್ಷಣಿಕ ಅರ್ಹತೆ:
1 ರಿಂದ 5ನೇ ತರಗತಿಗಳಿಗೆ (ಪತ್ರಿಕೆ-1) – ಪಿಯುಸಿ ಅಥವಾ ಪದವಿ ಕನಿಷ್ಟ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣ ಹಾಗೂ D.El.Ed/B.EL.Ed/ಡಿಪ್ಲೊಮಾ ಇನ್ ಎಜುಕೇಶನ್ (ವಿಶೇಷ ಶಿಕ್ಷಣ)/ಡಿಪ್ಲೊಮೋ ಇನ್ ಎಜುಕೇಶನ್ (ವಿಶೇಷ ಶಿಕ್ಷಣ)/ ಬಿ.ಇಡಿ ಪದವಿ ಪಡೆದಿರುವವರು ಅಥವಾ ಪ್ರವೇಶ ಪಡೆದು ಓದುತ್ತಿರುವ ಅಭ್ಯರ್ಥಿಗಳು.
6 ರಿಂದ 8ನೇ ತರಗತಿಗಳಿಗೆ (ಪತ್ರಿಕೆ-2) – ಪಿಯುಸಿ ಅಥವಾ ಪದವಿ ಕನಿಷ್ಟ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣ ಹಾಗೂ ಬಿ.ಇಡಿ ಪದವಿ/ಬ್ಯಾಚುಲರ್ ಇನ್ ಎಲಿಮೆಂಟರಿ ಎಜುಕೇಶನ್ನಲ್ಲಿ (B.ELEd)/D.El.Ed ಕೋರ್ಸ್ ತೇರ್ಗಡೆ ಹೊಂದಿರುವ ಅಥವಾ ಪ್ರವೇಶ ಪಡೆದು ಓದುತ್ತಿರುವ ಅಭ್ಯರ್ಥಿಗಳು.
ಪರೀಕ್ಷೆಯ ವೇಳಾಪಟ್ಟಿ ವಿವರ:
ಪರೀಕ್ಷಾ ದಿನಾಂಕ
ಪತ್ರಿಕೆ ಹೆಸರು
ಪರೀಕ್ಷೆಯ ಸಮಯ
07/12/2025 (ಭಾನುವಾರ)
ಪತ್ರಿಕೆ-1
ಬೆಳಗ್ಗೆ 9:30 ರಿಂದ ಮಧ್ಯಾಹ್ನ 12 ಗಂಟೆ
ಪತ್ರಿಕೆ-2
ಮಧ್ಯಾಹ್ನ 02 ರಿಂದ 4:30 ಗಂಟೆ
*ಅಂಗವಿಕಲ/ವಿಕಲಚೇತನ ಅಭ್ಯರ್ಥಿಗಳಿಗೆ 50 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಗುತ್ತದೆ.
ಅರ್ಜಿ ಶುಲ್ಕದ ವಿವರ:
ಸಾಮಾನ್ಯ ವರ್ಗ, 2ಎ, 2ಬಿ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳಿಗೆ – ಒಂದೇ ಪತ್ರಿಕೆಗೆ 700ರೂ. (ಎರಡೂ ಪತ್ರಿಕೆಗಳಿಗೆ 1000ರೂ.) ಪ.ಜಾತಿ/ಪ.ವರ್ಗ/ಪ್ರವರ್ಗ-1 ವರ್ಗದ ಅಭ್ಯರ್ಥಿಗಳಿಗೆ – ಒಂದೇ ಪತ್ರಿಕೆಗೆ 350ರೂ. (ಎರಡೂ ಪತ್ರಿಕೆಗಳಿಗೆ 500ರೂ.) **ವಿಶೇಷ ಚೇತನ/ದಿವ್ಯಾಂಗ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ಇರುತ್ತದೆ.
ಅರ್ಜಿ ಸಲ್ಲಿಕೆ ಹೇಗೆ.?
ಹಂತ-1 ಅಧಿಕೃತ ವೆಬ್ಸೈಟ್ https://schooleducation.karnataka.gov.in/ಗೆ ಭೇಟಿ ನೀಡಿ
ಹಂತ-2 ನಂತರ ಮುಖಪುಟದಲ್ಲಿ “Regarding inviting applications for the Karnataka Teacher Eligibility Test (KARTET-2025)” ಶೀರ್ಷಿಕೆಯಡಿ “Online Registration Link” ಲಿಂಕ್ ಮೇಲೆ ಒತ್ತಿ. (ಅರ್ಜಿ ಸಲ್ಲಿಕೆ ಇದೇ 23ರಿಂದ ಪ್ರಾರಂಭವಾಗಲಿದೆ)
ಹಂತ-3 ಮುಂದೆ ಹೊಸ ಪುಟ ತೆರೆಯುತ್ತದೆ, ಅಲ್ಲಿ ನೋಂದಣಿ ಅಥವಾ ಲಾಗಿನ್ ಮಾಡಿಕೊಂಡು ಕೇಳಲಾದ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ. ಹಾಗೂ ತಿಳಿಸಲಾದ ದಾಖಲೆಗಳ ಪಿಡಿಎಫ್ ಅಪ್ಲೋಡ್ ಮಾಡಿ.
ಹಂತ-4 ಕೊನೆಗೆ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಿ!