ಯುಜಿಸಿಇಟಿ ಮತ್ತು ಇತರೆ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಶನಿವಾರ(ಆ.30) ಬಿಡುಗಡೆ.
ವೈದ್ಯಕೀಯ ಸೀಟುಗಳ ಅಖಿಲ ಭಾರತ ಎರಡನೇ ಸುತ್ತಿನ ವೇಳಾಪಟ್ಟಿ ಪರಿಷ್ಕರಣೆ ಹಂತದಲ್ಲಿದ್ದು, ವಿಳಂಬವಾಗುತ್ತಿದೆ ಆದ್ದರಿಂದ ಯುಜಿಸಿಇಟಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಫಲಿತಾಂಶ ಪ್ರಕಟಿಸಲಾಗಿದೆ. ಸೀಟು ಹಂಚಿಕೆಯಾದವರಿಗೆ ನಾಲ್ಕು ಛಾಯ್ಸ್ಗಳ ಆಯ್ಕೆಗೆ ಅವಕಾಶ ನೀಡಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.
ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಆ.30 ರಿಂದ ಸೆ.2ರವರೆಗೆ ಛಾಯ್ಸ್ ಆಯ್ಕೆ ಮಾಡಲು ಅವಕಾಶವಿದೆ. ಛಾಯ್ಸ್-1, ಛಾಯ್ಸ್-2 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಶುಲ್ಕ ಪಾವತಿಸಲು ಸೆ.2ರವರೆಗೆ ಕಾಲಾವಕಾಶ ನೀಡಲಾಗಿದೆ. ಛಾಯ್ಸ್-3 ಆಯ್ಕೆ ಮಾಡಿಕೊಂಡವರು ಸೆ.2ರೊಳಗೆ ಹತ್ತು ಸಾವಿರ ರೂ. ಎಚ್ಚರಿಕೆ ಠೇವಣಿ(Caution Deposit) ಪಾವತಿಸಬೇಕು.
ಛಾಯ್ಸ್-1 ಆಯ್ಕೆ ಮಾಡಿರುವ ಅಭ್ಯರ್ಥಿಗಳು ದೃಢೀಕರಣ ಸ್ಲಿಪ್ ಡೌನ್ಲೋಡ್ ಮಾಡಿಕೊಂಡು ಸೆ.3ರೊಳಗೆ ನಿಗದಿತ ಕಾಲೇಜಿಗೆ ಪ್ರವೇಶ ಪಡೆಯಬಹುದು ಎಂದು ಮಾಹಿತಿ ನೀಡಿದ್ಧಾರೆ.
ಯುಜಿಸಿಇಟಿ ಕೋರ್ಸುಗಳ 3ನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶದ ನಂತರ ಅಭ್ಯರ್ಥಿಗಳಿಗೆ ಯಾವುದೇ ಛಾಯ್ಸ್ಗಳನ್ನು ಆಯ್ಕೆ ಮಾಡಲು ಅವಕಾಶ ಇರುವುದಿಲ್ಲ. ಆದ್ದರಿಂದ ಇಷ್ಟವಿರುವ ಕಾಲೇಜುಗಳನ್ನು ಮಾತ್ರ ದಾಖಲಿಸಿ, ಏಕೆಂದರೆ ಮೆರಿಟ್ ಮತ್ತು ಅಭ್ಯರ್ಥಿಯು ದಾಖಲಿಸುವ ಇಚ್ಛೆಗಳ ಆಧಾರದ ಮೇಲೆ ಸೀಟು ಹಂಚಿಕೆ ಮಾಡಳಾಗುತ್ತದೆ. ಒಮ್ಮೆ ಹಂಚಿಕೆಯಾದ ಸೀಟನ್ನು ನಿರಾಕರಿಸುವಂತಿಲ್ಲ. ಪ್ರವೇಶ ಪಡೆಯಲು ಆಗದಿದ್ದಲ್ಲಿ ಅಂತವರ ವಿರುದ್ದ ಕಾನೂನು ಕ್ರಮ ಜರುಗಿಸಿ, ಮುಂಬರುವ ಮೂರು ವರ್ಷಗಳವರೆಗೆ ಸದರಿ ಕೋರ್ಸ್ಗೆ ಅವಕಾಶ ನೀಡುವುದಿಲ್ಲ. ಎಚ್.ಪ್ರಸನ್ನ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ
How to Check KCET 2nd Round Final Seat Allotment Result 2025
UGCET ಎರಡನೇ ಸುತ್ತಿನ ಅಂತಿಮ ಫಲಿತಾಂಶ ಪರಿಶೀಲಿಸುವ ವಿಧಾನ;
Ugcet 2Nd Round Final Seat Allotment Result 2025 Check Link
ಕೆಇಎ ಅಧಿಕೃತ https://cetonline.karnataka.gov.in/kea/ ಜಾಲತಾಣಕ್ಕೆ ಭೇಟಿ ನೀಡಿ.
ಇತ್ತೀಚಿನ ಪ್ರಕಟಣೆಗಳು ವಿಭಾಗದಲ್ಲಿ “30-08 UGCET – 2025 ಎರಡನೇ ಸುತ್ತಿನ ಅಂತಿಮ ಫಲಿತಾಂಶದ ಲಿಂಕ್. 30/08/2025” ಮೇಲೆ ಕ್ಲಿಕ್ ಮಾಡಿ.
ನಿಮ್ಮ ಸಿಇಟಿ ಸಂಖ್ಯೆ ಹಾಗೂ ಜನ್ಮ ದಿನಾಂಕ ಹಾಗೂ ಕ್ಯಾಪ್ಚ ನಮೂದಿಸಿ ಸಲ್ಲಿಸಿ.
2ನೇ ಸುತ್ತಿನ ಅಂತಿಮ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಿ.
Important Direct Links:
UGCET 2nd Round Seat allotment Final Result 2025 Notice PDF