DCET 2025 - ಅಂತಿಮ ಸುತ್ತಿನ ಫಲಿತಾಂಶ ಹಾಗೂ ಫಲಿತಾಂಶದ ನಂತರದ ವೇಳಾಪಟ್ಟಿ ಪ್ರಕಟ
ಪ್ರಸಕ್ತ ಸಾಲಿನ ಡಿಸಿಇಟಿ ಮೂರನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶುಕ್ರವಾರ (ಆ.22)ರಂದು ಬಿಡುಗಡೆ ಮಾಡಿದೆ.
ಅರ್ಹ ಡಿಪ್ಲೊಮಾ ಅಭ್ಯರ್ಥಿಗಳಿಗೆ (ಆರ್ಕಿಟೆಕ್ಟರ್ ಸೀಟಿಗೆ ಪ್ರವೇಶ, ವೃತ್ತಿನಿರತ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಹಾಗೂ ಮೇಕ್ ಅಪ್ (ಮರು ಪರೀಕ್ಷೆ) ಅರ್ಹತೆ ಪಡೆದ ಡಿಪ್ಲೊಮಾ ವಿದ್ಯಾರ್ಥಿಗಳು) ಸೇರಿದಂತೆ ಪ್ರಸ್ತುತ ಪ್ರಾಧಿಕಾರವು 3ನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಮತ್ತು ಫಲಿತಾಂಶದ ನಂತರದ ಪರಿಷ್ಕೃತ ವೇಳಾಪಟ್ಟಿಯನ್ನು ಕೆಇಎ ಅಧಿಕೃತ ವೆಬೈಟ್ https://cetonline.karnataka.gov.in/kea/dcet2025ನಲ್ಲಿ ಬಿಡುಗಡೆ ಮಾಡಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸಿಇಟಿ 3ನೇ ಸುತ್ತಿನ ಸೀಟು ಹಂಚಿಕೆಯ ನಂತರದ ಪರಿಷ್ಕೃತ ವೇಳಾಪಟ್ಟಿ
✓ ಆ.25 ರಿಂದ 27ರವರೆಗೆ ವಿದ್ಯಾರ್ಥಿಗಳಿಗೆ ಚಲನ್ ಡೌನ್ಲೋಡ್ ಮಾಡಿಕೊಳ್ಳಲು ಕಾಲಾವಕಾಶವನ್ನು ನೀಡಲಾಗಿದ್ದು, ಆ.28ರೊಳಗೆ ಶುಲ್ಕ ಪಾವತಿ ಮಾಡಬಹುದು. ಕಾಶನ್ ಡೆಪಾಸಿಟ್ ಪಾವತಿಸಿದವರ ಹಣವನ್ನು ಈ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
✓ ವಿದ್ಯಾರ್ಥಿಗಳು ಶುಲ್ಕ ಪಾವತಿಯ ನಂತರ ಆ.29 ರೊಳಗೆ ಸೀಟು ಖಾತರಿ ಚೀಟಿ (Confirmation Slip) ಅನ್ನು ಡೌನ್ಲೋಡ್ ಮಾಡಿಕೊಂಡು ಆ.30ರೊಳಗೆ ಅಭ್ಯರ್ಥಿಗಳು ಸಂಬಂಧಪಟ್ಟ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು.
ಅಭ್ಯರ್ಥಿಗಳ ಗಮನಕ್ಕೆ:
ಅಭ್ಯರ್ಥಿಗಳು ಕಡ್ಡಾಯವಾಗಿ ಹಂಚಿಕೆಯಾದ ಕಾಲೇಜಿನಲ್ಲಿ ಪ್ರವೇಶಾತಿ ಪಡೆಯಬೇಕು. ಸೀಟು ರದ್ದುಪಡಿಸಿಕೊಳ್ಳಲು ಅವಕಾಶ ಇರುವುದಿಲ್ಲ. ಹಂಚಿಕೆಯಾದ ಕಾಲೇಜಿನಲ್ಲಿ ಪ್ರವೇಶ ಪಡೆಯಲು ವಿಫಲರಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಕಾಶನ್ ಡೆಪಾಸಿಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ನಿಯಮಾನುಸಾರ ದಂಡ ಪಾವತಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.