ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೂಲ ಉಳಿಕೆ ವೃಂದದ ಕಿರಿಯ ಅಧಿಕಾರಿ (ಗುಣ ಮತ್ತು ಆಶ್ವಾಸನೆ), ಕಿರಿಯ ಅಭಿಯಂತರ(ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್) ಹುದ್ದೆಗಳ ಭರ್ತಿಗಾಗಿ ಜ.10 ಹಾಗೂ 11 ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ಅಧಿಕೃತ ಕೀ ಉತ್ತರಗಳನ್ನು ಸೋಮವಾರ ಪ್ರಕಟಿಸಿದೆ.
ಪ್ರಕಟಿಸಿದ ಕೀ ಉತ್ತರಗಳಿಗೆ ಜ.14ರ ಬೆಳಗ್ಗೆ 11 ಗಂಟೆಯೊಳಗೆ ನಿಗದಿತ ಲಿಂಕ್ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಕೀ ಉತ್ತರಗಳನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ನ “ವಿವಿಧ ಇಲಾಖೆಗಳ ನೇಮಕಾತಿ(NON-HK) – 2025” ವಿಭಾಗದಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅಭ್ಯರ್ಥಿಗಳು ಭೇಟಿ ನೀಡಿ ಪರಿಶೀಲನೆ ಮಾಡಬಹುದು ಎಂದು ಕೆಇಎ ಹೊರಡಿಸಿದ ಪ್ರಕಟಣೆ ತಿಳಿಸಿದೆ.
ಹಂತ-1 ಕೆಇಎ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ಗೆ ಭೇಟಿ ನೀಡಿ. ಈ ಕೆಳಗಿನ ಹಂತಗಳನ್ನು ಅನುಸರಿಸಿ;
ಮುಖಪುಟ → ನೇಮಕಾತಿ ವಿಭಾಗ → ವಿವಿಧ ಇಲಾಖೆಗಳ ನೇಮಕಾತಿ(NON-HK)-2025 → “ವಿವಿಧ ಇಲಾಖೆ ನೇಮಕಾತಿ RPC – 2025 ಪ್ರಮುಖ ಉತ್ತರ (12-01-2026)” ಲಿಂಕ್ ಮೇಲೆ ಒತ್ತಿ, ಅಲ್ಲಿ ಹುದ್ದೆಗಳ/ವಿಷಯಗಳ ಆಧಾರಿತವಾಗಿ ನೀಡಲಾದ ಕೀ ಉತ್ತರಗಳ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.