ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಕಿರಿಯ ಅಧಿಕಾರಿ (ಉತ್ಪಾದನೆ & ನಿರ್ವಹಣೆ), ಕಿರಿಯ ಅಧಿಕಾರಿ (ಸಾಮಾಗ್ರಿ & ಉಗ್ರಾಣ) ಹಾಗೂ ಕೃಷಿ ಮಾರಾಟ ಇಲಾಖೆಯ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ.
2026ರ ಜನವರಿ 18ರಂದು ಪರೀಕ್ಷೆ ನಡೆಯಲಿದೆ. ಕೆ.ಎಸ್.ಡಿ.ಎಲ್‌ನ ಕಿರಿಯ ಅಧಿಕಾರಿ (ಉತ್ಪಾದನೆ & ನಿರ್ವಹಣೆ), ಕಿರಿಯ ಅಧಿಕಾರಿ (ಸಾಮಾಗ್ರಿ & ಉಗ್ರಾಣ) ಹುದ್ದೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಪತ್ರಿಕೆ-2 ಅನ್ನು ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30ರವರೆಗೆ ಹಾಗೂ ಕೃಷಿ ಮಾರಾಟ ಇಲಾಖೆಯ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗೆ ಸಂಬಂಧಿಸಿದ ನಿರ್ದಿಷ್ಟ ಪತ್ರಿಕೆ-2 ಅನ್ನು ಮಧ್ಯಾಹ್ನ 2:30 ರಿಂದ ಸಂಜೆ 4:30ರವರೆಗೆ ನಡೆಸಲಾಗುವುದು ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.



