ಹಾವೇರಿ ಜಿಲ್ಲೆಯ ಕೇಂದ್ರೀಯ ವಿದ್ಯಾಲಯದಲ್ಲಿ ವಿವಿಧ ಶಿಕ್ಷಕರ ಹುದ್ದೆಗಳ ನೇಮಕಾತಿ ಸಂಬಂಧ ಫೆ.24ರಂದು ನೇರ ಸಂದರ್ಶನ ನಡೆಯಲಿದೆ.
ವಿವಿಧ ವೃಂದಗಳಿಗೆ ಪಿಆರ್ಟಿ ಶಿಕ್ಷಕ, ಟಿಜಿಟಿ ಶಿಕ್ಷಕ, ಪಿಆರ್ಟಿ ಸಂಗೀತ ಶಿಕ್ಷಕ, ದೈಹಿಕ ಮತ್ತು ಆರೋಗ್ಯ ಶಿಕ್ಷಣ ಶಿಕ್ಷಕ ಹಾಗೂ ಕ್ರೀಡಾ ತರಬೇತುದಾರ ಸೇರಿದಂತೆ ಇತರೆ ಶಿಕ್ಷಕರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ‘ಕೇಂದ್ರೀಯ ವಿದ್ಯಾಲಯ ಹಾವೇರಿ ಡಯಟ್ ಕ್ಯಾಂಪಸ್, ಕರ್ಜಗಿ ರಸ್ತೆ, ಹಾವೇರಿ-581110’ನಲ್ಲಿ ನಡೆಯಲಿರುವ ನೇರ ಸಂದರ್ಶನಕ್ಕೆ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬಹುದು.
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ, ಪದವಿ, ಬಿ.ಎಸ್ಸಿ, ಸ್ನಾತಕೋತ್ತರ ಪದವಿ, ಬಿ.ಎಲ್.ಎಡ್, ಬಿ.ಪಿ.ಎಡ್, ಬಿ.ಎಡ್ ಅಥವಾ ತತ್ಸಮಾನ ಪದವಿ ಪೂರ್ಣಗೊಳಿಸಬೇಕು ಜೊತೆಗೆ ಶಿಕ್ಷಕರು ಆಯಾ ವಿಷಯಗಳಲ್ಲಿ ಬೋಧಿಸುವ ಪ್ರಾವೀಣ್ಯತೆ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ಗಳ ಜ್ಞಾನವನ್ನು ಹೊಂದಿರಬೇಕು.
ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ತಪ್ಪದೆ ಅಧಿಕೃತ ಅಧಿಸೂಚನೆಯನ್ನು ಓದಬೇಕು.
ವಯೋಮಿತಿ:
ಕನಿಷ್ಠ ಮಿತಿ – 18 ವರ್ಷಗಳು ಗರಿಷ್ಠ ಮಿತಿ – 65 ವರ್ಷಗಳು
ಸಂಬಳ:
ಪಿ.ಆರ್.ಟಿ ಶಿಕ್ಷಕರ ಹುದ್ದೆಗಳಿಗೆ – ₹21,250 ಟಿ.ಜಿ.ಟಿ ಶಿಕ್ಷಕರ ಹುದ್ದೆಗಳಿಗೆ – ₹26,250 ಪಿ.ಆರ್.ಟಿ ಸಂಗೀತ ಶಿಕ್ಷಣ ಹುದ್ದೆಗಳಿಗೆ – ₹21,250 ದೈಹಿಕ ಮತ್ತು ಆರೋಗ್ಯ ಶಿಕ್ಷಣ ಶಿಕ್ಷಕರ ಹುದ್ದೆಗಳಿಗೆ – ₹21,250 ಕ್ರೀಡಾ ತರಬೇತುದಾರ ಶಿಕ್ಷಕರ ಹುದ್ದೆಗಳಿಗೆ – ₹21,250 ವಿಶೇಷ ಶಿಕ್ಷಕ ಹುದ್ದೆಗಳಿಗೆ – ₹26,250 ಕೃತಕ ಬುದ್ಧಿಮತ್ತೆ (AI) ಬೋಧಕ ಹುದ್ದೆಗಳಿಗೆ – ₹26,250 ಕನ್ನಡ ಭಾಷಾ ಬೋಧಕರ ಹುದ್ದೆಗಳಿಗೆ – ₹21,250 ಶೈಕ್ಷಣಿಕ ಸಲಹೆಗಾರರ ಹುದ್ದೆಗಳಿಗೆ – ₹21,250
ಆಯ್ಕೆ ವಿಧಾನ:
ನೇರ ಸಂದರ್ಶನ
ದಾಖಲೆ ಪರಿಶೀಲನೆ
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ನೇರ ಸಂದರ್ಶನಕ್ಕೆ ಹಾಜರಾಗಲು ನೋಂದಣಿ ಮಾಡುವ ವಿಧಾನ
ಮೇಲಿನ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಗೂಗಲ್ ಫಾರ್ಮ್ ಲಿಂಕ್ https://docs.google.com/forms/d/e/1FAIpQLScUHOLPH_Kk4ZnC9KfjdOlr615fxH8CQ12yl_i5XuxWr78xRA/viewformಗೆ ಭೇಟಿ ನೀಡಿ.
• ಬಳಿಕ ಅಭ್ಯರ್ಥಿಗಳು ಇಮೇಲ್ ಐಡಿ ನಮೂದಿಸಿ ತಾವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.
• ಫಾರ್ಮ್ ನಲ್ಲಿ ಕೇಳಲಾಗುವ ಸ್ವವಿವರ, ಶೈಕ್ಷಣಿಕ ಅರ್ಹತೆ ಹಾಗೂ ಅಗತ್ಯ ಮಾಹಿತಿಗಳನ್ನು ನಮೂದಿಸಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
ನೇರ ಸಂದರ್ಶನ ನಡೆಯುವ ದಿನಾಂಕ ಹಾಗೂ ವಿವರ
ಅಭ್ಯರ್ಥಿಗಳು ಫೆಬ್ರವರಿ 24ರ ಬೆಳಿಗ್ಗೆ 9.30 ರಂದು ಈ ಕೆಳಗಿನ ವಿಳಾಸದಲ್ಲಿ ನಡೆಸಲಾಗುವ ನೇರ ಸಂದರ್ಶನಕ್ಕೆ ಭರ್ತಿ ಮಾಡಿದ ಅರ್ಜಿ ಹಾಗೂ ಮೂಲ ದಾಖಲೆಗಳ ನಕಲು ಪ್ರತಿಗಳೊಂದಿಗೆ ಹಾಜರಾಗಬಹುದು.
ವಿಳಾಸ: ಕೇಂದ್ರೀಯ ವಿದ್ಯಾಲಯ ಹಾವೇರಿ ಡಯಟ್ ಕ್ಯಾಂಪಸ್, ಕರ್ಜಗಿ ರಸ್ತೆ, ಹಾವೇರಿ-581110, ಕರ್ನಾಟಕ