ಅರಣ್ಯ ಇಲಾಖೆಗೆ 504 ಗಸ್ತು ಅರಣ್ಯ ಪಾಲಕ(ಅರಣ್ಯ ರಕ್ಷಕ) ಹುದ್ದೆಗಳ ನೇಮಕಾತಿ ಸಂಬಂಧ ಜು.20ರಂದು ನಡೆಸಲಾದ ಲಿಖಿತ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಬುಕ್ಲೆಟ್ ಎ, ಬಿ, ಸಿ, ಡಿ ಶ್ರೇಣಿಗಳ ಆಧಾರಿತವಾಗಿ ಕೀ ಉತ್ತರಗಳನ್ನು ಇಲಾಖೆಯ ಅಂತರ್ಜಾಲ http://www.aranya.gov.in/ದಲ್ಲಿ ಬಿಡುಗಡೆ ಮಾಡಲಾಗಿದೆ. ಸದರಿ ಕೀ ಉತ್ತರಗಳ ಮೇಲೆ ಆಕ್ಷೇಪಣೆಗಳಿದ್ದಲ್ಲಿ ಅರ್ಜಿ ಸಲ್ಲಿಸುವಾಗ ಬಳಸಲಾದ ಇ-ಮೇಲ್ ಮೂಲಕ ಮಾತ್ರ ಕಚೇರಿಯ ಇ-ಮೇಲ್ ವಿಳಾಸ 540fg.rec.17.11.2023@gmail.comಗೆ ಜು.31ರೊಳಗೆ ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.