Kittur Rani Chennamma Sainik School Admission 2026-27
2026-27ನೇ ಶೈಕ್ಷಣಿಕ ಸಾಲಿಗೆ ಕಿತ್ತೂರು ಸೈನಿಕ ವಸತಿ ಶಾಲೆಯಲ್ಲಿ 6ನೆೇ ತರಗತಿ ದಾಖಲಾತಿಗಾಗಿ ನಡೆಸುವ ಅಖಿಲ ಭಾರತ ಪ್ರವೇಶ ಪರೀಕ್ಷೆಗಾಗಿ ಅರ್ಹ ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯು ಬಾಲಕಿಯರಿಗಾಗಿಯೇ ಇರುವ ಸುಪ್ರಸಿದ್ದ ಪಬ್ಲಿಕ್ ಶಾಲೆಯಾಗಿದ್ದು, ಸೈನಿಕ ತರಬೇತಿ ನೀಡಿ ಸಧೃಡ ಭಾರತದ ನಿರ್ಮಾಣ ಹಾಗೂ ರಾಷ್ಟ್ರಪ್ರೇಮವನ್ನು ಹುಟ್ಟು ಹಾಕುವಂತಹ ಗುರಿಯನ್ನು ಹೊಂದಿದೆ. ಪ್ರವೇಶ ಪರೀಕ್ಷೆಗೆ ಹಾಜರಾಗಲು ಆಸಕ್ತ ವಿದ್ಯಾರ್ಥಿಗಳು ಅಥವಾ ತಮ್ಮ ಮಕ್ಕಳನ್ನು ಈ ಶಾಲೆಗೆ ಪ್ರವೇಶ ಪಡಿಸಲು ಆಸಕ್ತಿ ಹೊಂದಿರುವ ಪೋಷಕರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಫ್ಲೈನ್ ಮೂಲಕವಿದ್ದು, ಅರ್ಜಿ ಶುಲ್ಕ ಮಾತ್ರ kittursainikschool.org ನ ಮೂಲಕ ಆನ್ಲೈನ್ನಲ್ಲಿ ಪಾವತಿಸಬೇಕು.
(ದಂಡ ರಹಿತವಾಗಿ) ಅರ್ಜಿ ಸಲ್ಲಿಕೆ ಅವಧಿ- ನವೆಂಬರ್ 5 ರಿಂದ ಡಿಸೆಂಬರ್ 10, 2025
(ದಂಡ ಸಹಿತವಾಗಿ) ಅರ್ಜಿ ಸಲ್ಲಿಕೆ ದಿನಾಂಕ- ಡಿಸೆಂಬರ್ 11 ರಿಂದ ಡಿಸೆಂಬರ್ 25, 2025
ಅರ್ಜಿ ಭರ್ತಿ ಮಾಡಿದ ಪ್ರತಿ ಸಲ್ಲಿಸಲು ಕೊನೆ ದಿನಾಂಕ(ದಂಡ ರಹಿತವಾಗಿ)- ಡಿಸೆಂಬರ್ 15
ಅರ್ಜಿ ಭರ್ತಿ ಮಾಡಿದ ಪ್ರತಿ ಸಲ್ಲಿಸಲು ಕೊನೆ ದಿನಾಂಕ(ದಂಡ ಸಹಿತವಾಗಿ)- ಜನವರಿ, 5 2025
ಪರೀಕ್ಷೆಯ ದಿನಾಂಕ- ಫೆಬ್ರವರಿ 1, 2026
ಶೈಕ್ಷಣಿಕ ಅರ್ಹತೆ:
ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಾಗಿರುತ್ತಾರೆ
ವಯೋಮಿತಿ:
ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಜೂನ್ 1, 2014 ಮತ್ತು ಮೇ 31, 2016ರ ನಡುವೆ ಜನಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ(OMR)
ದೇಹದಾರ್ಢತೆ ಪರೀಕ್ಷೆ
ವೈದ್ಯಕೀಯ ಪರೀಕ್ಷೆ
ಮೌಖಿಕ ಸಂದರ್ಶನ ಪರೀಕ್ಷೆ
ಪರೀಕ್ಷಾ ಶುಲ್ಕ:
ದಂಡ ರಹಿತವಾಗಿ – ರೂ. 2000/- (1600/- ಪ.ಜಾ/ಪ.ಪಂಗಂಡದವರಿಗೆ ಅವರು ಕರ್ನಾಟಕ ನಿವಾಸಿಯಾಗಿರಬೇಕು).
ದಂಡ ಸಹಿತವಾಗಿ – ರೂ. 2,500/- (2,100/- ಪ.ಜಾ/ಪ.ಪಂಗಂಡದವರಿಗೆ ಅವರು ಕರ್ನಾಟಕ ನಿವಾಸಿಯಾಗಿರಬೇಕು)
Kittur Sainik School Fees Deatils 2026-27(ಶುಲ್ಕ ವಿವರ):
ರೂ. 2,36,900/-(ಊಟ, ವಸತಿ, ಸಮವಸ್ತ್ರ ಮತ್ತು ಇತರೆ ಠೇವಣಿಗಳು ಸೇರಿ) ಶೈಕ್ಷಣಿಕ ಸಾಮಗ್ರಿ ಮತ್ತು ಇತರೆ ಶುಲ್ಕ ಹೊರತುಪಡಿಸಿ.
ಪೂರ್ಣ ಪ್ರಮಾಣ ಶುಲ್ಕ ಪಾವತಿ ಪ್ರವೇಶ ಯೋಜನೆ: ಅಭ್ಯರ್ಥಿಗಳ ಅರ್ಹತೆ (ಲಿಖಿತ ಪರೀಕ್ಷೆ+ಸಂದರ್ಶನ)ಯು ಸಾಧಾರಣ ಪ್ರತಿಭಾ ಮಟ್ಟದ್ದಾಗಿದ್ದಲ್ಲಿ ಒಂದು ವೇಳೆ ಸೀಟುಗಳು ಲಭ್ಯವಿದ್ದ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಶುಲ್ಕ ಭರಿಸಿ ಪ್ರವೇಶ ಪಡೆಯಬಹುದು. ಇಂಥ ಸ್ಥಳ ಕಾಯ್ದಿಡುವಿಕೆಗೆ ಪಾಲಕರು ತಮ್ಮ ಇಚ್ಛೆಯನ್ನು ಅರ್ಜಿಫಾರ್ಮಗಳಲ್ಲಿ ನಮೂದಿಸಬೇಕಾಗುತ್ತದೆ.
ಕರ್ನಾಟಕ ಸರ್ಕಾರದ ವಿದ್ಯಾರ್ಥಿವೇತನ ಯೋಜನೆ (ರಹವಾಸಿ ವಿದ್ಯಾರ್ಥಿಗಳಿಗೆ)
ಈ ಯೋಜನೆಯಡಿ ಪ್ರವೇಶ ಪಡೆದಂತ ವಿದ್ಯಾರ್ಥಿನಿಯರು ತಮ್ಮ ಶಿಕ್ಷಣವನ್ನು ಇದೇ ಸಂಸ್ಥೆಯಲ್ಲಿ 12ನೇ ತರಗತಿಯವರೆಗೆ ವಿಜ್ಞಾನ ವಿಭಾಗದಲ್ಲಿ ಮುಂದುವರೆಯಬೇಕಾಗುತ್ತದೆ. ವಿಫಲರಾದಲ್ಲಿ ಕರ್ನಾಟಕ ಸರ್ಕಾರದಿಂದ ಪಡೆದಂಥ ವಿದ್ಯಾರ್ಥಿವೇತನವನ್ನು ಸಂಪೂರ್ಣವಾಗಿ ಭರಿಸಬೇಕಾಗುತ್ತದೆ.
How to Apply for Kittur Rani Chennamma Sainik School Admission 2026-27
ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಅಥವಾ ವಿದ್ಯಾರ್ಥಿಯ ಪೋಷಕರು ಅರ್ಜಿ ಸಲ್ಲಿಕೆ ಪಿಡಿಎಫ್ ಫಾರ್ಮ್ ಅನ್ನು ನಾವು ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ನಂತರ ಅದರಲ್ಲಿ ಕೇಳಲಾದ ನಿಗದಿತ ಮಾಹಿತಿಯ ಕುರಿತು ಸರಿಯಾಗಿ ಭರ್ತಿಮಾಡಿ ಹಾಗೂ ನಿಗದಿತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಕೆ ಕೊನೆ ದಿನಾಂಕದ ಮೊದಲು ತಲುಪುವಂತೆ ಅಥವಾ ಖುದ್ದಾಗಿ ಈ ಕೆಳಗಿನ ವಿಳಾಸಕ್ಕೆ ಭೇಟಿ ನೀಡಿ ಸಲ್ಲಿಸಬೇಕು.
ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ, ಕಿತ್ತೂರು – 591115 ಜಿಲ್ಲಾ: ಬೆಳಗಾವಿ
ಹೆಚ್ಚಿನ ಮಾಹಿತಿಗಾಗಿ: 08288-234608, 9483501100, 8123409432
ಕಛೇರಿಯ ಸಮಯ: ಭಾನುವಾರ / ರಜಾದಿನಗಳನ್ನು ಹೊರತುಪಡಿಸಿ, ವಾರದ ದಿನಗಳಲ್ಲಿ ಸೋಮವಾರ ಬೆ.9.00 ರಿಂದ ಮ.1.30 ಮತ್ತು ಮ.3.00 ರಿಂದ ಸಂ.5.30ರ ವರೆಗೆ. ತೆರೆದಿರುತ್ತದೆ.
Important Direct Links:
Kittur Rani Chennamma Sainik School Admission 2026-27 Notification PDF
very nice in kittur sinik shcool thank you