ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳಿಗೆ ಮಾರ್ಚ್ 22 ರಿಂದ 25 ರ ವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗಿತ್ತು. ಇದೀಗ ಪ್ರಾಧಿಕಾರವು ಕಡ್ಡಾಯ ಕನ್ನಡ ಪರೀಕ್ಷೆ ದಿನಾಂಕ ಹಾಗೂ ಪ್ರವೇಶ ಪತ್ರ(KLC Kannada Exam Hall Ticket 2025)ವನ್ನು ಬಿಡುಗಡೆ ಮಾಡಿದೆ.
ಎಸ್ ಎಸ್ ಎಲ್ ಸಿ / 10ನೇ ತರಗತಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಅಭ್ಯಾಸ ಮಾಡದ ಅಥವಾ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡದ ಅಭ್ಯರ್ಥಿಗಳಿಗೆ ಪ್ರಾಧಿಕಾರವು ಕಡ್ಡಾಯ ಕನ್ನಡ ಪರೀಕ್ಷೆಯನ್ನು ನಡೆಸುತ್ತದೆ. ಪ್ರಸ್ತುತ ಪ್ರಾಧಿಕಾರವು ಪರೀಕ್ಷೆಯ ಪರೀಕ್ಷೆಯ ವೇಳಾಪಟ್ಟಿ ಹಾಗೂ ಪ್ರವೇಶ ಪತ್ರ ಬಿಡುಗಡೆ ಮಾಡಿದ್ದು, ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಮಾರ್ಚ್ 22 ರಿಂದ 25 ರ ವರೆಗೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾದ ಅಭ್ಯರ್ಥಿಗಳಿಗೆ ಮಾತ್ರ ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗಲು ಅವಕಾಶವಿರುತ್ತದೆ. ಪರೀಕ್ಷೆಯ ವೇಳಾಪಟ್ಟಿ ಹಾಗೂ ಪ್ರವೇಶ ಪತ್ರವನ್ನು ಪ್ರಾಧಿಕಾರದ ಅಧಿಕೃತ ವೆಬ್ಸೈಟ್ cetonline.karnataka.gov.in ನಲ್ಲಿ ಪ್ರಕಟಿಸಲಾಗಿದೆ.
ಪರೀಕ್ಷೆಯ ವೇಳಾಪಟ್ಟಿ
ಏಪ್ರಿಲ್ 15 ರಂದು ಬೆಳಿಗ್ಗೆ 10:30 ರಿಂದ 12:30 ರವರೆಗೆ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕನ್ನಡ ಭಾಷಾ ಪರೀಕ್ಷೆಯು ಎಸ್.ಎಸ್.ಎಲ್.ಸಿ ಹಂತದ ಪರೀಕ್ಷೆಯಾಗಿರುತ್ತದೆ ಹಾಗೂ ಬಹು ಆಯ್ಕೆ ಮಾದರಿ ಪರೀಕ್ಷೆಯಾಗಿರುತ್ತದೆ. ಪ್ರಶ್ನೆ ಪತ್ರಿಕೆಯು ಗರಿಷ್ಠ 150 ಅಂಕಗಳನ್ನು ಹೊಂದಿದ್ದು ಅಭ್ಯರ್ಥಿಗಳು ಉತ್ತೀರ್ಣರಾಗಲು ಕನಿಷ್ಠ 50 ಅಂಕಗಳನ್ನು ತೆಗೆಯಬೇಕು.
ವಿನಾಯಿತಿ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿರುತ್ತದೆ.
How to Download KLC Kannada Exam Hall Ticket 2025
ಪ್ರವೇಶ ಪತ್ರ ಡೌನ್ಲೋಡ್ ಮಾಡುವ ವಿಧಾನ ಈ ಕೆಳಗಿನಂತಿದೆ;
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
ಇತ್ತೀಚಿನ ಪ್ರಕಟಣೆಗಳಲ್ಲಿ – 12-04 ಕಡ್ಡಾಯ ಕನ್ನಡ ಪ್ರವೇಶ ಪರೀಕ್ಷೆ 15-04-2025 ಲಿಂಕ್ ಮೇಲೆ ಕ್ಲಿಕ್ ಮಾಡಿ.