KMMD.Karnataka.Gov.in loan Scheme: ಕರ್ನಾಟಕ ಹೆಲ್ಪ್ ಗೆ ಸ್ವಾಗತ, ಇಂದು ನಾವು “ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ” ದಿಂದ ನೀಡುವ ವಿವಿಧ ಯೋಜನೆಗಳ (Karnataka Madivala Machideva Development loan Scheme) ಬಗ್ಗೆ ಮಾಹಿತಿ ನೀಡಲಿದ್ದೇವೆ, ಹಲವಾರು ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಯಿಸಿದ್ದೇವೆ.
ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಬಯಸುವ ಅರ್ಹ ಫಲಾನುಭವಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ, ಜೊತೆಗೆ ನಿಮ್ಮ ಹಿತೈಶಿಗಳಿಗೂ ತಪ್ಪದೇ ಶೇರ್ ಮಾಡಿ.
Karnataka Madivala Machideva Development loan Scheme 2025
2025-26ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸುತ್ತಿರುವ ಈ ಕೆಳಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯಬಯಸುವವರಿಂದ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
☞ ಸ್ವಯಂ ಉದ್ಯೋಗ ನೇರಸಾಲ ಯೋಜನೆ ☞ ಗಂಗಾ ಕಲ್ಯಾಣ ಯೋಜನೆ ☞ ಅರಿವು-ಶೈಕ್ಷಣಿಕ ನೇರಸಾಲ ಯೋಜನೆ (ಹೊಸತು) ☞ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ. ☞ ಸ್ವಾವಲಂಬಿ ಸಾರಥಿ ಯೋಜನೆ. ☞ ಸ್ವಯಂ ಉದ್ಯೋಗ ಸಾಲ ಯೋಜನೆ
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ:
ಘಟಕ ವೆಚ್ಚ ರೂ. 1ಲಕ್ಷ / ರೂ. 2ಲಕ್ಷ
ರೂ. 20,000/-/ರೂ. 30,000/-
ಸಾಲ ಮೊತ್ತ ರೂ. 80,000/- / ರೂ. 1,70,000/-
ಗಂಗಾ ಕಲ್ಯಾಣ ನೀರಾವರಿ ಯೋಜನೆ:
ಘಟಕ ವೆಚ್ಚ ರೂ. 4.25ಲಕ್ಷ(ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಿಗೆ) / ರೂ. 3.25ಲಕ್ಷ(ಇನ್ನುಳಿದ ಜಿಲ್ಲೆಗಳಿಗೆ)
ಸಾಲ ಮೊತ್ತ ರೂ. 50,000/- (ಬಡ್ಡಿ ದರ ಶೇ. 4ರಷ್ಟು)
ಅರಿವು-ಶೈಕ್ಷಣಿಕ ಸಾಲ ಯೋಜನೆ (Arivu Education Loan Scheme):
ಈ ಯೋಜನೆಯಡಿ CET ಮೂಲಕ ಆಯ್ಕೆಯಾಗಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ಎಲ್ಲಾ ಪವರ್ಗಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಾದ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ 28 ಕೋರ್ಸ್ ಗಳ ವ್ಯಾಸಂಗಕ್ಕೆ ವಾರ್ಷಿಕ 1.00 ಲಕ್ಷ ರೂ.ಗಳಂತೆ ಕೋರ್ಸ್‌ನ ಅವಧಿಗೆ ಗರಿಷ್ಠ 4.00 ಲಕ್ಷ ರೂ.ಗಳಿಂದ ರೂ 5.00 ಲಕ್ಷ ರೂ.ಗಳಿಗೆ ವಾರ್ಷಿಕ ಶೇ.2ರ ಬಡ್ಡಿದರಲ್ಲಿ ಸಾಲ ಮಂಜೂರು ಮಾಡಲಾಗುವುದು. ಅಭ್ಯರ್ಥಿ ಮತ್ತು ಅವರ ಕುಟುಂಬದವರ ವಾರ್ಷಿಕ ವರಮಾನವು ರೂ.3.50 ಲಕ್ಷಗಳ ಮಿತಿಯಲ್ಲಿರಬೇಕು.
ಶೈಕ್ಷಣಿಕ ಸಾಲ ಯೋಜನೆ : ಹೊಸ ವಿದ್ಯಾರ್ಥಿಗಳಿಗೆ(Fresh Students):
ವಾರ್ಷಿಕ ಗರಿಷ್ಟ ರೂ. 1ಲಕ್ಷ
ವಾರ್ಷಿಕ ಬಡ್ಡಿ ಶೇ. 2ರಷ್ಟು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ / ನೀಟ್ ಪರೀಕ್ಷೆ ಮೂಲಕ ಪ್ರವೇಶಾತಿ ಪಡೆದಿರಬೇಕು
ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ:
ವಾರ್ಷಿಕ ಗರಿಷ್ಟ ರೂ. 25-50ಲಕ್ಷ
ಬಡ್ಡಿದರ : ಶೂನ್ಯ(೦%)
QS World Ranking – 1000 ರೊಳಗೆ
ಸ್ವಾವಲಂಬಿ ಸಾರಥಿ ಯೋಜನೆ:
ಘಟಕ ವೆಚ್ಚ ಶೇ.50 ರಷ್ಟು /ಗರಿಷ್ಟ ರೂ. 3ಲಕ್ಷಗಳ ಸಹಾಯಧನ.
ನಾಲ್ಕು ಚಕ್ರಗಳ ವಾಹನ ಖರೀದಿಸಲು (ಹಳದಿ ಬೋರ್ಡ್)
ವಯೋಮಿತಿ 21 ರಿಂದ 45 ವರ್ಷದೊಳಗಿರಬೇಕು
ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ):
ಘಟಕ ವೆಚ್ಚ : ಶೇ 20ರಷ್ಟು /ಗರಿಷ್ಟ ರೂ. 1ಲಕ್ಷ ಸಹಾಯಧನ,
ಉಳಿಕೆ ಮೊತ್ತ ಬ್ಯಾಂಕ್ ಪಾಲಿನ ಸಾಲ.
ಉದ್ದೇಶ : ಕೃಷಿ / ಕೃಷಿ ಅವಲಂಭಿತ ಚಟುವಟಿಕೆಗಳು, ವ್ಯಾಪಾರ, ಸಾರಿಗೆ ಮತ್ತು ಯಂತ್ರೋಪಕರಣಗಳನ್ನು ಕೊಳ್ಳುವ ಆರ್ಥಿಕ ಚಟುವಟಿಕೆಗಳು / ಉದ್ಯಮಗಳು
Last Date of KMMD.Karnataka.Gov.in loan online Application 2025-26
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Last Date: 30 June 2025
ಅರ್ಹ ಫಲಾಪೇಕ್ಷಿಗಳು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ-ಒನ್, ಕರ್ನಾಟಕ-ಒನ್ ಹಾಗೂ ಬೆಂಗಳೂರು-ಒನ್ ನಾಗರಿಕ ಕೇಂದ್ರಗಳಿಗೆ ಭೇಟಿ ನೀಡಿ ಈ ಕೆಳಗಿನ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸತಕ್ಕದು.
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.