ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಕಲ್ಯಾಣ ಕರ್ನಾಟಕ ಮತ್ತು ಮಿಕ್ಕುಳಿದ ವೃಂದದಲ್ಲಿ ಖಾಲಿ ಇರುವ ವಿವಿಧ ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ.ಜಾತಿ ಮತ್ತು ಪ.ಪಂಗಡ ವರ್ಗಕ್ಕೆ ಮೀಸಲಾಗಿದ್ದ, ಭರ್ತಿಯಾಗದ ಖಾಲಿ ಹುದ್ದೆಗಳಿವು. ಫ್ಯಾಕ್ಟರಿ ಮೆಡಿಕಲ್ ಆಫೀಸರ್(02), ಮೆಡಿಕಲ್ ಆಫೀಸರ್(01), ಅಂಕೌಟ್ಸ್ ಆಫೀಸರ್(01), ಬಾಯ್ಲರ್ ಅಟೆಂಡೆಂಟ್ ಗ್ರೇಡ್-2 ಸೇರಿದಂತೆ ಒಟ್ಟು 5 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಎಸ್ಸೆಸ್ಸೆಲ್ಸಿ, ವೈದ್ಯಕೀಯ ಸ್ನಾತಕೋತ್ತರ ಪದವೀಧರರು, ಸಿಎ ಓದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು https://kpcl.karnataka.gov.in/ನಲ್ಲಿ ಅರ್ಜಿ ನಮೂನೆ ಪಡೆದುಕೊಂಡು ಭರ್ತಿ ಮಾಡಿ ಡಿ.26ರೊಳಗೆ ಇ-ಮೇಲ್ ವಿಳಾಸ:kpclbacklog@gmail.comಗೆ ಕಳುಹಿಸುವ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಕೆಪಿಸಿಎಲ್ ಹೊರಡಿಸಿದ ನೇಮಕಾತಿ ಅಧಿಸೂಚನೆ ತಿಳಿಸಿದೆ.
ಫ್ಯಾಕ್ಟರಿ ಮೆಡಿಕಲ್ ಆಫೀಸರ್, ಮೆಡಿಕಲ್ ಆಫೀಸರ್ ಹುದ್ದೆಗೆ; ವೈದ್ಯಶಾಸ್ತ್ರ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕ ಪದವಿ (MBBS- Regular) ಜೊತೆಗೆ ಎರಡು ವರ್ಷಗಳ ಅನುಭವ ಹೊಂದಿರಬೇಕು.
ಅಂಕೌಟ್ಸ್ ಆಫೀಸರ್ ಹುದ್ದೆಗೆ; ಪದವಿಯ ಜೊತೆಗೆ ಮೆಂಬರ್ಶಿಫ್ ಆಫ್ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟ್ಸ್ ಆಫ್ ಇಂಡಿಯಾ (ICWA) ಅಥವಾ ಚಾರ್ಟ್ರ್ಡ್ ಅಕೌಂಟೆಂಟ್ (CA) ಕೋರ್ಸ್ನಲ್ಲಿ ತೇರ್ಗಡೆ ಹೊಂದಿರಬೇಕು. ಜೊತೆಗೆ ಎಕ್ಸಿಕ್ಯೂಟಿವ್ ಆಗಿ ಕಂಪೈಲಿಂಗ್ ಅಂಡ್ ಅನಾಲಿಸಿಸ್ ಕಾಸ್ಟ್ ಡಾಟಾ (Compiling and Analysis cost data)ನಲ್ಲಿ ಎರಡು ವರ್ಷಗಳ ಅನುಭವ.
ಬಾಯ್ಲರ್ ಅಟೆಂಡಂರ್ ಗ್ರೇಡ್ 2 ಹುದ್ದೆಗೆ; ಎಸ್ಸೆಸ್ಸೆಲ್ಸಿ/ಸಮಾನಾಂತರ (ರೆಗ್ಯುಲರ್ ಕೋರ್ಸ್) ಮತ್ತು ಬಾಯರ್ ಅಟೆಂಡೆಂಟ್ ಗ್ರೇಡ್-11ನ ಸಾಮರ್ಥ್ಯ ಪ್ರಮಾಣ ಪತ್ರ ಜೊತೆಗೆ ವಾಟರ್ ಟ್ಯೂಬ್ ಬಾಯ್ಸರ್ಗಳ ಚಾಲನೆ ಮತ್ತು ನಿರ್ವಹಣೆಯಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ:
26-12-2025ರಂತೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು ಗರಿಷ್ಠ ವಯಸ್ಸಿನ ಮಿತಿ – 40 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಮೆರಿಟ್ ಪಟ್ಟಿ
ದಾಖಲಾತಿ ಪರಿಶೀಲನೆ
ಕನ್ನಡ ಭಾಷಾ ಪರೀಕ್ಷೆ (ಎಸ್ಸೆಸ್ಸೆಲ್ಸಿ/ತತ್ಸಮಾನ ಪರೀಕ್ಷೆಯಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಅಧ್ಯಯನ ಮಾಡದ ಅಭ್ಯರ್ಥಿಗಳಿಗೆ ಮಾತ್ರ)
ಬಾಯ್ಲರ್ ಅಟೆಂಡಂರ್ ಗ್ರೇಡ್ 2 ಹುದ್ದೆಯ ವೇತನ ಶ್ರೇಣಿ; ರೂ. 37160-1050-41360-1250-47610-1680-56010-1900-63610-2090-76150-2530-88800-2910- 103350-3350-113400
ಜೊತೆಗೆ ನಿಗಮದಿಂದ ಸೌಲಭ್ಯಗಳು ಹಾಗೂ ಪಿಂಚಣಿ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.100
ನಿಗಮದ ಬ್ಯಾಂಕ್ ಖಾತೆಗೆ ಅರ್ಜಿ ಶುಲ್ಕ ತುಂಬಿ, ಬ್ಯಾಂಕಿನವರು ನೀಡುವ ಉಲ್ಲೇಖ ಸಂಖ್ಯೆಯನ್ನು ಕಡ್ಡಾಯವಾಗಿ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಲು ಸೂಚಿಸಲಾಗಿದೆ.
Beneficiary Name : KARNATAKA POWER CORPORATION LTD Bank : STATE BANK OF INDIA Type of A/c : Cash Credit (Current) A/c No. : 10503342643 IFSC Code: SBIN0009077 Branch : IFB Branch, Residency Plaza, Residency Road, Bangalore – 01
ಅರ್ಜಿ ಸಲ್ಲಿಸುವುದು ಹೇಗೆ:
ನಾವು ಕೆಳಗೆ ನೀಡಲಾದ ಲಿಂಕ್ ಮೂಲಕ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳಿ.
ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ತುಂಬಿರಿ. ನಂತರ ನಿಗಮದ ಬ್ಯಾಂಕ್ ಖಾತೆಗೆ ಅರ್ಜಿ ಶುಲ್ಕ ಭರಿಸಿದ ನಂತರ ಬ್ಯಾಂಕಿನವರು ನೀಡುವ ಉಲ್ಲೇಖ ಸಂಖ್ಯೆಯನ್ನು ಅರ್ಜಿ ನಮೂನೆಯಲ್ಲಿ ಸೇರಿಸಿ. ನಿಗಮದ ಇ-ಮೇಲ್ ವಿಳಾಸ kpclbacklog@gmail.comಕ್ಕೆ ಡಿ.26ರೊಳಗೆ ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
Good work
Good work I like that work I intrest to join