ಕೆಪಿಎಸ್ಸಿ 20-9-2024ರ ಅಧಿಸೂಚನೆಯ ಕೃಷಿ ಇಲಾಖೆಯಲ್ಲಿನ ಗ್ರೂಪ್-‘ಬಿ’ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ (ಉಳಿಕೆ ಮೂಲ ವೃಂದ, ಹೈ.ಕ) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಜು.31ರಂದು ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಡಾ.ವಿಶಾಲ್.ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೈ.ಕ ವೃಂದದ ಹುದ್ದೆಗಳಿಗೆ ಸೆ.6ರಂದು ಕನ್ನಡ ಭಾಷಾ ಪರೀಕ್ಷೆ, 7ಕ್ಕೆ ಸಾಮಾನ್ಯ ಮತ್ತು ನಿರ್ದಿಷ್ಟ ಪತ್ರಿಕೆ(ಶೇ.85ರಷ್ಟು ಹುದ್ದೆಗಳ), ಅ.4ಕ್ಕೆ ನಿರ್ದಿಷ್ಟ ಪತ್ರಿಕೆ(ಶೇ.15ರಷ್ಟು ಹುದ್ದೆಗಳ)ಗಳ ಪರೀಕ್ಷೆಗಳು ನಡೆಯಲಿವೆ ಹಾಗೂ ಸೆ.27ಕ್ಕೆ ಕನ್ನಡ ಭಾಷಾ ಪರೀಕ್ಷೆ, ಸೆ.28ಕ್ಕೆ ಸಾಮಾನ್ಯ ಮತ್ತು ನಿರ್ದಿಷ್ಟ ಪತ್ರಿಕೆ(ಶೇ.85ರಷ್ಟು ಹುದ್ದೆಗಳ), ಅ.5ಕ್ಕೆ ನಿರ್ದಿಷ್ಟ ಪತ್ರಿಕೆ(ಶೇ.15ರಷ್ಟು ಹುದ್ದೆಗಳ)ಗಳ ಪರೀಕ್ಷೆಗಳು ನಡೆಯಲಿವೆ ಎಂಬ ಮಾಹಿತಿ ನೀಡಿದ್ದಾರೆ.
ಆಸಕ್ತ ಅಭ್ಯರ್ಥಿಗಳು ಆಯೋಗದ ಅಧಿಕೃತ ಜಾಲತಾಣ https://kpsc.kar.nic.in/time-table.htmlಕ್ಕೆ ಭೇಟಿ ನೀಡುವ ಮೂಲಕ ವೇಳಾಪಟ್ಟಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
Please