ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ 97 ಹೈ.ಕ. ಸ್ಥಳೀಯ ವೃಂದದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಾಖಲಾತಿ ಪರಿಶೀಲನೆಗೆ 1:3ರ ಅನುಪಾತದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ(ಜು.7)ದಂದು ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಡಾ.ವಿಶಾಲ್.ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಮಾರ್ಚ್ 13ರಂದು ಅಧಿಸೂಚಿಸಿ, ನವೆಂಬರ್ 17ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಸದರಿ ನೇಮಕಾತಿಗಾಗಿ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳ ಪಟ್ಟಿಯನ್ನು ಆಯೋಗದ ವೆಬ್ಸೈಟ್ https://kpsc.kar.nic.in/eligibility-list.htmlಗೆ ಭೇಟಿ ನೀಡುವ ಮೂಲಕ ಪರೀಶಿಲನೆ ಮಾಡಬಹುದಾಗಿದೆ.
ಅರ್ಹತೆ ಪಡೆದ ಅಭ್ಯರ್ಥಿಳಿಗಾಗಿ ದಾಖಲೆ ಪರಿಶೀಲನಯ ವೇಳಾಪಟ್ಟಿಯನ್ನು ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹತಾ ಪಟ್ಟಿಯ ಪಿಡಿಎಫ್ ಲಿಂಕ್ ಈ ಸುದ್ದಿಯ ಕೊನೆಯಲ್ಲಿ ‘Important Direct Links’ ಶೀರ್ಷಿಕೆಯಡಿಯಲ್ಲಿ ನೀಡಲಾಗಿದೆ. ನೇರವಾಗಿ ಅಲ್ಲಿ ಕ್ಲಿಕ್ ಮಾಡುವ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
How to Download KPSC PDO (HK) Eligible List 2025
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಅರ್ಹತಾ ಪಟ್ಟಿಯನ್ನು ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು;
ಮೊದಲು ಅಧಿಕೃತ ಜಾಲತಾಣ https://kpsc.kar.nic.in/ಕ್ಕೆ ಭೇಟಿ ನೀಡಿ
ಮುಖಪುಟದಲ್ಲಿ “ಹೊಸದು ಏನು?/ What is New” ಎಂದುದರ ಅಡಿಯಲ್ಲಿ “ದಿನಾಂಕ: 15.03.2024 ರಲ್ಲಿ ಆಯೋಗವು ಅಧಿಸೂಚಿಸಲಾದ ಗ್ರಾಮೀಣಾಭಿವೃಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ [HK] ಹುದ್ದೆಗಳಿಗೆ [1:3] ಅರ್ಹತರಾದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ / List of [1:3] candidates eligible for the post of Panchayath Development Officer in the department of Rural Development & Panchayath Raj is published” ಹುಡುಕಿ, ಮೇಲೆ ಕ್ಲಿಕ್ ಮಾಡುವ ಮೂಲಕ ಅಧಿಕೃತ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ.
ಅಥವಾ
ಮುಖಪುಟದಲ್ಲಿ ‘ಪಟ್ಟಿಗಳು‘ –>> “ಅರ್ಹತಾ ಪಟ್ಟಿಗಳು” –>> “Eligibility List for the post of panchayath development officer (hk)” ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಹತಾ ಪಟ್ಟಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
Jobs