ಹೈದ್ರಾಬಾದ್ ಕರ್ನಾಟಕ ವೃಂದದ ಮೋಟಾರು ವಾಹನ ನಿರೀಕ್ಷಕ 6 ಹುದ್ದೆಗಳ ನೇಮಕಾತಿ ಸಂಬಂಧ ಜೂ.25 ಮತ್ತು 26 ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರವನ್ನು ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯದರ್ಶಿ ಡಾ.ವಿಶಾಲ್.ಆರ್ ತಿಳಿಸಿದ್ದಾರೆ.
ಆಯೋಗವು 2024ರ ಮಾ.14ರಂದು ಅಧಿಸೂಚಿಸಲಾದ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಲ್ಲಿನ ಗ್ರೂಪ್ ಸಿ ವೃಂದದ ಮೋಟಾರು ವಾಹನ ನಿರೀಕ್ಷಕರು(ಹೈದ್ರಾಬಾದ್ ಕರ್ನಾಟಕ ವೃಂದ)ಹುದ್ದೆಗಳ ಭರ್ತಿ ಸಂಬಂಧ ಕನ್ನಡ ಭಾಷಾ ಜೂ.25 ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಜೂ.26ಕ್ಕೆ ನಡೆಯಲಿವೆ. ಸದರಿ ಪರೀಕ್ಷೆಯ ಪ್ರವೇಶ ಪತ್ರವನ್ನು ಅಭ್ಯರ್ಥಿಗಳು ಜೂ.20 ರಿಂದ KPSC ಅಧಿಕೃತ ಜಾಲತಾಣ http://kpsc.kar.nic.inಗೆ ಭೇಟಿ ನೀಡಿ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.



