KPTCL Physical Test Hall Ticket 2025: ಏ.28 ರಿಂದ ಸಹನಾ ಶಕ್ತಿ ಪರೀಕ್ಷೆಯ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿ!

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

ಫಾಲೋ ಮಾಡಿ

KPTCL Physical Test Hall Ticket 2025
KPTCL Physical Test Hall Ticket 2025

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳ ನೇಮಕಾತಿಗೆ ಸಂಬಂಧ ಸಹನಾ ಶಕ್ತಿ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ 1:5 ಅನುಪಾತದ ಪಟ್ಟಿ ಹಾಗೂ ಶೇಕಡಾವಾರು ಕಟ್-ಆಫ್ ಅಂಕಗಳನ್ನು ಪ್ರಕಟಿಸಲಾಗಿದೆ.

ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆ ನೇಮಕಾತಿಯ ಮೊದಲನೇ ಹಂತದ ದಾಖಲಾತಿ ಪರಿಶೀಲನೆಯ ನಂತರ, ಸಹನಾ ಶಕ್ತಿ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ 1:5 ಅನುಪಾತದ ಪಟ್ಟಿ ಹಾಗೂ ಶೇಕಡಾವಾರು ಕಟ್-ಆಫ್ ಅಂಕಗಳನ್ನು ಸಿದ್ಧಪಡಿಸಿ ಕವಿಪ್ರನಿನಿ ವೆಬ್‌ಸೈಟ್ kptcl.karnataka.gov.in ನಲ್ಲಿ ಪ್ರಕಟಿಸಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ಪಟ್ಟಿಯು ಆಯ್ಕೆ ಪಟ್ಟಿಯಾಗಿರುವುದಿಲ್ಲ ಹಾಗೂ ಈ ಪಟ್ಟಿಯಲ್ಲಿನ ಅಭ್ಯರ್ಥಿಗಳ ಆಯ್ಕೆಯು ಅವರ ದಾಖಲಾತಿ ಸಲ್ಲಿಕೆ ಹಾಗೂ ಸಹನಾ ಶಕ್ತಿ ಪರೀಕ್ಷೆಯ ಅರ್ಹತೆಗೆ ಒಳಪಟ್ಟಿರುತ್ತದೆ. ಆದಾಗ್ಯೂ, ಮೊದಲನೇ ಹಂತದಲ್ಲಿ ದಾಖಲಾತಿಗಳನ್ನು ಆನ್ಲೈನ್ ಮೂಲಕ ಅಪ್-ಲೋಡ್ ಮಾಡದೇ ಇರುವ ಅಭ್ಯರ್ಥಿಗಳನ್ನು ಸಹ ಪ್ರಸ್ತುತ 1:5 ಅನುಪಾತದ ಪಟ್ಟಿಯನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಪರಿಗಣಿಸಲಾಗಿರುತ್ತದೆ.

ದಿನಾಂಕ – 05-05-2025 ರಿಂದ 08-05-2025 ರವರೆಗೆ ಬೆಂಗಳೂರು, ಬಾಗಲಕೋಟೆ, ಬೆಳಗಾವಿ ಮತ್ತು ಕಲಬುರಗಿಯ ವಿವಿಧ ಕೇಂದ್ರಗಳಲ್ಲಿ ಸಹನಾ ಶಕ್ತಿ ಪರೀಕ್ಷೆಯನ್ನು ನಡೆಸಲಾಗುವುದು. ಪ್ರತಿ ಅಭ್ಯರ್ಥಿಯ ಸಹನಾ ಶಕ್ತಿ ಪರೀಕ್ಷೆಯ ಕರೆ ಪತ್ರಗಳನ್ನು ಕವಿಪ್ರನಿನಿ ವೆಬ್‌ಸೈಟ್ kptcl.karnataka.gov.in ನಲ್ಲಿ ಏಪ್ರಿಲ್ 28, 2025 ರಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ.

KPTCL Physical Test Dates 2025

ಸಹನಾ ಶಕ್ತಿ ನಡೆಯುವ ಪ್ರಮುಖ ದಿನಾಂಕಗಳು ಈ ಕೆಳಗೆ ನೀಡಲಾಗಿದೆ.

ದಿನಾಂಕ 05.05.2025 ರಿಂದ 07.05.2025ರವರೆಗೆಬೆಂಗಳೂರಿನ ನೃಪತುಂಗ ರಸ್ತೆ, YMCA ಕ್ರೀಡಾಂಗಣದಲ್ಲಿ ಸಹನಾ ಶಕ್ತಿ ಪರೀಕ್ಷೆಯನ್ನು ನಡೆಸಲಾಗುವುದು.

ದಿನಾಂಕ 05.05.2025 ರಿಂದ 07.05.2025 ರವರೆಗೆಕಲಬುರ್ಗಿಯ ವಿಶ್ವವಿದ್ಯಾಲಯ ಸೇಡಂ ರಸ್ತೆಯ ಜ್ಞಾನಗಂಗಾ ಗುಲ್ಬರ್ಗಿ ಹೊರ ಕ್ರೀಡಾಂಗಣದಲ್ಲಿ ಸಹನಾ ಶಕ್ತಿ ಪರೀಕ್ಷೆಯನ್ನು ನಡೆಸಲಾಗುವುದು.

ದಿನಾಂಕ 05.05.2025 ರಿಂದ 08.05.2025 ರವರೆಗೆಬಾಗಲಕೋಟೆಯ ನವನಗರ ಸೆಕ್ಟರ್ 39 ಜಿಲ್ಲಾ ಕ್ರೀಡಾಂಗಣದಲ್ಲಿ ಸಹನಾ ಶಕ್ತಿ ಪರೀಕ್ಷೆಯನ್ನು ನಡೆಸಲಾಗುವುದು.

ದಿನಾಂಕ 05.05.2025 ರಿಂದ 08.05.2025 ರವರೆಗೆಬೆಳಾಗಾವಿ ನೆಹರೂನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಸಹನಾ ಶಕ್ತಿ ಪರೀಕ್ಷೆಯನ್ನು ನಡೆಸಲಾಗುವುದು.

ಇದನ್ನೂ ಓದಿ: KPTCL Result 2025 Selection List: ಸಹನಾ ಶಕ್ತಿ ಪರೀಕ್ಷೆ; 1:5 ಅಭ್ಯರ್ಥಿಗಳ ಪಟ್ಟಿ, ಕಟ್‍ ಆಫ್ ಅಂಕ ಪ್ರಕಟ

How to Download KPTCL Physical Test Hall Ticket 2025

ಹಾಲ್ ಟಿಕೆಟ್ ಡೌನ್ಲೋಡ್ ಮಾಡುವ ವಿಧಾನ;

  • ಕೆಪಿಟಿಸಿಎಲ್ ಅಧಿಕೃತ ವೆಬ್ಸೈಟ್ https://internal.kptcl.net:9018/departmentinfo3/recruitment1_kn.htmlಗೆ ಭೇಟಿ ನೀಡಿ.
  • ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆ ನೇಮಕಾತಿ 2025 ಸಹನಾ ಶಕ್ತಿ ಪರೀಕ್ಷೆಯ ಕರೆ ಪತ್ರ ಡೌನ್ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಅಪ್ಲಿಕೇಶನ್ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಸಲ್ಲಿಸಿ.
  • ಭವಿಷ್ಯದ ಉಲ್ಲೇಖಕ್ಕಾಗಿ ಕರೆ ಪತ್ರದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

⚠️ವಿಶೇಷ ಸೂಚನೆ

✅ ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವಾಗ ಅಂಕಗಳನ್ನು ತಪ್ಪಾಗಿ ನಮೂದಿಸಿದ್ದಲ್ಲಿ, ಮೂಲ ಅಂಕಪಟ್ಟಿಯನ್ನು ಪರಿಶೀಲಿಸಿ, ಅಭ್ಯರ್ಥಿಯ ಶೇಕಡಾವಾರು ಅಂಕವು ನಿಗದಿಪಡಿಸಿದ ವರ್ಗದ (category) ಕಟ್-ಆಫ್ ಗಿಂತ ಹೆಚ್ಚಿದ್ದಲ್ಲಿ ಮಾತ್ರ ಸಹನಾ ಶಕ್ತಿ ಪರೀಕ್ಷೆಗೆ ಪರಿಗಣಿಸಲಾಗುವುದು.

✅ ಒಂದು ವೇಳೆ ಶೇಕಡಾವಾರು ಅಂಕವು ನಿಗದಿಪಡಿಸಿದ ಕಟ್-ಅಫ್‌ಗಿಂತ ಕಡಿಮೆ ಇದ್ದಲ್ಲಿ ಅಂತಹವರನ್ನು ಸಹನಾ ಶಕ್ತಿ ಪರೀಕ್ಷೆಗೆ ಪರಿಗಣಿಸಲಾಗುವುದಿಲ್ಲ.

✅ ನೇರ ಮತ್ತು ಸಮತಳ ಮೀಸಲಾತಿಯಲ್ಲಿ ನೀಡಿರುವ ಮಾಹಿತಿಯು ತಪ್ಪು ಎಂದು ಕಂಡುಬಂದಲ್ಲಿ, ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

Important Direct Links:

KPTCL JPM and JSA Physical Test 2025 Notice (Dated on 23/04/2025)Download
KPTCL Physical Test Hall Ticket 2025 Download Link(Direct Link)ಏಪ್ರಿಲ್ 28 ರಿಂದ ಲಭ್ಯ
Official Websitekptcl.karnataka.gov.in
More UpdatesKarnataka Help.in

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in

Leave a Comment