2025ನೇ ಸಾಲಿನ ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆಸೆಟ್)ಯ ಪರಿಷ್ಕೃತ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನ.12ರಂದು ಬಿಡುಗಡೆ ಮಾಡಿದೆ.
ಕೆಸೆಟ್ ಪರೀಕ್ಷೆಯ ನ.2ಕ್ಕೆ ನಡೆಸಲಾಗಿತ್ತು. ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ನ.4ರಂದು ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ನ.6ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈ ಸಮಯದಲ್ಲಿ 26 ವಿಷಯಗಳಿಗೆ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ವಿಷಯ ತಜ್ಞರು ಪರಿಶೀಲಸಿದ್ದು, ಇವರ ಶಿಪಾರಸ್ಸಿನ ಮೇರೆಗೆ ಪರಿಷ್ಕೃತ ಕೀ ಉತ್ತರಗಳನ್ನು ಕೆಇಎ ವೆಬ್‌ಸೈಟ್ https://cetonline.karnataka.gov.in/kea/kset2025ನಲ್ಲಿ ಪ್ರಕಟಿಸಲಾಗಿದೆ.
ಪರಿಸರ ವಿಜ್ಞಾನ, ಗೃಹ ವಿಜ್ಞಾನ, ಎಲೆಕ್ಟ್ರಾನಿಕ್ ವಿಜ್ಞಾನ, ಭೂ ವಿಜ್ಞಾನ, ಭೂ ವಿಜ್ಞಾನ ಮತ್ತು ದೃಶ್ಯ ಕಲೆಗಳು ವಿಷಯಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಸಲ್ಲಿಕೆಯಾಗದ ಕಾರಣ ಈಗಾಗಲೇ ಪ್ರಕಟಿಸಿದ ಕೀ ಉತ್ತರಗಳಲ್ಲಿ ಬದಲಾವಣೆ ಇರುವುದಿಲ್ಲ.
–ಹೆಚ್.ಪ್ರಸನ್ನ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ
ಕೆಸೆಟ್ 2025ರ ಪರಿಷ್ಕೃತ ಕೀ ಉತ್ತರಗಳನ್ನು ಹೇಗೆ ಡೌನ್ಲೋಡ್ ಮಾಡುವುದು?
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
ಮುಖಪುಟ –>> ಪ್ರವೇಶಗಳು –>> ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್)-2025 –>> ಭೇಟಿ ನೀಡಿ.
ನಂತರ “KSET – 2025 ಪರಿಷ್ಕೃತ ಕೀ-ಉತ್ತರಗಳು. 12/11/2025” ಶಿರ್ಷೀಕೆಯಡಿ ಮೇಲೆ ಕ್ಲಿಕ್ ಮಾಡಿ. ಅಲ್ಲಿ ವಿಷಯವಾರು ಪರಿಷ್ಕೃತ ಕೀ ಉತ್ತರಗಳ ಪಿಡಿಎಫ್ ನೀಡಲಾಗಿದೆ ನಿಮಗೆ ಬೇಕಾದ ವಿಷಯದ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ
ನಾನು 2021 ರಿಂದ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ತೊಡಗಿಕೊಂಡಿರುವೆ. ನಿಮಗೆ ಮಾಹಿತಿ(ಸುದ್ದಿ)ಯನ್ನು ತಲುಪಿಸುವ ಕಾರ್ಯ ಮಾಡುವುದೇ ನನ್ನ ಧ್ಯೇಯ. ಮಾಹಿತಿ ತಲುಪಿಸುವುದರ ಜೊತೆಗೆ ನಾನು ಕೂಡಾ ಹೊಸ ಹೊಸ ಮಾಹಿತಿಯನ್ನು ತಿಳಿದುಕೊಂಡಿದ್ದೇನೆ. ಈಗಲೂ ತಿಳಿದುಕೊಳ್ಳುತ್ತಲೇ ಇದ್ದೇನೆ. ನಿರಂತರ ಕಲಿಕೆಯಲ್ಲಿ ದೋಣಿ ಸಾಗುತ್ತಿದೆ.ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ.....