WhatsApp Channel Join Now
Telegram Group Join Now

KSWDC Loan Scheme Karnataka 2024-25: ಮಹಿಳಾ ಅಭಿವೃದ್ಧಿ ನಿಗಮದಿಂದ ವಿವಿಧ ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ

KSWDC Loan Scheme Karnataka 2024 Apply Online: ಕರ್ನಾಟಕ ಹೆಲ್ಫ್ ಗೆ ಸ್ವಾಗತ ಬಂಧುಗಳೇ ಇಂದು ನಾವು “ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ”ದಿಂದ ನೀಡುವ ವಿವಿಧ ಯೋಜನೆ(KSWDC Subsidy Loan Schemes)ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಮಾಹಿತಿ ನಿಮಗೆ ಉಪಯೋಗವಾಗುತ್ತೆ ಎಂದು ನಾವು ಭಯಸಿದ್ದೇವೆ. ಈ ಮಾಹಿತಿಯನ್ನ ನಿಮ್ಮ ಸ್ನೇಹಿತರಿಗೂ ತಿಳಿಸಿ ಅವರಿಗೂ ಸಹಾಯವಾಗಲಿ. ಎಲ್ಲಾ ಮಾಹಿತಿಯನ್ನ ಗಮನವಿಟ್ಟು ಓದಿ ಅರ್ಥೈಸಿಕೊಳ್ಳಿ.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ವಿವಿಧ ಸಹಾಯಧನ ಯೋಜನೆಗಳಿಗಾಗಿ ಅರ್ಜಿ ಸಲ್ಲಿಸಬಯಸುವ ಅರ್ಹ ಫಲಾನುಭವಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ, ಜೊತೆಗೆ ನಿಮ್ಮ ಹಿತೈಶಿಗಳಿಗೂ ತಪ್ಪದೇ ಶೇರ್ ಮಾಡಿ.

Kswdc Loan Schemes Karnataka 2024-25
Kswdc Loan Schemes Karnataka 2024-25

KSWDC Loan Scheme Karnataka 2024

2024-25ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸುತ್ತಿರುವ ಈ ಕೆಳಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯಬಯಸುವವರಿಂದ ಆನ್‌ ಲೈನ್‌ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

☞ ಉದ್ಯೋಗಿನಿ ಯೋಜನೆ(Udyogini Scheme)
☞ ಚೇತನ ಯೋಜನೆ(Chetana Scheme)
☞ ಧನಶ್ರೀ ಯೋಜನೆ(Dhanashree Scheme)
☞ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ
☞ ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ

ಉದ್ಯೋಗಿನಿ ಯೋಜನೆ:

ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ:

  • ಆದಾಯ ಮಿತಿ : ರೂ. 2.00 ಲಕ್ಷಗಳು
  • ಘಟಕ ವೆಚ್ಚ : ಕನಿಷ್ಟ ರೂ. 1.00 ಲಕ್ಷದಿಂದ ಗರಿಷ್ಟ ರೂ. 3.00 ಲಕ್ಷಗಳು
  • ಸಹಾಯಧನ ಶೇ. 50 ರಷ್ಟು
  • ವಯೋಮಿತಿ 18 ರಿಂದ 55 ವರ್ಷಗಳು.

ಸಾಮಾನ್ಯ ವರ್ಗದ ಫಲಾನುಭವಿಗಳಿಗೆ:

  • ಆದಾಯ ಮಿತಿ : ರೂ. 1.50 ಲಕ್ಷಗಳು
  • ಘಟಕ ವೆಚ್ಚ : ಗರಿಷ್ಟ ರೂ. 3.00 ಲಕ್ಷಗಳು
  • ಸಹಾಯಧನ ಶೇ.30 ರಷ್ಟು
  • ವಯೋಮಿತಿ 18 ರಿಂದ 55 ವರ್ಷಗಳು.

ಚೇತನ ಯೋಜನೆ:

ದಮನಿತ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ. 30,000/-ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ.

  • ವಯೋಮಿತಿ 18 ವರ್ಷ ಮೇಲ್ಪಟ್ಟು

ಧನಶ್ರೀ ಯೋಜನೆ:

ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ರೂ. 30,000/-ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ.

  • ವಯೋಮಿತಿ 18 ರಿಂದ 60 ವರ್ಷಗಳು.

ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ:

ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ(Rehabilitation Programmes For Transgender):
ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ. 30,000/- ಗಳ ಪ್ರೋತ್ಸಾಹಧನ ನೀಡಲಾಗುತ್ತದೆ.

ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ:

ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ(Devadasi Rehabilitation Programme):
1993-94 & 2007-08 ರ ಸಮೀಕ್ಷೆಯಲ್ಲಿ ಗುರುತಿಸಿರುವ ಮಾಜಿ ದೇವದಾಸಿ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ. 30,000/- ಗಳ ಪ್ರೋತ್ಸಾಹಧನ ನೀಡಲಾಗುತ್ತದೆ.

Last Date of KSWDC Loan Scheme Online Application Form 2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Last Date:21-09-2024

ಗಮನಿಸಿ: ಅರ್ಹ ಫಲಾಪೇಕ್ಷಿಗಳು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ-ಒನ್, ಕರ್ನಾಟಕ-ಒನ್ ಹಾಗೂ ಬೆಂಗಳೂರು-ಒನ್ ನಾಗರಿಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Direct Links:

KSWDC Loan Scheme Online Apply Linksevasindhu.karnataka.gov.in
Official Website kswdc.karnataka.gov.in
More UpdatesKarnatakaHelp.in

Also Read: ಸ್ವಾವಲಂಬಿ ಸಾರಥಿ ಅರ್ಜಿ ಸಲ್ಲಿಕೆ ಪ್ರಾರಂಭ | Swavalambi Sarathi 2024 Karnataka Apply Online

Also Read: ಗಂಗಾ ಕಲ್ಯಾಣ ಉಚಿತ ಬೋರ್‌ವೇಲ್ ಯೋಜನೆ ಅರ್ಜಿ ಸಲ್ಲಿಕೆ ಪ್ರಾರಂಭ | Ganga Kalyana Yojane Online Application 2024 Apply Online

KSWDC Loan Scheme 2024 FAQs

How to Apply for Udyogini scheme in Karnataka online?

Apply online through Seva Sindhu Portal at Bangalore-One/Karnataka-One/Atalji Janasnehi Kendra and Civil Service Centers.

What is the Last Date of KSWDC Loan Scheme Karnataka 2024-25?

21-09-2024