ಪ್ರಸಕ್ತ ಸಾಲಿನ ಶೈಕ್ಷಣಿಕ ಸಹಾಯಧಕ್ಕಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಳೆದ ಮೇ 25ರ ಮೊದಲು ನೋಂದಾಯಿಸಿಕೊಂಡಿರುವ ಕಾರ್ಮಿಕರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಎಸ್ಎಸ್ಪಿ(ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ) ಪೋರ್ಟಲ್ https://ssp.postmatric.karnataka.gov.in/ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 31ರೊಳಗೆ ಸಲ್ಲಿಸಬೇಕು ಎಂದು ಮಂಡಳಿಯ ಮುಖ್ಯನಿರ್ವಹಣಾಧಿಕಾರಿ ಮತ್ತು ಕಾರ್ಯದರ್ಶಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
How to Apply for Labour Card Education Scholarship 2025?
ಅರ್ಜಿ ಸಲ್ಲಿಕೆ ಹೇಗೆ?: 2025-26ನೇ ಸಾಲಿನಲ್ಲಿ ವಿವಿಧ ಇಲಾಖೆಯ ಫಲಾನುಭವಿಗಳು ಈಗಾಗಲೇ ಎಸ್ಎಸ್ಪಿ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿರುವವರು ಪುನಃ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ. ಸಹಾಯಧನ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಕಡ್ಡಾಯವಾಗಿ ಶೈಕ್ಷಣಿಕ ಸಹಾಯಧನ ಪಡೆಯಲು ಮಂಡಳಿಯ ಹೊಸ ವೆಬ್ಸೈಟ್ https://kbocwwb.karnataka.gov.in/ ಕಾರ್ಮಿಕ ಕಾರ್ಡ್ ನೋಂದಣಿ ಸಂಖ್ಯೆ ನಮೂದಿಸಿ, ಆಧಾರ್ ಲಿಂಕ್ ಮಾಡಬೇಕು. ತಪ್ಪದೇ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರಬೇಕು ಜೊತೆಗೆ ಕಡ್ಡಾಯವಾಗಿ ಎನ್ಪಿಸಿಐ ಮ್ಯಾಪಿಂಗ್ ಮಾಡಿಸಿರಬೇಕು.
ಗಮನಿಸಿ:ಕಾರ್ಮಿಕ ಕಾರ್ಡ್ ಯಾರ ಹೆಸರಲ್ಲಿ ನೋಂದಣಿಯಾಗಿರುತ್ತದೆಯೋ ಅವರ(ನಿಮ್ಮ ತಂದೆ/ತಾಯಿ) ಬ್ಯಾಂಕ್ ಖಾತೆಗೆ ಹಣ ಜಮೆ ಆಗುತ್ತದೆ.
ನಾನು 2021 ರಿಂದ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ತೊಡಗಿಕೊಂಡಿರುವೆ. ನಿಮಗೆ ಮಾಹಿತಿ(ಸುದ್ದಿ)ಯನ್ನು ತಲುಪಿಸುವ ಕಾರ್ಯ ಮಾಡುವುದೇ ನನ್ನ ಧ್ಯೇಯ. ಮಾಹಿತಿ ತಲುಪಿಸುವುದರ ಜೊತೆಗೆ ನಾನು ಕೂಡಾ ಹೊಸ ಹೊಸ ಮಾಹಿತಿಯನ್ನು ತಿಳಿದುಕೊಂಡಿದ್ದೇನೆ. ಈಗಲೂ ತಿಳಿದುಕೊಳ್ಳುತ್ತಲೇ ಇದ್ದೇನೆ. ನಿರಂತರ ಕಲಿಕೆಯಲ್ಲಿ ದೋಣಿ ಸಾಗುತ್ತಿದೆ.ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ.....
Driver
..
Yes
Tenth pass