ಮದುವೆಗೆ ಸಿಗಲಿದೆ ಸರ್ಕಾರದಿಂದ ಸಹಾಯಧನ! ಪಡೆಯುವುದು ಹೇಗೆ?, ಅರ್ಜಿ ಸಲ್ಲಿಕೆಗೆ ಹೇಗೆ?

By Mahima Bhat

Published On:

IST

ಫಾಲೋ ಮಾಡಿ

Labour Card Marriage Assistance Application 2025
Labour Card Marriage Assistance Application 2025

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಡ ಮಂಡಳಿ ನೋಂದಾಯಿತ ಕಾರ್ಮಿಕರಿಗೆ ಸಿಹಿಸುದ್ದಿ ನೀಡಿದ್ದು, ಮಂಡಳಿಯು ನೋಂದಾಯಿತ ಕಾರ್ಮಿಕರ ಮದುವೆಗೆ ಅಥವಾ ಅವರ ಮಕ್ಕಳ ಮದುವೆಗೆ ಸಹಾಯಧನವನ್ನು ನೀಡುತ್ತದೆ.

ಕಾರ್ಮಿಕರ ಮದುವೆ ಅಥವಾ ಅವರ ಮಕ್ಕಳ ಮದುವೆಗೆ ಮ೦ಡಳಿಯು ಸಹಾಯಧನವನ್ನು ನೀಡುತ್ತದೆ. ನೋ೦ದಣಿ ದಿನಾ೦ಕದಿ೦ದ ಮದುವೆ ದಿನಾ೦ಕದವರೆಗೆ ಮ೦ಡಳಿಯಲ್ಲಿ ಕನಿಷ್ಠ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು.

ಒ೦ದು ಕುಟು೦ಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಸಹಾಯಧನವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ತಲುಪಿರಬೇಕು.ಮದುವೆಯ ದಿನಾ೦ಕದಿಂದ 6 ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕು.

ಕಾರ್ಮಿಕರ ಮದುವೆ ಅಥವಾ ಅವರ ಎರಡು ಮಕ್ಕಳ ಮದುವೆಗೆ ಕಟ್ಟಡ ಕಾರ್ಮಿಕ ಮಂಡಳಿಯು 60,000/- ಸಹಾಯಧನವನ್ನ ನೀಡುತ್ತದೆ. ಹಾಗು ಮಂಡಳಿಯ ವತಿಯಿಂದ ನೋಂದಣಿ ಮಾಡಿಕೊಂಡಿರುವ ಕಟ್ಟಡ ಕಾರ್ಮಿಕರು ತಮಗೂ ಹಾಗೂ ತಮ್ಮ ಮಕ್ಕಳ ಮದುವೆಗಾಗಿ ಸಹಾಯಧನ ಪಡೆಯಬಹುದು.

ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ನೋಂದಣಿಗೆ ನಮೂನೆ 5-1ರ ಅರ್ಜಿಯಲ್ಲಿ ಉದ್ಯೋಗ ದೃಢೀಕರಣ ಪತ್ರ / ಸ್ವಯಂ ದೃಢೀಕರಣ ಪತ್ರ, ಭಾವಚಿತ್ರ, ವಯಸ್ಸಿನ ದಾಖಲೆ, ತನ್ನ ಹಾಗೂ ಅವಲಂಬಿತ ಕುಟುಂಬದವರ ಆಧಾರ್ ಕಾರ್ಡ್ ಪ್ರತಿ ಲಗತ್ತಿಸಿ ಸಲ್ಲಿಸಿದರೆ ನೋಂದಣಿಯಾಗಲಿದೆ. ಬಳಿಕ ಮೂರು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಿಸಿಕೊಳ್ಳಬೇಕು.

ನೋಂದಾಯಿತ ಅರ್ಹ ಫಲಾನುಭವಿಗಳು https://kbocwwb.karnataka.gov.in/ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

Important Direct Links:

Labour card Marriage Assistance Online Application Form 2025 LinkApply Now
Official Websitekarbwwb.karnataka.gov.in
More UpdatesKarnatakaHelp.in

About the Author

ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪಡೆದು ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.‌ ಸದ್ಯ ಪಿಎಚ್.ಡಿ ಮಾಡುತ್ತಿದ್ದಾರೆ. 4 ವರ್ಷ ಪ್ರಿಲೈನ್ಸ್ ಕಂಟೆಂಟ್ ರೈಟರ್ ಆಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಯಕ್ಷಗಾನ, ನಾಟಕ, ಬರವಣಿಗೆ ಆಸಕ್ತಿ ವಿಷಯಗಳು.

Leave a Comment