LIC AAO Generalist 2025: ವಿಮಾ ಕಂಪನಿಯಲ್ಲಿ ಆಡಳಿತಾಧಿಕಾರಿಗಳ ಭರ್ತಿ, ಅರ್ಜಿ ಆಹ್ವಾನ
ಜೀವ ವಿಮಾ ಕಂಪನಿಯಲ್ಲಿ ಉದ್ಯೋಗಾವಕಾಶ! ಒಟ್ಟು 350 ಸಹಾಯಕ ಆಡಳಿತ ಅಧಿಕಾರಿ ಹುದ್ದೆಗಳ ಅಧಿಸೂಚನೆ ಬಿಡುಗಡೆಯಗಿದ್ದು, ಅರ್ಜಿ ಸಲ್ಲಿಕೆಯ ಮಾನದಂಡಗಳೇನು?, ಮುಖ್ಯ ದಿನಾಂಕಗಳೇನು?, ಅರ್ಜಿ ಸಲ್ಲಿಕೆ ಹೇಗೆ? ವಿವರವಾದ ಮಾಹಿತಿ ಇಲ್ಲಿದೆ.
ವಿಮಾ ಕಂಪನಿಯಲ್ಲಿ ಆಡಳಿತಾಧಿಕಾರಿಗಳ ಭರ್ತಿಗಾಗಿ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪುಟ ಚಿ್ತ್ರ.
ಭಾರತೀಯ ಜೀವ ವಿಮಾ ನಿಗಮ(LIC)ದಲ್ಲಿ ಸಹಾಯಕ ಆಡಳಿತ ಅಧಿಕಾರಿ(AAO-ಜನರಲಿಸ್ಟ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 350 ಸಹಾಯಕ ಆಡಳಿತಾಧಿಕಾರಿ (ಜನರಲಿಸ್ಟ್) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು IBPS ಅಧಿಕೃತ ವೆಬ್ಸೈಟ್ https://ibpsonline.ibps.in/licjul25/ಗೆ ಭೇಟಿ ನೀಡುವ ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಬಹುದು.