ಜೀವ ವಿಮಾ ನಿಗಮ (LIC)ದಲ್ಲಿ ಸ.ಎಂಜಿನಿಯರ್‌, ಆಡಳಿತಾಧಿಕಾರಿಗಳ ನೇಮಕಾತಿ, ಅಪ್ಲೈ ಮಾಡಿ

ಎಲ್.ಐ.ಸಿ. ನಿಗಮದಲ್ಲಿ ಒಟ್ಟು 81 ಸಹಾಯಕ ಇಂಜಿನಿಯರ್​ ಮತ್ತು 410 ಸಹಾಯಕ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತೆಗಳೇನು, ಪ್ರಮುಖ ದಿನಾಂಕಗಳೇನು? ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

Published on:

ಭಾರತೀಯ ಜೀವ ವಿಮಾ ನಿಗಮ (LIC)ವು ಸಹಾಯಕ ಎಂಜಿನಿಯರ್‌ ಮತ್ತು ಸಹಾಯಕ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.

ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 491 ಸಹಾಯಕ ಎಂಜಿನಿಯರ್‌ಗಳು (AE ಸಿವಿಲ್/ಎಲೆಕ್ಟ್ರಿಕಲ್) ಮತ್ತು ಸಹಾಯಕ ಆಡಳಿತಾಧಿಕಾರಿ (AAO) ತಜ್ಞರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು IBPS ಅಧಿಕೃತ ವೆಬ್ಸೈಟ್ https://ibpsonline.ibps.in/licjul25/ಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಆಗಸ್ಟ್ 16, 2025
  • ಅರ್ಜಿ ಸಲ್ಲಿಸಲು‌ ಕೊನೆಯ ದಿನಾಂಕ – ಸೆಪ್ಟೆಂಬರ್ 08, 2025

ಶೈಕ್ಷಣಿಕ ಅರ್ಹತೆ:

✓ AE (ಸಿವಿಲ್) ಹುದ್ದೆಗೆ – ಅಭ್ಯರ್ಥಿಯು ಬಿ.ಟೆಕ್/ಬಿ.ಇ. (ಸಿವಿಲ್) ಪದವಿ ಪೂರ್ಣಗೊಳಿಸಿರಬೇಕು.

✓ AE (ಎಲೆಕ್ಟ್ರಿಕಲ್) ಹುದ್ದೆಗೆ – ಅಭ್ಯರ್ಥಿಯು ಬಿ.ಟೆಕ್/ಬಿ.ಇ. (ಎಲೆಕ್ಟ್ರಿಕಲ್) ಪದವಿ ಪೂರ್ಣಗೊಳಿಸಿರಬೇಕು.

✓ AAO (ಚಾರ್ಟರ್ಡ್ ಅಕೌಂಟೆಂಟ್)ಹುದ್ದೆಗೆ – ಅಭ್ಯರ್ಥಿಯು ಪದವಿ ಪಡೆದಿರಬೇಕು ಮತ್ತು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

✓ AAO (ಕಂಪನಿ ಸೆಕ್ರೆಟರಿ) ಹುದ್ದೆಗೆ – ಪದವಿ ಪೂರ್ಣಗೊಳಿಸಿರಬೇಕು ಮತ್ತು ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆಯ (ICSI) ಅರ್ಹ ಸದಸ್ಯನಾಗಿರಬೇಕು.

✓ AAO (ಆಕ್ಚುರಿಯಲ್) ಹುದ್ದೆಗೆ – ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿಪೂರ್ಣಗೊಳಿಸಿರಬೇಕು.

✓ AAO (ವಿಮಾ ತಜ್ಞರು) ಹುದ್ದೆಗೆ – ಯಾವುದೇ ವಿಭಾಗದಲ್ಲಿ ಪದವಿ ಮತ್ತು ಜೀವ ವಿಮಾ (ಫೆಲೋಶಿಪ್ ಆಫ್ ಇಂಡಿಯಾ ಇನ್ಶುರೆನ್ಸ್ ಇನ್ಸ್ಟಿಟ್ಯೂಟ್ (ಲೈಫ್) ನಲ್ಲಿ ವೃತ್ತಿಪರ ಅರ್ಹತೆಯನ್ನು ಹೊಂದಿರಬೇಕು.

✓ AAO (ಕಾನೂನು) ಹುದ್ದೆಗೆ – ಕನಿಷ್ಠ 50% ಅಂಕಗಳೊಂದಿಗೆ ಕಾನೂನು ಪದವಿ ಪೂರ್ಣಗೊಳಿಸಿರಬೇಕು.

ಹೆಚ್ಚಿನ ವಿದ್ಯಾರ್ಹತೆಗಳಿಗಾಗಿ ಅಭ್ಯರ್ಥಿಗಳು ತಪ್ಪದೇ ಅಧಿಕೃತ ಅಧಿಸೂಚನೆಯನ್ನು ಓದಬೇಕು.

ವಯೋಮಿತಿ:

01-08-2025 ರಂತೆ;

  • ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು
  • ಗರಿಷ್ಠ ವಯಸ್ಸಿನ ಮಿತಿ – 30/32 ವರ್ಷಗಳು (ಹುದ್ದೆಗಳ ಅನ್ವಯ)

ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ವಿಧಾನ:

ಹಂತ I→ AAO (ತಜ್ಞರು) ನೇಮಕಾತಿಗಾಗಿ ಪ್ರಾಥಮಿಕ ಪರೀಕ್ಷೆ
ಹಂತ II→ AAO (ತಜ್ಞರು) ನೇಮಕಾತಿಗಾಗಿ ಮುಖ್ಯ ಪರೀಕ್ಷೆ
ಹಂತ-III→ ಸಂದರ್ಶನ, ನೇಮಕಾತಿ ಪೂರ್ವ ವೈದ್ಯಕೀಯ ಪರೀಕ್ಷೆ, SC/ST/OBC/PwBD ಅಭ್ಯರ್ಥಿಗಳಿಗೆ ಪೂರ್ವ ಪರೀಕ್ಷಾ ತರಬೇತಿ

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 88,635ರೂ. ವರೆಗೆ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂ ಎಸ್ ಅಭ್ಯರ್ಥಿಗಳಿಗೆ – 700ರೂ.
  • ಪ.ಜಾತಿ, ಪ.ಪಂಗಡ, ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 85ರೂ.

ಇದನ್ನೂ ಓದಿ: LIC AAO Generalist 2025: ವಿಮಾ ಕಂಪನಿಯಲ್ಲಿ ಆಡಳಿತಾಧಿಕಾರಿಗಳ ಭರ್ತಿ, ಅರ್ಜಿ ಆಹ್ವಾನ

How to Apply for LIC AE AAO Specialist Recruitment 2025

ಅರ್ಜಿ‌ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ;

  1. IBPS ಅಧಿಕೃತ ವೆಬ್ಸೈಟ್ https://ibpsonline.ibps.in/licjul25/ ಗೆ ಭೇಟಿ ನೀಡಿ.
  2. ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
  3. ಸಹಾಯಕ ಎಂಜಿನಿಯರ್‌ಗಳು (ಎ.ಇ) ಸಿವಿಲ್/ಎಲೆಕ್ಟ್ರಿಕಲ್ ಮತ್ತು ಸಹಾಯಕ ಆಡಳಿತಾಧಿಕಾರಿಗಳು (ತಜ್ಞರು) ನೇಮಕಾತಿ- 2025 ಅರ್ಜಿ ನಮೂನೆ ಆಯ್ಕೆ ಮಾಡಿ.
  4. ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
  5. ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ. ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
  6. ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websitelicindia.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

2 thoughts on “ಜೀವ ವಿಮಾ ನಿಗಮ (LIC)ದಲ್ಲಿ ಸ.ಎಂಜಿನಿಯರ್‌, ಆಡಳಿತಾಧಿಕಾರಿಗಳ ನೇಮಕಾತಿ, ಅಪ್ಲೈ ಮಾಡಿ”

Leave a Comment