ಜೀವ ವಿಮಾ ನಿಗಮ (LIC)ದಲ್ಲಿ ಸ.ಎಂಜಿನಿಯರ್, ಆಡಳಿತಾಧಿಕಾರಿಗಳ ನೇಮಕಾತಿ, ಅಪ್ಲೈ ಮಾಡಿ
ಎಲ್.ಐ.ಸಿ. ನಿಗಮದಲ್ಲಿ ಒಟ್ಟು 81 ಸಹಾಯಕ ಇಂಜಿನಿಯರ್ ಮತ್ತು 410 ಸಹಾಯಕ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತೆಗಳೇನು, ಪ್ರಮುಖ ದಿನಾಂಕಗಳೇನು? ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
ಜೀವ ವಿಮಾ ನಿಗಮ (LIC)ದಲ್ಲಿ ಸ.ಎಂಜಿನಿಯರ್, ಆಡಳಿತಾಧಿಕಾರಿಗಳ ನೇಮಕಾತಿ, ಅಪ್ಲೈ ಮಾಡಿ
ಭಾರತೀಯ ಜೀವ ವಿಮಾ ನಿಗಮ (LIC)ವು ಸಹಾಯಕ ಎಂಜಿನಿಯರ್ ಮತ್ತು ಸಹಾಯಕ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.
ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 491 ಸಹಾಯಕ ಎಂಜಿನಿಯರ್ಗಳು (AE ಸಿವಿಲ್/ಎಲೆಕ್ಟ್ರಿಕಲ್) ಮತ್ತು ಸಹಾಯಕ ಆಡಳಿತಾಧಿಕಾರಿ (AAO) ತಜ್ಞರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು IBPS ಅಧಿಕೃತ ವೆಬ್ಸೈಟ್ https://ibpsonline.ibps.in/licjul25/ಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಆಗಸ್ಟ್ 16, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 08, 2025
ಶೈಕ್ಷಣಿಕ ಅರ್ಹತೆ:
✓ AE (ಸಿವಿಲ್) ಹುದ್ದೆಗೆ – ಅಭ್ಯರ್ಥಿಯು ಬಿ.ಟೆಕ್/ಬಿ.ಇ. (ಸಿವಿಲ್) ಪದವಿ ಪೂರ್ಣಗೊಳಿಸಿರಬೇಕು.
✓ AE (ಎಲೆಕ್ಟ್ರಿಕಲ್) ಹುದ್ದೆಗೆ – ಅಭ್ಯರ್ಥಿಯು ಬಿ.ಟೆಕ್/ಬಿ.ಇ. (ಎಲೆಕ್ಟ್ರಿಕಲ್) ಪದವಿ ಪೂರ್ಣಗೊಳಿಸಿರಬೇಕು.
✓ AAO (ಚಾರ್ಟರ್ಡ್ ಅಕೌಂಟೆಂಟ್)ಹುದ್ದೆಗೆ – ಅಭ್ಯರ್ಥಿಯು ಪದವಿ ಪಡೆದಿರಬೇಕು ಮತ್ತು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
✓ AAO (ಕಂಪನಿ ಸೆಕ್ರೆಟರಿ) ಹುದ್ದೆಗೆ – ಪದವಿ ಪೂರ್ಣಗೊಳಿಸಿರಬೇಕು ಮತ್ತು ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆಯ (ICSI) ಅರ್ಹ ಸದಸ್ಯನಾಗಿರಬೇಕು.
✓ AAO (ಆಕ್ಚುರಿಯಲ್) ಹುದ್ದೆಗೆ – ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿಪೂರ್ಣಗೊಳಿಸಿರಬೇಕು.
✓ AAO (ವಿಮಾ ತಜ್ಞರು) ಹುದ್ದೆಗೆ – ಯಾವುದೇ ವಿಭಾಗದಲ್ಲಿ ಪದವಿ ಮತ್ತು ಜೀವ ವಿಮಾ (ಫೆಲೋಶಿಪ್ ಆಫ್ ಇಂಡಿಯಾ ಇನ್ಶುರೆನ್ಸ್ ಇನ್ಸ್ಟಿಟ್ಯೂಟ್ (ಲೈಫ್) ನಲ್ಲಿ ವೃತ್ತಿಪರ ಅರ್ಹತೆಯನ್ನು ಹೊಂದಿರಬೇಕು.
✓ AAO (ಕಾನೂನು) ಹುದ್ದೆಗೆ – ಕನಿಷ್ಠ 50% ಅಂಕಗಳೊಂದಿಗೆ ಕಾನೂನು ಪದವಿ ಪೂರ್ಣಗೊಳಿಸಿರಬೇಕು.
ಹೆಚ್ಚಿನ ವಿದ್ಯಾರ್ಹತೆಗಳಿಗಾಗಿ ಅಭ್ಯರ್ಥಿಗಳು ತಪ್ಪದೇ ಅಧಿಕೃತ ಅಧಿಸೂಚನೆಯನ್ನು ಓದಬೇಕು.
ವಯೋಮಿತಿ:
01-08-2025 ರಂತೆ;
ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 30/32 ವರ್ಷಗಳು (ಹುದ್ದೆಗಳ ಅನ್ವಯ)
ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ವಿಧಾನ:
ಹಂತ I→ AAO (ತಜ್ಞರು) ನೇಮಕಾತಿಗಾಗಿ ಪ್ರಾಥಮಿಕ ಪರೀಕ್ಷೆ ಹಂತ II→ AAO (ತಜ್ಞರು) ನೇಮಕಾತಿಗಾಗಿ ಮುಖ್ಯ ಪರೀಕ್ಷೆ ಹಂತ-III→ ಸಂದರ್ಶನ, ನೇಮಕಾತಿ ಪೂರ್ವ ವೈದ್ಯಕೀಯ ಪರೀಕ್ಷೆ, SC/ST/OBC/PwBD ಅಭ್ಯರ್ಥಿಗಳಿಗೆ ಪೂರ್ವ ಪರೀಕ್ಷಾ ತರಬೇತಿ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 88,635ರೂ. ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂ ಎಸ್ ಅಭ್ಯರ್ಥಿಗಳಿಗೆ – 700ರೂ.
ಪ.ಜಾತಿ, ಪ.ಪಂಗಡ, ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 85ರೂ.
1 thought on “ಜೀವ ವಿಮಾ ನಿಗಮ (LIC)ದಲ್ಲಿ ಸ.ಎಂಜಿನಿಯರ್, ಆಡಳಿತಾಧಿಕಾರಿಗಳ ನೇಮಕಾತಿ, ಅಪ್ಲೈ ಮಾಡಿ”
Your writing is like a breath of fresh air in the often stale world of online content. Your unique perspective and engaging style set you apart from the crowd. Thank you for sharing your talents with us.
Your writing is like a breath of fresh air in the often stale world of online content. Your unique perspective and engaging style set you apart from the crowd. Thank you for sharing your talents with us.